ಜಿಎಸ್‍ಟಿ ವಂಚನೆ ತಪ್ಪಿಸಲು ದಿಟ್ಟ ಕ್ರಮ : ಬೊಮ್ಮಾಯಿ

Social Share

ಬೆಂಗಳೂರು,ಫೆ.23- ಜಿಎಸ್‍ಟಿ ಸಂಗ್ರಹದಲ್ಲಿ ನಡೆಯುವ ವಂಚನೆಗಳನ್ನು ತಪ್ಪಿಸಲು ಮತ್ತಷ್ಟು ಸಂಶೋಧನೆಗಳು ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ರಾಜಸ್ವ ಸಂಗ್ರಹ ಧಕ್ಷತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಪರಿಷತ್‍ನ ಪ್ರಶ್ನೋತ್ತರದಲ್ಲಿ ಸದಸ್ಯ ಪ್ರಕಾಶ್ ಕೆ.ರಾಥೋಡ್ ಪರವಾಗಿ ಎಂ.ನಾಗರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, 2022-23ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೂ 11,914 ಪ್ರಕರಣಗಳನ್ನು ತನಿಖೆ ಹಾಗೂ ತಪಾಸಣೆ ಕೈಗೊಳ್ಳಲಾಗಿದೆ. ಬಚ್ಚಿಟ್ಟ ವಹಿವಾಟು, ಇನ್‍ಫುಟ್ ತೆರಿಗೆಯನ್ನು ನಕಲಿ ದಾಖಲಾತಿಗಳೊಂದಿಗೆ ಪೂರೈಸುವುದು, ಸೂಕ್ತ ದಾಖಲೆಗಳು ಇಲ್ಲದೆ ಸರಕು ಸಾಗಿಸುವುದು, ಸೂಕ್ತ ಮಾರಾಟ ನೀಡದೇ ಇರುವ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ಮಂಡ್ಯದಲ್ಲಿ ಭೀಕರ ಕೊಲೆ, ಬೆಚ್ಚಿಬಿದ್ದ ಜನ

ಒಟ್ಟು 1819.94 ಕೋಟಿ ರೂ.ಗಳ ತೆರಿಗೆ ವಂಚನೆಯಾಗಿದೆ. ಇದರಲ್ಲಿ 497.98 ಕೋಟಿ ತೆರಿಗೆ, 19.34 ಕೋಟಿ ಬಡ್ಡಿ , 131.53ಕೋಟಿ ದಂಡ ಸೇರಿ 648.85ಕೋಟಿ ರೂ.ಗಳನ್ನು ಸಂಗ್ರಹ ಮಾಡಲಾಗಿದೆ. ಬಾಕಿ ಉಳಿದವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆ ಪ್ರಕರಣದ ಇತ್ಯರ್ಥವಾದ ಬಳಿಕ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

AIDMK ಮುಖ್ಯಸ್ಥರಾಗಿ ಪಳನಿಸ್ವಾಮಿ ಮುಂದುವರಿಕೆ

ಈ ಮೊದಲು ಅಡಿಕೆ ವಹಿವಾಟಿನಲ್ಲಿ ಪ್ರತಿ ದಿನ 8 ಕೋಟಿ ರೂ.,ದೇಶೀಯ ಹಾಗೂ ವಿದೇಶೀಯ ಸ್ಕ್ರ್ಯಾಬ್‍ನಿಂದ ಸಾವಿರ ಕೋಟಿ ವಂಚನೆಯಾಗುತ್ತಿತ್ತು. ಅದನ್ನು ಪತ್ತೆ ಹಚ್ಚಿ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

GST, collection, fraud, CM Bommai,

Articles You Might Like

Share This Article