ಜಿಎಸ್‍ಟಿ ಯುಗಾರಂಭದ ನಂತರ 2ನೇ ಬಾರಿಗೆ 1.50 ಲಕ್ಷ ಕೋಟಿ ಮೀರಿದ ಆದಾಯ ಸಂಗ್ರಹ

Social Share

ನವದೆಹಲಿ, ನ.1- ಜಿಎಸ್‍ಟಿ ಯುಗ ಆರಂಭವಾದ ನಂತರ ಎರಡನೇ ಬಾರಿಗೆ ದೇಶದ ತೆರಿಗೆ ಸಂಗ್ರಹದಲ್ಲಿ 1.50 ಲಕ್ಷ ಕೋಟಿ ಮೀರಿದ ಆದಾಯ ವಸೂಲಿಯಾಗಿದೆ. ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿರುವ ಅಕ್ಟೋಬರ್ ತಿಂಗಳ ತೆರಿಗೆ ಸಂಗ್ರಹ ಮಾಹಿತಿಯ ಪ್ರಕಾರ ಕಳೆದ ಮಾಸಿಕದಲ್ಲಿ 1,51,718 ಕೋಟಿ ರೂಪಾಯಿ ಜಿಎಸ್‍ಟಿ ವಸೂಲಿಯಾಗಿದೆ.

ಕಳೆದ ಏಪ್ರಿಲ್ ಬಳಿಕ ಇದು ಎರಡನೇ ಹೆಚ್ಚು ಸಂಗ್ರಹಿತ ಆದಾಯವಾಗಿದೆ. ಕಳೆದ ಎಂಟು ತಿಂಗಳಿನಿಂದಲೂ 1.40 ಲಕ್ಷ ಕೋಟಿ ರೂಪಾಯಿ ಆಜುಬಾಜಿನಲ್ಲೇ ತೆರಿಗೆ ಸಂಗ್ರಹವಾಗುತ್ತಿತ್ತು. ಜಿಎಸ್‍ಟಿ ಶುರುವಾದ ನಂತರ ಒಮ್ಮೆ ಮಾತ್ರ ಒಂದುವರೆ ಲಕ್ಷ ಕೋಟಿ ಮೀರಿದ ಆದಾಯ ಸಂಗ್ರಹವಾದ ಇತಿಹಾಸವಿದೆ.

ಅಕ್ಟೋಬರ್ ತಿಂಗಳಲ್ಲಿ ಸಂಗ್ರಹವಾಗಿರುವ 1.51 ಲಕ್ಷ ಕೋಟಿಯಲ್ಲಿ, 26,039 ಕೋಟಿ ಕೇಂದ್ರ ತೆರಿಗೆಯಾಗಿದೆ. ರಾಜ್ಯದ ಪಾಲಿನಲ್ಲಿ 33.396 ಕೋಟಿ, 81,778 ಕೋಟಿ ಅಂತಾರಾಷ್ಟ್ರೀಯ ತೆರಿಗೆ ಸಂಗ್ರಹವಾಗಿದೆ. ಅಂತಾರಾಷ್ಟ್ರೀಯ ತೆರಿಗೆಯಲ್ಲಿ 37,297 ಕೋಟಿ ಆಮದು ಶುಲ್ಕ, 10,505 ಕೋಟಿ ರೂ. ಸೆಸ್ ಸೇರಿದೆ.

ಹೆಚ್ಚುವರಿಯಾಗಿ 37,626 ಕೋಟಿ ಕೇಂದ್ರ ತೆರಿಗೆ, 32,883 ಕೋಟಿ ರೂಪಾಯಿಗಳ ರಾಜ್ಯ ತೆರಿಗೆಯನ್ನು ಸರ್ಕಾರ ಇತ್ಯರ್ಥ ಪಡಿಸಿದೆ.ಕೇಂದ್ರ ಮತ್ತು ರಾಜ್ಯಗಳ ನಡುವೆ ಶೇ.50:50 ಅನುಪಾತದಲ್ಲಿ ತೆರಿಗೆ ಹಂಚಿಕೆಯಾಗುತ್ತಿದೆ. ಅಕ್ಟೋಬರ್‍ನಲ್ಲಿ ಕೇಂದ್ರ 74,665 ಕೋಟಿ ಉಳಿಸಿಕೊಂಡು, 77,279 ಕೋಟಿ ರೂಪಾಯಿಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದೆ.

“ಹೆಂಡ್ತಿ ಹೊಡೀತಾಳೆ ಪ್ಲೀಸ್ ಹೆಲ್ಪ್ ಮಾಡಿ” : ಪ್ರಧಾನಿ ಮೊರೆಹೋದ ಗಂಡ..!

ಕರ್ನಾಟಕದಲ್ಲಿ ಕಳೆದ ವರ್ಷ ಅಕ್ಟೋಬರ್‍ನಲ್ಲಿ 8,259 ಕೋಟಿ ಸಂಗ್ರಹವಾಗಿದ್ದರೆ, ಈ ವರ್ಷದ ಅಕ್ಟೋಬರ್‍ನಲ್ಲಿ 10,996 ಕೋಟಿ ಸಂಗ್ರಹವಾಗಿದೆ. ಇದು ಶೇ.33ರಷ್ಟು ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.

ಕೆನಡಾದಲ್ಲಿ ಬಹುಭಾಷಾ ನಟಿ ರಂಭಾ ಕಾರು ಅಪಘಾತ

Articles You Might Like

Share This Article