ಬೆಂಗಳೂರು,ಜ.13- ಪ್ರತಿಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲು ನಮ್ಮ ಪಕ್ಷ ಬದ್ಧವಾಗಿದೆ. ಈಗಾಗಲೇ ಹಲವಾರು ಜನಪರ ಯೋಜನೆಗಳನ್ನು ನೀಡಿ ಯಶಸ್ವಿಯಾಗಿದ್ದು, ಅದೇ ರೀತಿ ಗೃಹಜ್ಯೋತಿ ಭರವಸೆಯನ್ನು ಈಡೇರಿಸಲಾಗುವುದು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಗೃಹಜ್ಯೋತಿಯನ್ನು ಅಸಾಧ್ಯದ ಭರವಸೆ ಎಂದು ಬಿಜೆಪಿ ಅಪಪ್ರಚಾರ ಮಾಡಲು ಶುರು ಮಾಡಿದೆ. ಅಸಾಧ್ಯ ಎಂದ ಹಲವು ಜನಪರ ಯೋಜನೆಗಳನ್ನು ಕಾಂಗ್ರೆಸ್ ಈಗಾಗಲೇ ನೀಡಿ ಯಶಸ್ವಿಯಾಗಿರುವುದು ಕಣ್ಣ ಮುಂದಿದೆ. ಜನಪರ ಕೆಲಸಗಳು ಬಿಜೆಪಿಗೆ ಅಸಾಧ್ಯವಿರಬಹುದು, ಕಾಂಗ್ರೆಸ್ಸಿಗಲ್ಲ ಎಂದು ತಿರುಗೇಟು ನೀಡಲಾಗಿದೆ.
ಕಾಂಗ್ರೆಸ್ ಜನಪರ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದರೆ, ಬಿಜೆಪಿಯಲ್ಲಿ ರವಿಗಳದ್ದೇ ಸದ್ದು, ಗದ್ದಲ, ಕಾರುಬಾರು ನಡೆದಿದೆ ಎಂದು ಲೇವಡಿ ಮಾಡಲಾಗಿದೆ. ಬಿಜೆಪಿಯ ಬ್ರೋಕರ್ಸ್ ಮೋರ್ಚಾದಲ್ಲಿ – ಸ್ಯಾಂಟ್ರೋ ರವಿ, ರೌಡಿ ಮೋರ್ಚಾದಲ್ಲಿ – ಸೈಕಲ್ ರವಿ, ಕುಡುಕರ ಮೋರ್ಚಾದಲ್ಲಿ – ಲೂಟಿ ರವಿ. ಈ ಮೂರು ರವಿಗಳಿಂದಲೇ ಬಿಜೆಪಿಗೆ ಬೆಳಗಾಗುತ್ತದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಬಾರಿಯ ಗಣರಾಜ್ಯೋತ್ಸವದ ಪರೇಡ್ಗೆ ಕರ್ನಾಟಕದ ಸ್ಥಬ್ಧಚಿತ್ರವನ್ನು ನಿರಾಕರಿಸಿದ್ದ ಕೇಂದ್ರ ಸರ್ಕಾರ, ಕಾಂಗ್ರೆಸ್ ಪ್ರತಿಭಟನೆನೆಗೆ ಮಣಿದು ಮತ್ತೆ ಅನುಮತಿ ನೀಡಿದೆ. ಕೇಂದ್ರ ಅನುಮತಿ ನಿರಾಕರಿಸಿದಾಗ ಸಮರ್ಥನೆ ಮಾಡಿಕೊಂಡಿದ್ದ ಬಿಜೆಪಿ ನಾಯಕರು, ಕಾಂಗ್ರೆಸ್ ಪಕ್ಷ ಒತ್ತಾಯದಿಂದ ಗೆಲುವು ದೊರೆತ ಬಳಿಕ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಕರ್ನಾಟಕದ ಗೌರವ ಕಾಪಾಡಲು ಕಾಂಗ್ರೆಸ್ ಮಾತ್ರ ಹೋರಾಡಿದೆ ಎಂದು ಸಮರ್ಥಿಸಿಕೊಂಡಿದೆ.
ವಿಧಾನಸೌಧ ಎದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ
ಶೇ.40ರಷ್ಟು ಕಮಿಷನ್ಗೆ ಸ್ಯಾಂಟ್ರೋ ಸರ್ಕಾರದಲ್ಲಿ ಮತ್ತೊಂದು ಪುರಾವೆ ದೊರತಿದೆ. ಮೆಟ್ರೋ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ ಎನ್ನಲು ಪಿಲ್ಲರ್ ಕುಸಿತದ ಬೆನ್ನಲ್ಲೇ, ರಸ್ತೆಯೂ ಕುಸಿದಿದೆ. ಈ ಭ್ರಷ್ಟ ಸರ್ಕಾರದಿಂದ ನಿಂತ ನೆಲವೇ ಕುಸಿಯಬಹುದು, ತಲೆ ಮೇಲಿಂದಲೂ ಸಾವು ಎರಗಬಹುದು ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಬಿಜೆಪಿ ಜನರ ಪ್ರಾಣ ತೆಗೆಯಲೆಂದೇ ಬಂದಿದೆ. ಅಡುಗೆ ಎಣ್ಣೆ, ಪೆಟ್ರೋಲ್, ಗ್ಯಾಸ್ ಸಿಲಿಂಡರ್, ವಿದ್ಯುತ್, ಹಾಲು ಮೊಸರು ಸೇರಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಮಹಿಳೆಯರು ಜೀವನ ನಿರ್ವಹಣೆಗೆ ಹರಸಾಹಸ ಪಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಜ್ಯದ ಮಹಿಳೆಯರ ಪರ ನಿಂತು ಹೋರಾಡಲು ಶ್ರಿಮತಿ ಪ್ರಿಯಾಂಕಾ ಗಾಂಯವರು ಆಗಮಿಸುತ್ತಿದ್ದಾರೆ. ಎಲ್ಲರೂ ಬನ್ನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಕಾಂಗ್ರೆಸ್ ಕರೆ ನೀಡಿದೆ.
griha jyoti, Karnataka, Congress, promise, assembly, election,