ದೇಶದ ಆರ್ಥಿಕತೆ ಅತಿಕ್ಷಿಪ್ರ ವೇಗದಲ್ಲಿ ಚೇತರಿಕೆ

Social Share

ನವದೆಹಲಿ,ಆ.1- ಕೋವಿಡ್ ಬಳಿಕ ದೇಶದ ಆರ್ಥಿಕತೆ ಅತಿಕ್ಷಿಪ್ರ ವೇಗದಲ್ಲಿ ಚೇತರಿಸಿಕೊಳ್ಳುತ್ತಿದ್ದು, ಜಿಎಸ್‍ಟಿ ಜಾರಿಯಾದ ಬಳಿಕ 2ನೇ ಬಾರಿಗೆ ದಾಖಲಾರ್ಹ ಮಟ್ಟದಲ್ಲಿ ಅತಿ ಹೆಚ್ಚು ತೆರಿಗೆ ವಸೂಲಿಯಾಗಿದೆ. ಕಳೆದ ವರ್ಷ ಜುಲೈಗೆ ಹೋಲಿಸಿದರೆ ಈವರೆಗೂ ಇದು ಅತಿಹೆಚ್ಚು ಸಂಗ್ರಹಿತ ತೆರಿಗೆ ಎಂದು ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ತಿಳಿಸಿದೆ.

ಕಳೆದ ಜುಲೈ ತಿಂಗಳಿನಲ್ಲಿ ಒಟ್ಟು 1,48,995 ಕೋಟಿ ಜಿಎಸ್‍ಟಿ ವಸೂಲಿಯಾಗಿದೆ. ಇದರಲ್ಲಿ ಕೇಂದ್ರ ಜಿಎಸ್‍ಟಿ 25,751, ರಾಜ್ಯ ಜಿಎಸ್‍ಟಿ 38,700, ಅಂತಾರಾಷ್ಟ್ರೀಯ ಜಿಎಸ್‍ಟಿ 79,518 ಅದರಲ್ಲಿ 41,420 ಕೋಟಿ ಆಮದು ಸುಂಕ ಸೇರಿದೆ.
ಕಳೆದ ವರ್ಷದ ಇದೇ ತಿಂಗಳ ಆದಾಯಕ್ಕೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ ಶೇ.28ರಷ್ಟು ಪ್ರಗತಿಯಾಗಿದೆ.

ಆಮದು ಶುಲ್ಕದ ಆದಾಯ ಶೇ.48ರಷ್ಟು ಹೆಚ್ಚಾಗಿದೆ. ಕಳೆದ 5 ತಿಂಗಳ ಆದಾಯ ಸಂಗ್ರಹಕ್ಕೆ ಹೋಲಿಸಿದರೆ ಜುಲೈನಲ್ಲಿ 1.40 ಲಕ್ಷ ಕೋಟಿ ಮೀರಿ ಆದಾಯ ಸಂಗ್ರಹವಾಗಿದೆ. ಜಿಎಸ್‍ಟಿ ಇತಿಹಾಸದಲ್ಲೇ ಇದು 2ನೇ ಬಾರಿಯ ಅತಿದೊಡ್ಡ ಸಂಗ್ರಹ ಎಂದು ವಿಶ್ಲೇಷಿಸಲಾಗಿದೆ. ರಾಜ್ಯವಾರು ಸಂಗ್ರಹದಲ್ಲಿ ಕೇಂದ್ರಾಡಳಿತಗಳನ್ನು ಹೊರತುಪಡಿಸಿದರೆ ಕರ್ನಾಟಕ ಮುಂಚೂಣಿ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಈ ಬಾರಿ ಜುಲೈ ತಿಂಗಳಿನಲ್ಲಿ 9, 785 ಕೋಟಿ ಸಂಗ್ರಹವಾಗಿದ್ದು, ಶೇ.45ರಷ್ಟು ಪ್ರಗತಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇ.28ರಷ್ಟು, ಉತ್ತರಖಂಡ್‍ನಲ್ಲಿ ಶೇ.26, ಉತ್ತರಪ್ರದೇಶದಲ್ಲಿ ಶೇ.18, ಹರಿಯಾಣದಲ್ಲಿ ಶೇ.27, ಸಿಕ್ಕಿಂಗ್‍ನಲ್ಲಿ ಶೇ.26, ಪಂಜಾಬ್, ದೆಹಲಿ, ಅರುಣಾಚಲ ಪ್ರದೇಶ, ಅಸ್ಸಾಂನಲ್ಲಿ ಶೇ.18, ಕೇರಳದಲ್ಲಿ ಶೇ.29, ತೆಲಂಗಾಣದಲ್ಲಿ ಶೇ.26, ಆಂದ್ರಪ್ರದೇಶದಲ್ಲಿ ಶೇ.25ರಷ್ಟು ಆದಾಯ ಸಂಗ್ರಹವಾಗಿದೆ.

Articles You Might Like

Share This Article