ಗುಜರಾತ್ ಗೆಲುವು ರಾಜ್ಯ ಬಿಜೆಪಿಗೆ ಟಾನಿಕ್

Social Share

ಬೆಂಗಳೂರು,ಡಿ.8- ಸಾಲು ಸಾಲು ಆರೋಪಗಳಿಂದ ಕೆಂಗೆಟ್ಟಿದ್ದ ಆಡಳಿತಾರೂಢ ಬಿಜೆಪಿಗೆ ಗುಜರಾತ್ ವಿಧಾನಸಭೆ ಚುನಾ ವಣೆಯ ಪ್ರಚಂಡ ಜಯ ಟಾನಿಕ್ ನೀಡಿದೆ. 2023ರಲ್ಲಿ ಮೇನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಭಾರೀ ಹುಮ್ಮಸ್ಸಿ ನಿಂದ ಮುನ್ನುಗ್ಗುಲು ಕಮಲ ನಾಯಕರಿಗೆ ಈ ಫಲಿತಾಂಶ ಬೂಸ್ಟ್ ನೀಡಿದ್ದು, ಮುಂದಿನ ದಿನಗಳಲ್ಲಿ ರಣತಂತ್ರವು ಬದಲಾಗಲಿದೆ.

ಶೇ.40ರಷ್ಟು ಕಮೀಷನ್ ಆರೋಪ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹೆಸರುಗಳನ್ನು ತೆಗೆದುಹಾಕಿರುವ, ಸಚಿವರ ಮೇಲೆ ಕೇಳಿಬಂದಿದ್ದ ಭ್ರಷ್ಟಾಚಾರ ಆರೋಪ, ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ಹೀಗೆ ಸಾಲುಸಾಲು ಆರೋಪಗಳಿಂದ ಬಿಜೆಪಿ ಒಂದು ರೀತಿ ನಾವಿಕನಿಲ್ಲದ ಹಡಗಿನಿಂತಾಗಿತ್ತು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಕೇಂದ್ರ ಬಿಜೆಪಿ ವರಿಷ್ಠರು ಬಲವಂತವಾಗಿ ರಾಜೀನಾಮೆ ಪಡೆದ ನಂತರ ಅವರು ಕೂಡ ಅಷ್ಟೊಂದು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರಲಿಲ್ಲ.

ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ(LiVE)

ಪ್ರಮುಖ ಸಭೆಸಮಾರಂಭಗಳು, ಜನಸಂಪರ್ಕ ಯಾತ್ರೆ ಹೊರತುಪಡಿಸಿದರೆ ಬಿಜೆಪಿ ನಾಯಕರು ಕರೆದರೆ ಯಡಿಯೂರಪ್ಪ ಪಾಲ್ಗೊಳ್ಳುತ್ತಿದ್ದರು. ಇದು ಸಹಜವಾಗಿ ಬಿಜೆಪಿ ನಾಯಕರಿಗೆ ನಿದ್ದೆಗೆಡುವಂತೆ ಮಾಡಿತ್ತು.
ಇದೀಗ ಗುಜರಾತ್‍ನಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿರುವುದು ಇಲ್ಲಿನ ನಾಯಕರಿಗೆ ಹುಮ್ಮಸ್ಸು ತಂದಿದ್ದು, ಅಲ್ಲಿನ ಫಲಿತಾಂಶ ಕರ್ನಾಟಕದ ಮೇಲೂ ಪರಿಣಾಮ ಬೀರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಯಾರು ಏನೇ ಹೇಳಿದರೂ ಗುಜರಾತ್‍ನಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಅಲೆ, ಹಿಂದುತ್ವ, ಅಭಿವೃದ್ಧಿ ಮಂತ್ರ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ವಿಧಾನಸಭೆ ಚುನಾವಣೆ ಫಲಿತಾಂಶ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಮೊರ್ಬಿಯಲ್ಲಿ ಸೇತುವೆ ದುರಂತ ಸಂಭವಿಸಿದ್ದು, ಬಿಜೆಪಿಗೆ ಭಾರೀ ಹೊಡೆತ ಬೀಳಲಿದೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ಇವೆಲ್ಲವನ್ನೂ ಬುಡಮೇಲು ಮಾಡಿದ ಬಿಜೆಪಿ ಮೋದಿ, ಅಮಿತ್ ಷಾ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೂಲಕ ಭರ್ಜರಿ ಪ್ರಚಾರ ನಡೆಸಿ ತಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸಿತ್ತು.
ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಸಚಿವರು ಮತ್ತು ಶಾಸಕರಿಗೆ ನಿರ್ದಾಕ್ಷಿಣ್ಯವಾಗಿ ಟಿಕೆಟ್ ನಿರಾಕರಿಸಲಾಗಿತ್ತು. ಪಕ್ಷಕ್ಕೆ ಸೆಡ್ಡು ಹೊಡೆದವರನ್ನು ಮುಲಾಜಿಲ್ಲದೆ ಕಿತ್ತು ಹಾಕಲಾಗಿತ್ತು.

ಮೋದಿ ನಾಮಬಲವೊಂದಿದ್ದರೆ ಸಾಕು ಗೆದ್ದು ಬರುತ್ತೇವೆಂಬ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ ಕರ್ನಾಟಕದಲ್ಲೂ ಇದೇ ತಂತ್ರವನ್ನು ಅನುರಿಸಲು ಮುಂದಾಗಿದೆ. ಬರುವ ದಿನಗಳಲ್ಲಿ ಬಿಜೆಪಿಯ ರಣತಂತ್ರ ಸಂಪೂರ್ಣವಾಗಿ ಬದಲಾಗಿದ್ದು, ತಿಂಗಳಿಗೆ ಎರಡೆರಡು ಬಾರಿ ನರೇಂದ್ರಮೋದಿ ಅಮಿತ್ ಷಾ, ಯೋಗಿ ಆದಿತ್ಯನಾಥ್ ಸೇರಿದಂತೆ ಕೇಂದ್ರದಿಂದ ಘಟಾನುಘಟಿ ನಾಯಕರನ್ನು ರಾಜ್ಯಕ್ಕೆ ಕರೆಸಲಿದೆ.

ಗಂಗೂಲಿ, ರಿಕ್ಕಿ ದಾಖಲೆ ಸರಿಗಟ್ಟಲು ಕೊಹ್ಲಿ ತವಕ

ಅಭಿವೃದ್ಧಿ ಮತ್ತು ಹಿಂದುತ್ವವೇ ಬರಲಿರುವ ಚುನಾವಣೆಯಲ್ಲಿ ಪ್ರಮುಖ ಪ್ರಚಾರದ ಅಸ್ತ್ರವಾಗಲಿದೆ. ಮೋದಿ ಅವರಿಂದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ, ಜಾತಿವಾರು ಸಮಾವೇಶಗಳಿಗೆ ಅಮಿತ್ ಷಾ, ಹಿಂದುತ್ವಕ್ಕೆ ಯೋಗಿ ಆದಿತ್ಯನಾಥ್ ಅವರಿಂದ ಪ್ರಚಾರ ನಡೆಸಲು ಬಿಜೆಪಿ ಲೆಕ್ಕಾಚಾರ ಹಾಕಿದೆ.

ಅಕ್ಷರಶಃ ಗುಜರಾತ್ ಮಾದರಿಯನ್ನೇ ಅಳವಡಿಸಿಕೊಳ್ಳಲು ಮುಂದಾಗಿರುವ ಬಿಜೆಪಿ ಟಿಕೆಟ್ ಹಂಚಿಕೆ, ಚುನಾವಣೆ ಪ್ರಚಾರ ಸೇರಿದಂತೆ ಪ್ರತಿಯೊಂದನ್ನು ಕೇಂದ್ರ ವರಿಷ್ಠರ ಹೆಗಲಿಗೆ ನೀಡಲಿದೆ.

ಗಡಿ ದಾಟಿದ ಬಿಎಸ್‍ಎಫ್ ಯೋಧನನ್ನ ವಶಕ್ಕೆ ಪಡೆದ ಪಾಕ್

ಬರುವ ದಿನಗಳಲ್ಲಿ ಶಿವಮೊಗ್ಗ ಮತ್ತು ಬಿಜಾಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರಮೋದಿ ಅವರಿಂದ ಉದ್ಘಾಟನೆ ನೆರವೇರಲಿದೆ. ಇದೇ ರೀತಿ ಹೊಸ ಯೋಜನೆಗಳಿಗೂ ಮೋದಿಯೇ ಚಾಲನೆ ಕೊಡಲಿದ್ದು, ಕರ್ನಾಟಕದಲ್ಲಿ ಬಿಜೆಪಿಗೆ ನರೇಂದ್ರಮೋದಿ ಹೆಸರೇ ಬೂಸ್ಟ್ ನೀಡಲಿದೆ ಎಂಬುದು ಸ್ಥಳೀಯ ನಾಯಕರ ನಿರೀಕ್ಷೆಯಾಗಿದೆ.

Gujarat, BJP victory, Karnataka assembly elections,

Articles You Might Like

Share This Article