ಅಹಮದಾಬಾದ್,ಡಿ.5- ಗುಜರಾತ್ ವಿಧಾನಸಭೆಗೆ ನಡೆಯುತ್ತಿರುವ ಎರಡನೆ ಹಂತದ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಹಮದಾಬಾದ್‍ನ ನಿಶಾನ್ ಪಬ್ಲಿಕ್ ಶಾಲೆಯಲ್ಲಿ ಸರದಿ ಸಾಲಿನಲ್ಲಿ ನಿಂತು ತಮ್ಮ ಮತ ಚಲಾಯಿಸಿದರು.
ಮತದಾನ ಮಾಡಿದ ನಂತರ ನೆರೆದಿದ್ದ ಜನ ಸಮೂಹದತ್ತ ತಾವು ಮತದಾನ ಮಾಡಿದ ಬೆರಳು ತೋರಿಸಿ ನಸುನಗುತ್ತ ಮೋದಿ ಅವರು ಮತದಾನದ ಕೇಂದ್ರದ ಬಳಿ ಇರುವ ತಮ್ಮ ಅಣ್ಣ ಸೋಮ ಮೋದಿ ಅವರ ಮನೆಗೆ ತೆರಳಿದರು.
ನಂತರ ಅವರು ನಾನು ನನ್ನ ಹಕ್ಕು ಚಲಾಯಿಸಿದ್ದೇನೆ. ನೀವು ಅದರಲ್ಲೂ ಪ್ರಮುಖವಾಗಿ ಯುವ ಮತದಾರರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಅವರು ಟ್ವಿಟರ್‍ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ G-20 ಶೃಂಗದ ಪ್ರತಿನಿಧಿಗಳ ಸಭೆ
ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಹಾರ್ದಿಕ್ ಪಟೇಲ್ ಅವರು ಎರಡನೆ ಸುತ್ತಿನಲ್ಲಿ ರಾಜ್ಯದ ಜನ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ.
1990 ರಿಂದ ಅಹಮದಾಬಾದ್ ನಗರದ ಮೇಲೆ ಬಿಜೆಪಿ ಬಿಗಿ ಹಿಡಿತ ಹೊಂದಿದೆ.ಉತ್ತರ ಮತ್ತು ಮಧ್ಯ ಗುಜರಾತ್‍ನ 14 ಜಿಲ್ಲಾಗಳ 93 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಮತ್ತು ಅಂತಿಮ ಹಂತದಲ್ಲಿ ಮತದಾನ ನಡೆಯುತ್ತಿದೆ. ಎರಡನೇ ಹಂತದ ಚುನಾವಣೆಯಲ್ಲಿ 61 ಪಕ್ಷಗಳಿಂದ 833 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಭವಿಷ್ಯವನ್ನು 2.51 ಕೋಟಿ ಮತದಾರರು ನಿರ್ಧರಿಸಲಿದ್ದಾರೆ.
ಕಚ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‍ನಲ್ಲಿ 89 ಸ್ಥಾನಗಳಿಗೆ ಮೊದಲ ಹಂತದ ಮತದಾನವು ಡಿಸೆಂಬರ್ 1 ರಂದು ಕೊನೆಗೊಂಡಿತು, ಒಟ್ಟಾರೆ ಶೇ. 63.31 ರಷ್ಟು ಮತದಾನವಾಗಿದೆ.
ಬಾಂಗ್ಲಾ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್
ಮೊದಲ ಹಂತದ ಚುನಾವಣೆಯಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿರುವುದರಿಂದ ಬಿಜೆಪಿಯವರು ಎರಡನೆ ಹಂತದ ಚುನಾವಣೆಯಲ್ಲಿ ಹೆಚ್ಚು ಮಂದಿ ಮತ ಚಲಾಯಿಸುವ ಮೂಲಕ ಮತ್ತೊಮ್ಮೆ ಬಿಜೆಪಿ ಮಡಿಲಿಗೆ ಆಡಳಿತ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
Gujarat, #Assembly, #Elections, #Voting, #PM Modi, #Ranip,