ಗುಜರಾತ್‍ನಲ್ಲಿ ಶಾಂತಿಯುತ ಮತದಾನ

Social Share

ಅಹಮದಾಬಾದ್,ಡಿ.5- ಗುಜರಾತ್ ವಿಧಾನಸಭೆಯ 93 ಕ್ಷೇತ್ರಗಳಿಗೆ ಇಂದು ಎರಡನೇ ಹಂತದ ಮತದಾನ ನಡೆದಿದೆ.
ಬೆಳಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ, ಬಿಸಿಲೇರುತ್ತಿದ್ದಂತೆ ಚುರುಕು ಪಡೆದಿದೆ. ಪ್ರಧಾನಿ ಸೇರಿದಂತೆ ಅನೇಕ ಪ್ರಮುಖರು ಮುಂಜಾನೆಯೇ ಟ್ವೀಟ್ ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಪ್ರಮುಖವಾದ ಅಹಮದಾಬಾದ್, ವಡೋದರಾ, ಗಾಂಧಿನಗರ ಸೇರಿದಂತೆ ಇತರ 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಆಡಳಿತಾರೂಢ ಬಿಜೆಪಿ ಮತ್ತು ಹೊಸದಾಗಿ ಗುಜರಾತ್ ಅಖಾಡ ಪ್ರವೇಶಿಸಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್‍ಆದ್ಮಿ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 90 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮಿತ್ರಪಕ್ಷ ಎನ್‍ಸಿಪಿಗೆ ಎರಡು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ.

ಕೇಂದ್ರ ಚುನಾವಣಾ ಆಯೋಗ ಎರಡನೇ ಹಂತಕ್ಕೆ ಒಟ್ಟು 2.5 ಕೋಟಿ ಜನರನ್ನು ಅರ್ಹ ಮತದಾರರೆಂದು ಗುರುತಿಸಿದೆ. 285 ಮಂದಿ ಪಕ್ಷೇತರರು ಸೇರಿ 833 ಮಂದಿ ಕಣದಲ್ಲಿದ್ದು, ಅವರಲ್ಲಿ 764 ಮಂದಿ ಪುರುಷರು, 69 ಮಂದಿ ಮಹಿಳೆಯರಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ಜನರ ಅಪೇಕ್ಷೆ : ಶಾಸಕ ಜಮೀರ್

ರಾಜಧಾನಿ ಅಹಮದಾಬಾದ್‍ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜಭವನದಿಂದ ತೆರಳಿ ರಾಣಿಪ್‍ನಲ್ಲಿನ ನಿಶಾನ್ ಪಬ್ಲಿಕ್ ಶಾಲೆಯಲ್ಲಿ ಬೆಳಗ್ಗೆ ಮತದಾನ ಮಾಡಿದರು. ಹಾದಿಮಧ್ಯೆ ತಮ್ಮನ್ನು ನೋಡಲು ರಸ್ತೆಯ ಇಕ್ಕೇಲಗಳಲ್ಲಿ ಸೇರಿದ್ದ ಜನ ಸ್ತೋಮದತ್ತ ಪ್ರಧಾನಿ ಕೈ ಬೀಸಿ ಶುಭಾಷಯ ವಿನಿಮಯ ಮಾಡಿಕೊಂಡರು.

ಮುಂಜಾನೆಯೇ ಟ್ವೀಟ್ ಮಾಡಿ ಎರಡನೇ ಹಂತದ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಬೇಕು, ಪ್ರಮುಖವಾಗಿ ಯುವ ಹಾಗೂ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಕರೆ ನೀಡಿದರು.

ಮತದಾನದ ಬಳಿಕ ಅವರು, ಪ್ರಜಾಪ್ರಭುತ್ವ ಆಡಂಬರದ ಹಬ್ಬವಾದ ಚುನಾವಣೆಯಲ್ಲಿ ಗುಜರಾತ್, ದೆಹಲಿ, ಹಿಮಾಚಲ ಪ್ರದೇಶದ ಜನ ಭಾಗಿಯಾಗಿದ್ದಾರೆ. ಶಾಂತಿಯುತ ಚುನಾವಣೆ ನಡೆಸಿದ್ದಕ್ಕಾಗಿ ಚುನಾವಣಾ ಆಯೋಗವನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಅಮರನಾಥಗೌಡ ಹಾಗೂ ದ್ವಾರಕೀಶ್‍ಗೆ ಗೌರವ ಡಾಕ್ಟರೇಟ್ ಪ್ರದಾನ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅಹಮದಾಬಾದ್‍ನ ನರನ್‍ಪುರ ಮತಗಟ್ಟೆಯಲ್ಲಿ ಮತದಾನ ಮಾಡಿದರೆ.
ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ವಿನಯ್‍ಕುಮಾರ್ ಸಕ್ಸೇನಾ ಪತ್ನಿ ಸಮೇತರಾಗಿ ಅಹಮದಾಬಾದ್‍ನಲ್ಲಿ, ಮಾಜಿ ಮುಖ್ಯಮಂತ್ರಿಯೂ ಆಗಿರುವ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೇನ್, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಶೈಲಜ ಅನುಪಂ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹಾರ್ದಿಕ್ ಪಟೇಲ್ ಚಂದ್ರನಗರ್‍ನ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಪತ್ನಿ ಸಮೇತರಾಗಿ ಆಗಮಿಸಿ ಮತ ಹಾಕಿದರು.

ವಿಶ್ವಕಪ್ ಪುಟ್ಬಾಲ್ ಕ್ವಾರ್ಟರ್ ಫೈನಲ್ ತಲುಪಿದ ಇಂಗ್ಲೆಂಡ್

ಈ ಮೊದಲು 89 ಕ್ಷೇತ್ರಗಳಿಗೆ ಡಿಸೆಂಬರ್ 1ರಂದು ಚುನಾವಣೆ ನಡೆದು, ಶೇ.63.14ರಷ್ಟು ಮತದಾನವಾಗಿತ್ತು. ಗುಜರಾತ್‍ನಲ್ಲಿ ಒಟ್ಟು 182 ವಿಧಾನಸಭಾ ಕ್ಷೇತ್ರಗಳಿದ್ದು, ಎರಡು ಹಂತದಿಂದ 1621 ಅಭ್ಯರ್ಥಿಗಳ ಕಣದಲ್ಲಿದ್ದಾರೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ.

#Gujarat, #Assembly, #Elections, #Peaceful,

Articles You Might Like

Share This Article