ಅಹಮದಾಬಾದ್,ಡಿ.8- ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ 135ಕ್ಕೂ ಜೀವಗಳನ್ನು ಬಲಿ ಪಡೆದಿದ್ದ ಮೊರ್ಬಿ ಸೇತುವೆ ದುರಂತ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಳೆದ ಅ.31ರಂದು ರಾತ್ರಿ ಮೊರ್ಬಿಯ ಮಚ್ಚುನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಕುಸಿದು ಬಿದ್ದು 135ಕ್ಕೂ ಹೆಚ್ಚು ಜನರನ್ನು ಬಲಿತ ತೆಗೆದುಕೊಂಡಿತ್ತು.
ಈ ಘಟನೆ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು, ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಆದರೆ ಗುಜರಾತ್‍ನ ಮತದಾರರು ಇದಕ್ಕೆ ಓಗೊಡದೆ ಆಡಳಿತರೂಢ ಬಿಜೆಪಿಯನ್ನು ಸತತ 7ನೇ ಬಾರಿಗೂ ಅಕಾರಕ್ಕೆ ತಂದಿರುವುದು ಸ್ಪಷ್ಟವಾಗಿದೆ.
ಮೊರ್ಬಿ ದುರಂತ ಸಂಭವಿಸಿದಾಗ ಬಿಜೆಪಿ ಸ್ಥಳೀಯ ಶಾಸಕರಿಗೆ ಟಿಕೆಟ್ ಕೊಡದೆ ,ಜೀವದ ಹಂಗುತೊರೆದು ಜನರ ಜೀವವನ್ನು ರಕ್ಷಣೆ ಮಾಡಿದ ಸ್ಥಳೀಯ ಯುವಕನೊಬ್ಬನಿಗೆ ಟಿಕೆಟ್ ನೀಡಿತ್ತು. ಇದೀಗ ಈ ಯುವಕ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದಾನೆ.
ರಾಜ್ಯದ ಕೆಲವು ಬಿಜೆಪಿ ನಾಯಕರಿಗೆ ಆತಂಕ ಹುಟ್ಟಿಸಿದ ಗುಜರಾತ್ ಗೆಲುವು..!
ಈ ಘಟನೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಮೇಲೆ ಮತದಾರರು ಕಿಡಿಕಾರಿದ್ದರು. ಹೀಗಾಗಿ ತುಸು ಅದಿರಿದ್ದ ಬಿಜೆಪಿ ನಾಯಕರು ಚುನಾವಣಾ ತಂತ್ರವನ್ನೇ ಬದಲಾಯಿಸಿ ಗೆಲ್ಲಲು ತಮ್ಮದೇ ಆದ ಮಾರ್ಗ ರೂಪಿಸಿದರು.
ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಮುಖ್ಯಮಂತ್ರಿ ಭೂಪೇಂದ್ರ ಪಾಟೀಲ್ ತಕ್ಷಣವೇ ಪರಿಹಾರ ಘೋಷಿಸಿ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಅದೇ ರೀತಿ ಪ್ರಧಾನಿ ಕಾರ್ಯಾಲಯದಿಂದಲೂ ಘಟನೆಯಲ್ಲಿ ಮಡಿದವರಿಗೆ ಪರಿಹಾರವನ್ನು ಘೋಷಿಸಲಾಯಿತು. ಅಲ್ಲದೆ ಘಟನಾ ಸ್ಥಳಕ್ಕೆ ಖುದ್ದು ಮೋದಿಯವರೇ ಆಗಮಿಸಿ ಕಂಬನಿ ಮಿಡಿದಿದ್ದರು.
ಇನ್ಮುಂದೆ ಗ್ರಾಮ ಲೆಕ್ಕಿಗರ ಹುದ್ದೆ ಹೆಸರು ಗ್ರಾಮ ಆಡಳಿತಾಧಿಕಾರಿ
ಸೇತುವೆ ನಿರ್ಮಾಣ ಮಾಡಿದ್ದ ಗುತ್ತಿಗೆದಾರರು ಹಾಗೂ ಕಾಮಗಾರಿ ನಡೆಸಿದ ಕಂಪನಿಯ ಮುಖ್ಯಸ್ಥರನ್ನು ಬಂಸಲಾಯಿತು. ಸಹಜವಾಗಿ ಬಿಜೆಪಿ ತೆಗೆದುಕೊಂಡ ಈ ಕ್ರಮಗಳು ಸಾರ್ವಜನಿಕರಿಂದ ಮತ ಗಿಟ್ಟಿಸಲು ಕಾರಣವಾಯಿತು.
ದೇಶದ ಗಮನಸೆಳೆದಿದ್ದ ದುರಂತವನ್ನು ಹತ್ತಿಕ್ಕಲು ಬಿಜೆಪಿ ಅನುಸರಿಸಿದ ತಂತ್ರ ಗೆಲುವಿಗೆ ಎಲ್ಲಿಯೂ ಅಡ್ಡಿಪಡಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
Gujarat, Assembly election results, Morbi Bridge, disaster,