ಬಾಗೇಪಲ್ಲಿ, ಜೂ.23- ಕಳೆದ ಕೆಲದಿನಗಳ ಹಿಂದೆ ತಾಲ್ಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಮನೆಯ ಮೇಲ್ಬಾವಣಿ ಹಾರಿ ಹೋಗಿ, ಶೌಚಾಲಯದಲ್ಲಿ ಜೀವನ ಸಾಗಿಸುತ್ತಿದ್ದ ವೃದ್ದೆಗೆ ದಾನಿಗಳ ನೆರವಿನೊಂದಿಗೆ ಸುದ್ದಿಲೋಕ ವಾಟ್ಸ್ಆ್ಯಪ್ ಗ್ರೂಪ್‌ನ ಯುವಕರ ತಂಡ ಪುಟ್ಟಮನೆಯನ್ನು ನಿರ್ಮಿಸಿ ಮಾನವೀಯತೆ ಮೆರೆದಿದ್ದಾರೆ.
ತಾಲ್ಲೂಕಿನ ರಾಮಸ್ವಾಮಿಪಲ್ಲಿ ಗ್ರಾಮದ ಜಯಮ್ಮರೆಡ್ಡಿ ಎಂಬುವರ ಮನೆಯ ಮೇಲಾವಣಿ ಭಾರೀ ಮಳೆಗಾಳಿಗೆ ಹಾರಿಹೋಗಿತ್ತು.ಅಂದಿನಿಂದ ವೃದ್ಧೆ ಸೂರಿಲ್ಲದೆ ಪರಿತಪಿಸುತ್ತಿದ್ದರು.ಅಸಹಾಯಕರಾದ ಮಹಿಳೆ ಸೂರಿಗಾಗಿ ಹಪಹಪಿಸುತ್ತಿದ್ದು, ಚಿಕ್ಕ ಶೌಚಾಲಯದಲ್ಲಿ ವಾಸವಾಗಿದ್ದರು. ಇದನ್ನು ಗಮನಿಸಿದ ಸುದ್ದಿಲೋಕ ವಾಟ್ಸ್ಆ್ಯಪ್ ಗ್ರೂಪ್‌ನ ಯುವಕರ ತಂಡ ವೃದ್ದೆಗೆ ಮನೆ ನಿರ್ಮಾಣ ಮಾಡಿಕೊಡಬೇಕೆಂದು ಗ್ರೂಪ್‌ನಲ್ಲಿ ಮನವಿ ಮಾಡಿದ್ದರು.
ಇವರ ಮನವಿಗೆ ದಾನಿಗಳು ಸೇರಿದಂತೆ ಗ್ರೂಪ್‌ನ ಸದಸ್ಯರು ಕೈಜೋಡಿಸಿ ತಮಗೆ ಕೈಲಾದ ಹಣವನ್ನು ಹೊಂದಿಸಿ ಚಿಕ್ಕದಾದ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.ಈ ಹಿರಿಯ ಜೀವಕ್ಕೆ ಯಾರ ಆಸರೆಯೂ ಇಲ್ಲದಿರುವುದೇ ಶೋಚನೀಯ. ಇಂತಹ ಸಮಯದಲ್ಲಿ ಮನೆ ನಿರ್ಮಿಸಿಕೊಟ್ಟು ವೃದ್ಧೆಯ ಕಷ್ಟಕ್ಕೆ ಸ್ಪಂದಿಸಿರುವುದು ನಿಜಕ್ಕೂ ಶ್ಲಾಘನೀಯ.
ಇಂದು ಮನೆಗೆ ಚಿಕ್ಕದಾಗಿ ಗೃಹಪ್ರವೇಶ ಮಾಡಿ ವೃದ್ಧೆಯನ್ನು ಮನೆ ಸೇರಿಸಿದ್ದಾರೆ. ಯುವಕರ ತಂಡದ ಕಾರ್ಯಕ್ಕೆ ತಾಲ್ಲೂಕಿನಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-07-2025)
- ಬೆಂಗಳೂರಲ್ಲಿ ಇಂದು ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು
- ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ : ಗೃಹಸಚಿವ ಪರಮೇಶ್ವರ
- ನೈರುತ್ಯ ಮುಂಗಾರು ಚೇತರಿಕೆ, ರಾಜ್ಯದ ಹಲವೆಡೆ ಮಳೆ
- 20 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಬೆಚ್ಚಿ ಬಿದ್ದ ದೆಹಲಿ