ಗುಜರಾತ್ನಲ್ಲಿ 120 ಕೆಜಿ ಹೆರಾಯಿನ್ ವಶ
ಅಹಮದಾಬಾದ್,ನ.15- ಪಾನ ನಿಷೇಧ ಜಾರಿಯಲ್ಲಿರುವ ಗುಜರಾತ್ನಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದ್ದು, ಭಯೋತ್ಪಾದನಾ ನಿಯಂತ್ರಣ ಘಟಕ 600 ಕೋಟಿ ರೂ.ಗೂ ಅಕ ಮೊತ್ತದ 120 ಕೆಜಿ ಹೆರಾಯಿನ್ನ್ನು ಗ್ರಾಮವೊಂದರದಿಂದ ವಶಪಡಿಸಿಕೊಂಡಿದೆ.
ನವಾಲಾಕಿ ಬಂದರು ಸಮೀಪ ಮೊರಾಬಿ ಪ್ರದೇಶದ ಜಿಂಜೂಡ ಗ್ರಾಮದಲ್ಲಿ ಮಾದಕ ವಸ್ತು ಅಡಗಿಸಿಟ್ಟಿರುವ ಬಗ್ಗೆ ಮಾಹಿತಿ ಪಡೆದ ಭಯೋತ್ಪಾದನಾ ನಿಗ್ರಹ ದಳ ಸ್ಥಳೀಯ ಪೊಲೀಸರ ಜೊತೆ ಶೋಧ ಕಾರ್ಯಾಚರಣೆ ನಡೆಸಿದಾಗ ಭಾರೀ ಪ್ರಮಾಣದ ಈ ಸರಕು ಪತ್ತೆಯಾಗಿದೆ.
ಮಾದಕ ವಸ್ತು ದಾಸ್ತಾನಿಗೆ ಸಂಬಂಧಪಟ್ಟಂತೆ ಮೂವರನ್ನು ಬಂಸಲಾಗಿದೆ. ಗಲ್ ರಾಷ್ಟ್ರದಿಂದ ಈ ಮಾದಕವಸ್ತುಗಳನ್ನು ಕಳ್ಳಸಾಗಾಣಿಕೆ ಮೂಲಕ ತಂದಿರುವ ಮಾಹಿತಿ ಇದೆ.
ಕಳೆದ ಸೆಪ್ಟೆಂಬರ್ನಲ್ಲಿ ಕಂದಾಯ ಗುಪ್ತದಳದ ನಿರ್ದೇಶನಾಲಯ ಕಚ್ನ ಮಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರೂ. ಮೌಲ್ಯದ 3 ಸಾವಿರ ಕೆಜಿ ಹೆರಾಯಿನ್ನ್ನು ವಶಪಡಿಸಿಕೊಂಡಿತ್ತು.
ಆಫ್ಘಾನಿಸ್ತಾನದಿಂದ ಎರಡು ಹಡುಗುಗಳಲ್ಲಿ ಕಳ್ಳಸಾಗಾಣಿಕೆ ಮಾಡಲಾಗಿತ್ತು. ಆ ಪ್ರಕರಣದ ತನಿಖೆ ಇನ್ನು ಪೂರ್ಣಗೊಂಡಿಲ್ಲ. ಹಲವು ಪ್ರಭಾವಿಗಳ ಹೆಸರು ಕೇಳಿಬಂದಿದ್ದು, ರಾಷ್ಟ್ರೀಯ ತನಿಖಾ ದಳವೇ ತನಿಖೆ ಕೈಗೊಂಡಿದೆ.
ಈ ನಡುವೆ ಹೊಸದಾಗಿ 120 ಕೆಜಿ ಹೆರಾಯಿನ್ ಪತ್ತೆಯಾಗಿರುವುದು ಗುಜರಾತ್ ಮಾದಕವ್ಯಸನಿಗಳ ನೆಲದಾಣವಾಗುತ್ತಿದೆಯೇ ಅಥವಾ ಕಳ್ಳಸಾಗಾಣಿಕೆಯ ಹೆಬ್ಬಾಗಿಲೇ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ.