ಪದ್ಮನಾಭನಗರದಲ್ಲಿ BSK ಜೀವಾಶ್ರಯ ರಕ್ತ ಕೇಂದ್ರ ಆರಂಭ

Social Share

ಬೆಂಗಳೂರು, ಫೆ. 13- ಇಂದಿನ ಕಾಲಘಟ್ಟದಲ್ಲಿ ರಕ್ತ ಅತ್ಯಮೂಲ್ಯವಾಗಿದ್ದು, ಆರೋಗ್ಯ ವಂತ ನಾಗರೀಕರು ರಕ್ತದಾನ ಮಾಡಿದರೆ ಅವಶ್ಯಕವಿರು ವವರಿಗೆ ನೆರವಾಗಲಿದ್ದು, ಇದೊಂದು ಪುಣ್ಯ ಕೆಲಸ ಎಂದು ಕಂದಾಯ ಸಚಿವ ಆರ್.ಅಶೋಕ್ ಕರೆ ನೀಡಿದರು.

ಪದ್ಮನಾಭನಗರದಲ್ಲಿ ಬಿಎಸ್ಕೆ ಜೀವಾಶ್ರಯ ರಕ್ತ ಕೇಂದ್ರವನ್ನು ಕಂದಾಯ ಸಚಿವ ಆರ್. ಅಶೋಕ್ ಉದ್ಘಾಟಿಸಿದರು. ಇದೇ ವೇಳೆ ರಕ್ತದಾನ ಶಿಬಿರದಲ್ಲಿ ರಕ್ತದಾನದ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಿ ರಕ್ತದಾನಿಗಳ ಈ ಮಹತ್ವದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ರಕ್ತ ಕೇಂದ್ರದ ಡೋನರ್ ವಿಭಾಗ, ಸ್ಟೋರೆಜ್ ವಿಭಾಗಗಳನ್ನು ವೀಕ್ಷಿಸಿ ಕಾರ್ಯಚಟುವಟಿಕೆಯ ಬಗ್ಗೆ ತಂತ್ರಜ್ಞರಿಂದ ಮಾಹಿತಿ ಪಡೆದುಕೊಂಡರು, ರಕ್ತ ಪರೀಕ್ಷೆಯ ಲ್ಯಾಬ್ ವೀಕ್ಷಿಸಿದರು. ಕ್ಷೇತ್ರದಲ್ಲಿ ಅತ್ಯವಶ್ಯಕವಿರುವ ರಕ್ತ ಕೇಂದ್ರ ಪ್ರಾರಂಭಿಸಿರುವುದಕ್ಕೆ ಕೇಂದ್ರದ ಸ್ಥಾಪಕರನ್ನು ಅಭಿನಂದಿಸಿ ಶುಭ ಕೋರಿದರು.

12 ಗಂಟೆಯೊಳಗೆ ಹುಲಿ ಬಾಯಿಗೆ ಆಹಾರವಾದ ಇಬ್ಬರು

ಇದಕ್ಕೂ ಮುನ್ನ ರಕ್ತ ಕೇಂದ್ರದ ನಾಮಫಲಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು, `ಮನುಷ್ಯನಿಗೆ ಹಲವು ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ಕೇಂದ್ರಗಳು ಜೀವ ಉಳಿಸುವ ಕೆಲಸಗಳನ್ನು ಮಾಡುತ್ತಿವೆ. ಇಂತಹ ಒಂದು ಸೇವಾ ಕಾರ್ಯಕ್ಕೆ ಒಂದಾಗಿರುವ ಕೇಂದ್ರದ ತ್ರಿಮೂರ್ತಿಗಳಿಗೆ ಒಳ್ಳೆಯದಾಗಲಿ’ ಎಂದು ಹಾರೈಸಿದರು.

ಬಿಬಿಎಂಪಿ ಮಾಜಿ ಮಹಾ ಪೌರರಾದ ಎಸ್.ಕೆ ನಟರಾಜ್ ಮಾತನಾಡಿ, `ಇದೊಂದು ಉತ್ತಮ ಕಾರ್ಯವಾಗಿದೆ. ಜೀವಕ್ಕೆ ರಕ್ತ ಅವಶ್ಯಕ ಇದನ್ನು ಅಮೂಲ್ಯ ಸಮ ಯಕ್ಕೆ ಪೂರೈಸಿ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

ರಾಜ್ಯ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ, `ಯುವಕರು ಇಂತಹ ಸೇವಾಕಾರ್ಯಗಳಲ್ಲಿ ಮತ್ತಷ್ಟು ತೊಡಗಿಕೊಳ್ಳಬೇಕು, ಇಂದು ರಕ್ತದ ಅವಶ್ಯಕತೆ ಹೆಚ್ಚಿದೆ. ರಾಮನಗರದಲ್ಲಿ ನಾವು ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ರಕ್ತದಾನದ ಶಿಬಿರಗಳನ್ನು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ನೂತನ ರಕ್ತ ಕೇಂದ್ರದ ಜೊತೆ ಸೇರಿ ಮತ್ತಷ್ಟು ಶಿಬಿರಗಳನ್ನು ಮಾಡೋಣ’ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಬಿಬಿಎಂಪಿ ಮಾಜಿ ಸದಸ್ಯರಾದ ಶೋಭಾ ಆಂಜಿನಪ್ಪ, ದೀಪಿಕಾ ಮಂಜುನಾಥ ರೆಡ್ಡಿ, ಲಕ್ಷ್ಮಿ ಉಮೇಶ್, ಇನ್ ವಿವೋ ಅಸ್ಪತ್ರೆಯ ಡಾ. ಗುಣಶೇಖರ್ವುಪ್ಪಲಫಾಟಿ, ಇಎಲ್ಸಿಐಎ ಸಲಹೆಗಾರರಾದ ರಮಾಮುಕುಂದ್, ಕೆಎಂಡಬ್ಲ್ಯೂಎ ಶಿಕ್ಷಣ ಸಂಸ್ಥೆಯ ಮನೋಜ್ ಕುಮಾರ್, ರಕ್ತ ಕೇಂದ್ರದ ಸತೀಶ್ಗೌಡ ಎಂ.ಎಸ್., ವಿನೋದ್ ಪಿ.ಗೌಡ, ವೆಂಕಟ್ ಕೆ.ರೆಡ್ಡಿ, ಶಂಕರ್ರೆಡ್ಡಿ, ಸುನೀಲ್ ಪದ್ಮಯ್ಯ ಕೊಟ್ಯಾನ್ ಮುಂತಾದವರು ಇದ್ದರು.

#GSKSevashrama, #BloodBank, #Padmanabhanagara,

Articles You Might Like

Share This Article