ಬೆಂಗಳೂರು ಮೂಲದ ರಿಕಿಕೇಜ್‍ಗೆ 3ನೇ ಗ್ರ್ಯಾಮಿ ಪ್ರಶಸ್ತಿ ಗರಿ

Social Share

ಲಾಸ್ ಏಂಜಲ್ಸ್,ಫೆ.6- ಭಾರತೀಯ ಮೂಲದ ಸಂಗೀತ ನಿರ್ದೇಶಕ ರಿಕಿಕೇಜ್ ಮೂರನೇ ಭಾರಿಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದು, ಅದನ್ನು ತವರು ನೆಲಕ್ಕೆ ಸಮರ್ಪಿಸಿದ್ದಾರೆ. 65ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಗಳು ಪ್ರಕಟವಾಗಿದೆ.

ಬೆಂಗಳೂರು ಮೂಲದ ಅಮೆರಿಕಾ ಸಂಜಾತ ಸಂಗೀತಗಾರ ರಿಕಿಕೇಜ್, ತಮ್ಮ ಆಲ್ಬಂ ತಯಾರಿಕೆಗೆ ಸಹಕರಿಸಿದ ಬ್ರಿಟಿಷ್ ರಾಕ್ ಬ್ಯಾಂಡ್ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಡಿವೈನ್ ಟೈಡ್ಸ್ (ಆಧ್ಯಾತ್ಮಿಕ ಅಲೆಗಳು) ಶಿರ್ಷಿಕೆಯಡಿ ತಯಾರಿಸಿದ ಆಡಿಯೊ ಆಲ್ಬಮ್‍ನಲ್ಲಿ ಯಶಸ್ವಿ ಜೋಡಿ ಗ್ರಾಮಫೋನ್ ಟ್ರೋಫಿಯನ್ನು ಗಳಿಸಿದೆ. ಅತ್ಯುತ್ತಮ ಹೊಸ ಯುಗದ ಆಲ್ಬಂ ವಿಭಾಗದಲ್ಲಿ ಕಳೆದ ವರ್ಷ ಇದೇ ಆಲ್ಬಂಗಾಗಿ ಅವರು ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದರು.

ಭಾರತದಲ್ಲಿ ನಡೆಯುವ IMF ದುಂಡು ಮೇಜಿನ ಸಭೆಗೆ ಚೀನಾ ಹಣಕಾಸು ಸಚಿವರು

ರಿಕಿಕೇಜ್ ಪ್ರಶಸ್ತಿ ಪಡೆದ ಸಂತೋಷವನ್ನು ಟ್ವೀಟ್‍ನಲ್ಲಿ ಹಂಚಿಕೊಂಡಿದ್ದು, ಈ ಮನ್ನಣೆಗೆ ತಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ. ಈಗಷ್ಟೇ ನನ್ನ 3ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದೇನೆ. ಅತ್ಯಂತ ಕೃತಜ್ಞನಾಗಿದ್ದೇನೆ, ಮೂಕನಾಗಿದ್ದೇನೆ. ನಾನು ಈ ಪ್ರಶಸ್ತಿಯನ್ನು ಭಾರತಕ್ಕೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಕ್ರಿಸ್ಟಿನಾ ಅಗುಲೆರಾ (ಅಗುಲೆರಾ), ದಿ ಚೈನ್ಸ್ಮೋಕರ್ಸ್ (ಮೆಮೊರೀಸ್… ಡೋಂಟ್ ಓಪನ್), ಜೇನ್ ಇರಾ ಬ್ಲೂಮ್ (ಇನ್ವಿಸಿಬಲ್-ಫೆÇೀಕಸ್ 1), ಮತ್ತು ನಿಡಾರೋಸ್ಡೊಮೆನ್ಸ್ ಜೆಂಟೆಕೋರ್ ಟ್ರೊಂಡೆಹೈಮ್ಸೊಲಿಸ್ಟೆನ್ (ತುವಾಹ್ಯುನ್ – ಗಾಯಗೊಂಡ ಜಗತ್ತಿಗೆ ಸಂತೋಷ) ಇದೇ ವರ್ಗದಲ್ಲಿ ನಾಮನಿರ್ದೇಶನಗೊಂಡ ಇತರ ಆಲ್ಬಂಗಳಾಗಿವೆ.

ರಿಕಿಗೆ ಪ್ರಶಸ್ತಿ ತಂದು ಕೊಟ್ಟ ಡಿವೈನ್ ಟೈಡ್ಸ್ ಆಲ್ಬಂ ಒಂಬತ್ತು ಹಾಡುಗಳನ್ನು ಹೊಂದಿದೆ. ಸಮಾನವಾಗಿ ಸೇವೆ ಸಲ್ಲಿಸುವ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳುವ ಸಂದೇಶವನ್ನು ಒಳಗೊಂಡಿದೆ.

ಕೇಜ್ ಅವರು 2015 ರಲ್ಲಿ ವಿಂಡ್ಸ್ ಆಫ್ ಸಂಸಾರಗಾಗಿ ಅತ್ಯುತ್ತಮ ಹೊಸ ಯುಗದ ಆಲ್ಬಮ್ ವಿಭಾಗದಲ್ಲಿ ತಮ್ಮ ಮೊದಲ ಗ್ರ್ಯಾಮಿಯನ್ನು ಪಡೆದರು.

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಬೌದ್ಧ ದೇವಾಲಯಕ್ಕೆ ಬೆಂಕಿ

ದಿಕೆ ಕೆಲಸ ಮಾಡುವ ಕೋಪ್ಲ್ಯಾಂಡ್ ದಿ ಪೋಲೀಸ್ ಸಂಸ್ಥೆ ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದೆ. ಈ ಸಂಸ್ಥೆಯ ಸಹಯೋಗಿಯಾಗಿ ರಿಕಿ ಎರಡನೇ ಪ್ರಶಸ್ತಿ ಗೆದ್ದಿದ್ದಾರೆ.

Grammy Awards 2023, Indian, music, composer ,Ricky Kej, wins, third, Grammy award,

Articles You Might Like

Share This Article