ಗುಜರಾತ್ ಮೊದಲ ಹಂತದ ಚುನಾವಣೆ : ಶಾಂತಿಯುತ ಮತದಾನ

Social Share

ಗಾಂನಗರ,ಡಿ.1- ಗುಜರಾತ್‍ನ 19 ಜಿಲ್ಲೆಯ 89 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ಬಿರುಸಿನಿಂದ ನಡೆದಿದೆ. ಆಡಳಿತಾರೂಢ ಬಿಜೆಪಿಗೆ ಈ ಭಾರಿ ಕಾಂಗ್ರೆಸ್ ಹಾಗು ಆಮ್ ಆದ್ಮಿ ಪಕ್ಷ ಪೈಪೋಟಿ ನಡೆಸಿದ್ದು ಭಾರಿ ಕುತೂಹಲ ಕೆರಳಿಸಿದೆ.

ನೆರಯ ಪಂಜಾಬ್ ನಲ್ಲಿ ಜಯಭೇರಿ ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿದ ಹುಮ್ಮಸ್ಸಿನಲ್ಲಿಯೇ ಆಮ್ ಆದ್ಮಿ ಪಕ್ಷ ಗುಜರಾತ್‍ನಲ್ಲಿ ಅಬ್ಬರದ ಪ್ರಚಾರ ನಡೆಸಿ ಬಿಜೆಪಿಗೆ ಪ್ರತಿಸ್ರ್ಪಧಿಯಾಗಿದೆ. ಬೆಳಿಗ್ಗೆ 8 ಗಂಟೆಯಿಂದಲೆ ಮತದಾನ ಆರಂಭಗೊಂಡಿದ್ದು ಮೊದಲ ಹಂತದಲ್ಲಿ ಒಟ್ಟು 2,39,76,670 ಮತದಾನದ ಹಕ್ಕು ಪಡೆದಿದ್ದುಇದರಲ್ಲಿ 497 ತೃತೀಯಲಿಂಗಿ ಮತದಾರರಿದ್ದಾರೆ.

ವಿಧಾನಸಭೆ ಚುನಾವಣೆ : ಆಕಾಂಕ್ಷಿಗಳಿಂದ ಆಂತರಿಕ ಸಮೀಕ್ಷೆ

39 ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳಿಂದ ಒಟ್ಟು 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 25,430 ಮತಗಟ್ಟೆಗಳಿದ್ದು, 38,749 ವಿವಿಪ್ಯಾಟ್‍ಗಳನ್ನು (ಮತದಾರ ಪರಿಶೀಲಿಸಿದ ಪೇಪರ್ ಆಡಿಟ್ ಟ್ರಯಲï) ಬಳಸಲಾಗುತ್ತಿದೆ.

ಕನ್ನಡ ಧ್ವಜ ಹಾರಿಸಿದ ವಿದ್ಯಾರ್ಥಿಗೆ ಮರಾಠಿ ಪುಂಡರಿಂದ ಹಲ್ಲೆ

ಮತ ಚಲಾಯಿಲು ಮತಗಟ್ಟೆ ಬಳಿ ಉದ್ದನೆ ಸಾಲು ಕಂಡು ಬಂದಿದೆ ಈ ಬಾರಿ ಹೆಚ್ಚಿನ ಮತದಾನದ ಸುಳಿವು ನೀಡಿದೆ .ಶಾಂತಯುತವಾಗಿ ಮತದಾನ ಪ್ರಕ್ರಿಯೆ ನಡೆದಿದ್ದು,ಬಿಗಿ ಬಧ್ರತೆ ಮಾಡಲಾಗಿದೆ. ಎರಡನೇ ಹಂತದ ಮತದಾನ ಡಿಸೆಂಬರ್ 5 ರಂದು ನಡೆಯಲಿದೆ. ಡಿಸೆಂಬರ್ 8 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

Gujarat Assembly Election 2022, first, Phase, Voting,

Articles You Might Like

Share This Article