GST ಹೊರೆ ತಗ್ಗಿಸಲು ಕ್ರಮ, ಆತಂಕ ಬೇಡ : ಸಿಎಂ

Social Share

ಬೆಂಗಳೂರು,ಜು.18- ನಾವು ಹಾಲು, ಮೊಸರನ್ನು ಪ್ಯಾಕ್ ಮಾಡಿ ಮಾರಾಟ ಮಾಡುವವರಿಗೆ ಮಾತ್ರ ಜಿಎಸ್‍ಟಿ ಹಾಕಿದ್ದೇವೆ. ಸಾಮಾನ್ಯವಾಗಿ ಮಾರಾಟ ಮಾಡುವವರಿಗೆ ಹಾಕಿಲ್ಲ. ಬ್ರಾಂಡೆಡ್ ಇದ್ದವರಿಗೆ ಮಾತ್ರ 5% ಜಿಎಸ್‍ಟಿ ಹಾಕಿದ್ದೇವೆ. ಅದನ್ನು ಮರುಪಾವತಿ ಮಾಡಲು ಅವಕಾಶವಿದೆ. ಹೀಗಾಗಿ ಜಿಎಸ್‍ಟಿ ಇದ್ದರೂ ವಸ್ತುಗಳ ದರ ಹೆಚ್ಚಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮರುಪಾವತಿ ಮಾಡುವ ಸಾಧ್ಯತೆಯಿದೆ. ಇದನ್ನು ಮಾಡದಿದ್ದರೇ ತೆರಿಗೆ ಗ್ರಾಹಕರಿಗೆ ಬೀಳುತ್ತಿತ್ತು. ಇದನ್ನು ಮರುಪಾವತಿ ಮಾಡಿದರೆ ಈಗಿರುವ ದರ ಹೆಚ್ಚಳವಾಗಲ್ಲ. ಇದರ ಬಗ್ಗೆ ನಾವು ಗಮನಕೊಡುತ್ತೇವೆ. ಮರುಪಾವತಿ ಮಾಡುವ ಅವಕಾಶ ಪಡೆದುಕೊಳ್ಳಬೇಕು. ಇದನ್ನು ಜಿಎಸ್‍ಟಿ ಕೌನ್ಸಿಲ್‍ನಲ್ಲಿ ಮಾತಾಡುತ್ತೇವೆ ಎಂದರು.

ಜಿಎಸ್‍ಟಿ ಕಾರಣದಿಂದ ದರ ಹೆಚ್ಚಳ ಮಾಡಿದ್ದಾರೆ, ಆದರೆ ಹೆಚ್ಚಳ ಮಾಡುವ ಅವಶ್ಯಕತೆಯಿಲ್ಲ. 5% ಟ್ಯಾಕ್ಸ್ ಮರುಪಾವತಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಇದನ್ನು ಜಿಎಸ್‍ಟಿ ಕೌನ್ಸಿಲ್ ಮೂಲಕ ನಿರ್ದೇಶನ ಕೊಡಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದರು.

ಜಿಎಸ್‍ಟಿ ಕೌನ್ಸಿಲ್ ಮೂಲಕ ಈ ಕುರಿತು ಸ್ಪಷ್ಟ ಆದೇಶ ಕೊಡಿಸುವುದಾಗಿ ಹೇಳಿದ್ದಾರೆ. ಆಹಾರ ಪದಾರ್ಥಗಳ ಮೇಲೆ ಇಂದಿನಿಂದ ಶೇ.5ರಷ್ಟು ಜಿಎಸ್‍ಟಿ ವಿಧಿಸಲಾಗಿದೆ. ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ ಎಂಬ ಆಕ್ಷೇಪ ಸರಿಯಲ್ಲ.
ಪ್ಯಾಕ್ ಮಾಡಿದ ಪದಾರ್ಥಗಳ ಮೇಲೆ ಮಾತ್ರ ಜಿಎಸ್‍ಟಿ ಜಾರಿಯಗುತ್ತಿದೆ. ವರ್ತಕರು ಈ ಜಿಎಸ್‍ಟಿಯನ್ನು ಮರುನಗದೀಕರಣ ಮಾಡಿಕೊಳ್ಳಲು ಅವಕಾಶವಿದೆ. ಹೀಗಾಗಿ ಹೆಚ್ಚಾದ ತೆರಿಗೆಯನ್ನು ಗ್ರಾಹಕರ ಮೇಲೆ ವಿಧಿಸದೆ ಮರು ನಗದೀಕರಣ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ವರ್ತಕರು ಜಿಎಸ್‍ಟಿ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಗ್ರಾಹಕರ ಮೇಲೆ ಹೊರೆಯಾಗದಂತೆ ಮರು ನಗದೀಕರಣ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿ ಪುನರುಚ್ಚರಿಸಿದರು. ಜಿಎಸ್‍ಟಿ ಹೇರಿಕೆ ಪ್ಯಾಕಿಂಗ್ ಪದಾರ್ಥಗಳಿಗೆ ಅನ್ವಯಿಸಲಿದೆ. ಪ್ಯಾಕಿಂಗ್ ಅಲ್ಲದ ವಸ್ತುಗಳು ತೆರಿಗೆ ವ್ಯಾಪ್ತಿಯಿಂದ ಹೊರಗಿವೆ. ಜಿಎಸ್‍ಟಿ ಉತ್ಪಾದನೆಯಿಂದ ಆರಂಭಗೊಂಡು ಕೊನೆಯ ಸರಪಳಿಯವರೆಗೂ ಸಂಪರ್ಕ ಹೊಂದಿರುತ್ತದೆ.

ನೊಂದಾಯಿತ ವರ್ತಕರು ನಿಯಮಿತವಾದ ಸಂಪರ್ಕವನ್ನು ಮುಂದುವರೆಸಿದ್ದಾದರೆ ಕಡಿತಗೊಂಡ ಜಿಎಸ್‍ಟಿ ಮರುಪಾವತಿಯಾಗಲಿದೆ. ಹೀಗಾಗಿ ವರ್ತಕರ ಹಂತಕ್ಕಷ್ಟೆ ಜಿಎಸ್‍ಟಿ ಸೀಮಿತಗೊಂಡು ಗ್ರಾಹಕರಿಗೆ ಹೊರೆಯಾಗಬಾರದು ಎಂಬುದು ಮುಖ್ಯಮಂತ್ರಿಗಳ ಅಭಿಪ್ರಾಯವಾಗಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‍ಡಿಎ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದ್ರೌಪದಿ ಮುರ್ಮು ಅವರು ಗೆಲುವು ಸಾಸುವುದು 100ಕ್ಕೆ ನೂರರಷ್ಟು ಖಚಿತ ಎಂದು ಇದೇ ಸಂದರ್ಭದಲ್ಲಿ ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಎಸ್‍ಪಿಯ ಮುಖ್ಯಸ್ಥೆ ಮಾಯಾವತಿ, ವೈಎಸ್‍ಆರ್ ಕಾಂಗ್ರೆಸ್, ಬಿಜೆಡಿ ಸೇರಿದಂತೆ ಅನೇಕ ಪ್ರಾದೇಶಿಕ ಪಕ್ಷಗಳು ಬೆಂಬಲ ಸೂಚಿಸಿವೆ. ಹೀಗಾಗಿ ಸೂರ್ಯಚಂದ್ರ ಇರುವುದು ಎಷ್ಟೋ ಸತ್ಯವೋ ಅವರು ಗೆಲ್ಲುವುದು ಅಷ್ಟೇ ಖಚಿತ ಎಂದರು.

ರಾಜ್ಯಪಾಲರಾಗಿ, ಸಚಿವರಾಗಿ ಅನೇಕ ಸಮಾಜ ಸೇವೆಗಳನ್ನು ಮಾಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆಡಳಿತಾವಯಲ್ಲಿ ದಕ್ಷತೆಯನ್ನು ತೋರಿಸಿದ್ದಾರೆ. ಮೂರನೇ ಎರಡರಷ್ಟು ಮತ ಪಡೆದು ದೇಶದ ಅತ್ಯಂತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಹೇಳಿದರು.

Articles You Might Like

Share This Article