ಅಹಮದಾಬಾದ್, ಡಿ. 4- ಗುಜರಾತ್ ವಿಧಾನಸಭೆಯ 93 ಕ್ಷೇತ್ರಗಳಿಗೆ ನಾಳೆ 2ನೇ ಹಂತದ ಚುನಾವಣೆ ನಡೆಯಲಿದೆ.
ಒಟ್ಟು 182 ಕ್ಷೇತ್ರಗಳಿರುವ ಗುಜರಾತ್ ವಿಧಾನಸಭೆಗೆ ಡಿ. 1ರಂದು 89 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದಿತ್ತು.
ಶೇ. 63.14ರಷ್ಟು ಮತದಾನವಾಗಿದೆ. ಎರಡನೇ ಹಂತದ ಚುನಾವಣೆಯಲ್ಲಿ ಅಹಮದಾಬಾದ್ ಸೇರಿದಂತೆ ಹಲವಾರು ಮಹತ್ವದ ಕ್ಷೇತ್ರಗಳಿವೆ. ಬಿಜೆಪಿ ಸತತವಾಗಿ 7ನೇ ಬಾರಿ ಅಕಾರ ಹಿಡಿಯಲು ಹವಳಿಸುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಮಂದಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಕಾಂಗ್ರೆಸ್ ವತಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ನಾಯಕರುಗಳು ಪ್ರಚಾರ ನಡೆಸಿದ್ದಾರೆ.
ಇಂದು ರಾಜಸ್ಥಾನ ಪ್ರವೇಶಿಸಲಿರುವ ಭಾರತ್ ಜೊಡೊ ಯಾತ್ರೆ
ಅಮ್‍ಆದ್ಮಿ ಪಕ್ಷ ಕೂಡ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡುತ್ತಿದ್ದು, ಚುನಾವಣಾ
ಕಣ ರಂಗೇರಿತ್ತು. ನಿನ್ನೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಇಂದು ಅಭ್ಯರ್ಥಿಗಳು ಮನೆ, ಮನೆ ಭೇಟಿ ಮೂಲಕ ಮತದಾರರ ಮನವೊಲಿಕೆಗೆ ಹೆಚ್ಚಿಸಿದ್ದಾರೆ.
ಅನ್ನಭಾಗ್ಯಕ್ಕೆ ಕನ್ನ : ನಕಲಿ ನ್ಯಾಯಬೆಲೆ ಅಂಗಡಿಗಳಿಂದ ರೇಷನ್ ಎತ್ತುವಳಿ
ನಾಳೆ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. 14 ಜಿಲ್ಲೆಗಳಲ್ಲಿ ನಡೆಯುವ ಈ ಚುನಾವಣೆಗೆ ಆಯೋಗ ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿವೆ.
gujarat, 2nd phase, election, tomorrow,