ಮಗಳ ಅಶ್ಲೀಲ ವಿಡಿಯೋ ಮಾಡಿದ್ದನ್ನು ಪ್ರಶ್ನಿಸಿದ ಯೋಧನನ್ನು ಕೊಂದ ಕಿರಾತಕರು

Social Share

ಅಹಮದಾಬಾದ್,ಡಿ.27-ಮಗಳ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನ್ನು ಪ್ರಶ್ನಿಸಲು ಹೋದ ಬಿಎಸ್‍ಎಫ್ ಯೋಧನನ್ನು ಆರೋಪಿ ಕುಟುಂಬ ವರ್ಗದವರು ಬಡಿಗೆಗಳಿಂದ ಬಡಿದು ಕೊಂದಿರುವ ಹೃದಯ ವಿದ್ರಾವಕ ಘಟನೆ ಗುಜರಾತ್‍ನಲ್ಲಿ ನಡೆದಿದೆ.

ದುಷ್ಕರ್ಮಿಗಳಿಂದ ಹತ್ಯೆಯಾದ ಯೋಧನನ್ನು ಮೆಲ್ಜಿಭಾಯಿ ವಘೇಲಾ ಎಂದು ಗುರುತಿಸಲಾಗಿದೆ.
ಯೋಧನನ್ನು ಹತ್ಯೆ ಮಾಡಿದ ಏಳು ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ಖಚಿತ ಪಡಿಸಿದ್ದಾರೆ.

ವಘೇಲಾ ಅವರು ಪುತ್ರಿ ಸಹಪಾಠಿಯಾಗಿದ್ದ ಶೈಲೇಶ್ ಅಕಾ ಸುನಿಲ್ ಯಾದವ್ ಎಂಬಾತ ಆಕೆಯ ಬಾಯ್‍ಫ್ರೇಂಡ್ ಆಗಿದ್ದ. ಈತ ಆಕೆಯೊಂದಿಗೆ ಕಳೆದಿದ್ದ ಸಮಯದ ವಿಡಿಯೋಗಳನ್ನು ಇತ್ತಿಚೆಗೆ ಆತ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ.

ಸಂವಿಧಾನ ಧಾರ್ಮಿಕ ಪುಸ್ತಕ ಎಂಬಂತೆ ನಾವು ನಡೆದುಕೊಳ್ಳುತ್ತಿದ್ದೇವೆ : ಕೇಂದ್ರ ಸಚಿವ

ಇದರಿಂದ ಮನನೊಂದಿದ್ದ ವಘೇಲಾ ಕುಟುಂಬ ವರ್ಗದವರು ಶೈಲೇಶ್ ಮನೆಗೆ ತೆರಳಿ ನ್ಯಾಯ ಪಂಚಾಯಿತಿ ನಡೆಸಲು ತೆರಳಿದ್ದರು. ಈ ಸಂದರ್ಭದಲ್ಲಿ ಶೈಲೇಶ್ ಮತ್ತವರ ಏಳು ಸಂಬಂಧಿಕರು ವಘೇಲಾ ಮತ್ತು ಅವರ ಜತೆಗೆ ಬಂದಿದ್ದವರ ಮೇಲೆ ಬಡಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಘಟನೆಯಲ್ಲಿ ವಘೇಲಾ ಸ್ಥಳದಲ್ಲೇ ಮೃತಪಟ್ಟಿದ್ದು,ಆತನ ಜತೆಗೆ ಬಂದವರಿಗೆ ಮಾರಣಾಂತಿಕ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಏಳು ಮಂದಿ ಸೇರಿಕೊಂಡು ಯೋಧನನ್ನು ಹತ್ಯೆಗೈದಿರುವುವದನ್ನು ನದಿಯಾದ್ ಜಿಲ್ಲೆಯ ಡಿಎಸ್‍ಪಿ ವಿ.ಆರ್.ಬಾಜ್‍ಪೇಯಿ ಖಚಿತ ಪಡಿಸಿದ್ದಾರೆ.

ಇಂದು ದೇಶಾದ್ಯಂತ ಕೋವಿಡ್ ಮಾಕ್‍ ಡ್ರಿಲ್

ಯೋಧನನ್ನು ಹತ್ಯೆ ಮಾಡಿರುವ 7 ಮಂದಿಯನ್ನು ಸಿನಿಮಿಯ ರೀತಿ ಬಂಧಿಸಲಾಗಿದ್ದು ಎಲ್ಲರ ವಿರುದ್ಧ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Gujarat, BSF soldier, killed, for objecting, daughter, video,

Articles You Might Like

Share This Article