ಗುಜರಾತ್ ಚುನಾವಣೆ : ಬ್ಯಾಂಕ್ ವಹಿವಾಟುಗಳ ಮೇಲೆ ಹದ್ದಿನ ಕಣ್ಣು

Social Share

ಅಹಮದಾಬಾದ್,ನ.6- ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಬ್ಯಾಂಕ್ ವಹಿವಾಟುಗಳ ಮೇಲೆ ಹದ್ದಿನ ಕಣ್ಣಿರಿಸಿದೆ. ಗುಜರಾತ್‍ನ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5ರಂದು ಚುನಾವಣೆ ನಿಗದಿಯಾಗಿದೆ. ಪ್ರತಿ ಕ್ಷೇತ್ರದ ಅಭ್ಯರ್ಥಿಯು ಪ್ರಚಾರಕ್ಕಾಗಿ 40 ಲಕ್ಷ ರೂ. ಸೀಮಿತವಾಗಿ ಖರ್ಚು ಮಾಡಬೇಕಿದೆ. ಇದಕ್ಕಾಗಿ ಪ್ರತ್ಯೇಕ ಖಾತೆ ತೆರೆಯಬೇಕು.

10 ಸಾವಿರ ರೂ.ಗಳ ಮೇಲ್ಪಟ್ಟ ಹಣದ ವಹಿವಾಟನ್ನು ಕಡ್ಡಾಯವಾಗಿ ಚೆಕ್, ಆರ್‍ಟಿಜಿಎಸ್ ಅಥವಾ ಡ್ರಾಫ್ಟ್‍ಗಳ ಮೂಲಕವೇ ನಿರ್ವಹಣೆ ಮಾಡಬೇಕು ಎಂಬುದು ಆರ್‍ಬಿಐನ ನಿಯಮವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಎಲ್ಲ ಬ್ಯಾಂಕ್‍ಗಳಿಗೂ ಸೂಚನೆ ರವಾನಿಸಿದ್ದು, 10 ಲಕ್ಷ ಮೇಲ್ಪಟ್ಟ ವಹಿವಾಟಿನ ಮೇಲೆ ನಿಗಾ ಇರಿಸುವಂತೆ ಸೂಚಿಸಿದೆ.

ಅಷ್ಟೇ ಅಲ್ಲದೆ ಒಂದು ಲಕ್ಷ ಮೇಲ್ಪಟ್ಟ ವಹಿವಾಟುಗಳನ್ನು ಆಯೋಗದ ಗಮನಕ್ಕೆ ತರುವಂತೆ ತಾಕೀತು ಮಾಡಿದೆ.
ಅಭ್ಯರ್ಥಿಗಳ ಮತ್ತು ಅವರ ಸಂಬಂಧಿಕರ ಖಾತೆಗಳ ಮೇಲೆ ನಿಗಾ ಇರಿಸಿರಬೇಕು ಎಂದು ವೆಚ್ಚ ನಿರ್ವಹಣೆಯ ಉಸ್ತುವಾರಿಗಾಗಿ ನಿಯೋಜಿತರಾಗಿರುವ 33 ಜಿಲ್ಲೆಗಳ ನೋಡಲ್ ಅಧಿಕಾರಿಗಳಿಗೆ ಆಯೋಗ ಸೂಚನೆ ನೀಡಿದೆ.

Articles You Might Like

Share This Article