ಗುಜರಾತ್ ಚುನಾವಣೆಗೆ ದಿನಗಣನೆ : ಮತ್ತೆ ನೆನಪಾಗುತ್ತಿದ್ದಾರೆ ಈ ಹೋರಾಟಗಾರರು

Social Share

ಅಹಮದಾಬಾದ್,ಅ.23- ಗುಜರಾತ್ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮತ್ತೆ ಈ ಮೂವರು ನೆನಪಾಗುತ್ತಿದ್ದಾರೆ. ಯಾರು ಅಂತೀರಾ… ಅವರೇ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್ ಹಾಗೂ ಜಿಗ್ನೇಶ್ ಮೇವಾನಿ.

ಕಳೆದ 2017 ರ ಚುನಾವಣೆ ಪೂರ್ವದಲ್ಲಿ, ಮೂವರು ಯುವ ನಾಯಕರಾದ ಅಲ್ಪೇಶ್ ಠಾಕೋರ್, ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೇವಾನಿ ಅವರು ಗುಜರಾತ್ ಸರ್ಕಾರದ ವಿರುದ್ಧ ಸಾಮಾಜಿಕ, ಸಾಂಸ್ಕøತಿಕ ಅಥವಾ ದಮನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದವರು.

ಮಾತ್ರವಲ್ಲ, ಈ ಮೂವರು ಬಿಜೆಪಿ ನೇತೃತ್ವದ ಆನಂದಿಬೆನ್ ಪಟೇಲ್ ಸರ್ಕಾರದ ಅಡಿಪಾಯವನ್ನು ಅಲುಗಾಡಿಸಿ, ಅಂತಿಮವಾಗಿ ಅದರ ಪದಚ್ಯುತಿಗೆ ಕಾರಣವಾದ ಅಸಾಧಾರಣ ವ್ಯಕ್ತಿಗಳಾಗಿ ರೂಪುಗೊಂಡಿದ್ದವರು.

ಚೀನಾ ಅಧ್ಯಕ್ಷರಾಗಿ 3ನೇ ಅವಧಿಗೆ ಕ್ಸಿ ಜಿನ್‍ಪಿಂಗ್ ಆಯ್ಕೆ

ಇದೀಗ ಮತ್ತೆ ಗುಜರಾತ್ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಈ ಮೂವರು ಕ್ರಾಂತಿಕಾರಿ ಯುವಕರು ಎಲ್ಲರಿಗೂ ನೆನಪಾಗುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಇವರು ಯಾವ ಜಾದೂ ಮಾಡಲಿದ್ದಾರೆ ಎಂಬುದು ಇದೀಗ ಎಲ್ಲರ ಕುತೂಹಲ ಕೆರಳಿಸಿದೆ.

ಹಾರ್ದಿಕ್ ಪಟೇಲ ಅವರು, ಪಾಟಿದಾರ್ ಸಮುದಾಯಕ್ಕೆ ಒಬಿಸಿ ಸ್ಥಾನಮಾನದ ಬೇಡಿಕೆಗಾಗಿ ಹೋರಾಡಿ ಗಮನ ಸೆಳೆದಿದ್ದರು, ಆರ್ಥಿಕವಾಗಿ ಪ್ರಬಲವಾಗಿರುವ ಈ ಸಮುದಾಯವು ರಾಜ್ಯದ ಜನಸಂಖ್ಯೆಯ ಶೇಕಡಾ 14 ರಷ್ಟಿದೆ ಮತ್ತು ಗುಜರಾತ್ ವಿಧಾನ ಸಭೆಯ 182 ಸ್ಥಾನಗಳಲ್ಲಿ 55 ರಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದು ಗಮನಾರ್ಹ.

ಪಾಟೀದಾರ್ ಸಮುದಾಯದ ಮೀಸಲಾತಿಗಾಗಿ ಪಟೇಲ್ ನೇತೃತ್ವದಲ್ಲಿ ನಡೆದಿದ್ದ ಆಂದೋಲನದಲ್ಲಿ 14 ವ್ಯಕ್ತಿಗಳು ಸಾವನ್ನಪ್ಪಿ ಇತರ ಹಲವಾರು ಮಂದಿ ಗಾಯಗೊಂಡಿದ್ದರು. ಆಂದೋಲನ ಹತ್ತಿಕ್ಕಲು ಗುಜರಾತ್ ಸರ್ಕಾರ 3500 ಅರೆಸೈನಿಕ ಸಿಬ್ಬಂದಿ ಮತ್ತು 93 ಕಂಪನಿಗಳ ರಾಜ್ಯ ಮೀಸಲು ಪೊಲೀಸರ ನಿಯೋಜಿಸಬೇಕಾಗಿತ್ತು.

ಈ ಆಂದೋಲನದ ನಂತರ ಪ್ರವರ್ಧಮಾನಕ್ಕೆ ಬಂದವರೆ ಅಲ್ಪೇಶ್ ಠಾಕೋರ್ ಏಕತಾ ಮಂಚ್‍ನ ಸಂಸ್ಥಾಪಕರಾಗಿ ಅವರು, ಕುಡಿತದಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧದ ಆಂದೋಲನವನ್ನು ಪ್ರಾರಂಭಿಸಿದರು. ಅವರ ಪ್ರಾಮುಖ್ಯತೆಯು ಗುಜರಾತ್‍ನ ಮತದಾರರ ಜನಸಂಖ್ಯೆಯ ಸುಮಾರು 40 ಪ್ರತಿಶತದಷ್ಟು ಮೇಲೆ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿದೆ.

2016ರ ಜುಲೈನಲ್ಲಿ ಸತ್ತ ಹಸುವಿನ ಚರ್ಮ ಸುಲಿಯುತ್ತಿದ್ದಾಗ ಗೋಸಂರಕ್ಷಣೆ ನೆಪದಲ್ಲಿ ಏಳು ಮಂದಿ ದಲಿತ ಯುವಕರನ್ನು ಹಿಂಸಿಸುವ ಘಟನೆಯ ವಿರುದ್ಧದ ಸಿಡಿದೆದ್ದ ಪತ್ರಕರ್ತ ಜಿಗ್ನೇಶ್ ಮೇವಾನಿ ಅವರು ಅಸಾಧಾರಣ ದಲಿತ ನಾಯಕರಾಗಿ ಹೊರಹೊಮ್ಮಿದವರು. ಅವರ ಹೋರಾಟ ಯಾವ ಮಟ್ಟಕ್ಕೆ ಇತ್ತು ಎಂದರೆ, ಅವರನ್ನು ಬೆಂಬಲಿಸಿ 30 ಕ್ಕೂ ಹೆಚ್ಚು ದಲಿತ ಸಂಘಟನೆಗಳು ಪ್ರತಿಭಟನೆಗೆ ಒಗ್ಗೂಡಿದ್ದವು.

ಕಷ್ಟ ಹೇಳಿಕೊಳ್ಳಲು ಬಂದ ಮಹಿಳೆಯ ಕೆನ್ನೆಗೆ ಬಾರಿಸಿದ ಸಚಿವ ಸೋಮಣ್ಣ

ಈ ಮೂವರು ಯುವಕರು ಗುಜರಾತ್‍ನಲ್ಲಿ ಸಂಚಲನ ಸೃಷ್ಟಿಸಿದವರು. ತಮ್ಮ ತಮ್ಮ ಸಂಘಟನೆಗಳೊಂದಿಗೆ ಸೇರಿಕೊಂಡು ಗುಜರಾತ್‍ನಲ್ಲಿ ರಾಜಕೀಯ ಹೋರಾಟದ ಕಿಚ್ಚು ಹಚ್ಚಿಸುವಲ್ಲಿ ಯಶಸ್ವಿಯಾದವರು.

ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು, ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ 2014 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಆನಂದಿಬೆನ್ ಪಟೇಲ್ ಅವರ ಸಿಎಂ ತ್ಯಜಿಸುವಂತೆ ಮಾಡುವಲ್ಲಿಯೂ ಈ ಮೂವರು ಯುವಕರು ಯಶಸ್ವಿಯಾಗಿದ್ದರು.

ನಂತರ ಈ ಮೂವರು ಯುವಕರು ಕಾಂಗ್ರೆಸ್‍ನೊಂದಿಗೆ ಗುರುತಿಸಿಕೊಂಡ ಪರಿಣಾಮ 2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 77 ಸ್ಥಾನಗಳನ್ನು ಗೆಲುವು ಸಾಧಿಸಿತ್ತು. ಅದುವರೆಗೂ ಗುಜರಾತ್‍ನಲ್ಲಿ 182 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಕೇವಲ 99 ಸ್ಥಾನಗಳನ್ನು ಮಾತ್ರ ಗೆಲುವು ಸಾಧಿಸಿತ್ತು.

ಬಿಜೆಪಿ ವಿರುದ್ಧ ಹೋರಾಟದಿಂದ ಮುಂಚೂಣಿಗೆ ಬಂದು ಕಾಂಗ್ರೆಸ್‍ಗೆ ಸೇರ್ಪಡೆ

ಯಾಗಿ ಶಾಸಕರಾಗಿದ್ದ ಅಲ್ಪೇಶ್ ಠಾಕೂರ್ ಅವರು ಆ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ನಂತರ ನಡೆದ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದರು.

ಹಿಂದುಳಿದ ವರ್ಗದವರ ಪರ ಧ್ವನಿ ಎತ್ತುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ವೇಗವಾಗಿ ಬೆಳೆದ ಹಾರ್ದಿಕ್ ಪಟೇಲ್ ಅವರು, ಅಂತಿಮವಾಗಿ ಕಾಂಗ್ರೆಸ್ ಪಕ್ಷವನ್ನೇ ಜಾತಿವಾದಿ ಪಕ್ಷ ಎಂದು ಜರಿದು ಕಳೆದ ಜೂನ್‍ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅದರೆ, ಅವರ ವಿರುದ್ಧ ದಾಖಲಾಗಿರುವ ಹಲವಾರು ಪ್ರಕರಣಗಳಿಂದ ರೋಸಿ ಹೋಗಿರುವ ಅವರು ಇದೀಗ ಬಿಜೆಪಿಯಿಂದಲೂ ಅಂತರ ಕಾಯ್ದುಕೊಂಡಿದ್ದಾರೆ

ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ

ಇನ್ನು ಕಾಂಗ್ರೆಸ್‍ನಲ್ಲೇ ಗುರುತಿಸಿಕೊಂಡಿರುವ ಜಿಗ್ನೇಶ್‍ಮೇವಾನಿ ಅವರು, ಮೋದಿ ವಿರುದ್ಧ ಹರಿಹಾಯುತ್ತಿರುವುದರಿಂದ ಅವರ ವಿರುದ್ಧವೂ ಹಲವಾರು ಪ್ರಕರಣಗಳು ದಾಖಲಾಗಿವೆ. ಮೇವಾನಿ ವಿರುದ್ಧ ದಾಖಲಾದ ಪ್ರಕರಣಗಳಿಂದ ಅವರು ಜೈಲು ಪಾಲಾಗುವಂತಹ ಸನ್ನಿವೇಶ ಎದುರಾದರೂ ಬಿಜೆಪಿ ವಿರುದ್ಧದ ಹೋರಾಟದಿಂದ ಅವರು ಹಿಂದೆ ಸರಿದಿಲ್ಲ.

ತಮ್ಮ ಹೋರಾಟಗಳಿಂದಲೇ ದೇಶ ಮೆಚ್ಚುವ ನಾಯಕರಾಗಿ ಗುರುತಿಸಿಕೊಂಡು ಜನಮನದಲ್ಲಿ ನೆಲೆಸಿರುವ ಈ ಮೂವರು ಕ್ರಾಂತಿಕಾರಕ ಯುವಕರು ಇಂದು ತಮ್ಮ ಹಿಂದಿನ ಪ್ರಭಾವ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇಂತಹ ಸಂದರ್ಭದಲ್ಲೇ ಮತ್ತೊಮ್ಮೆ ಗುಜರಾತ್ ಚುನಾವಣೆಗೆ ದಿನಗಣನೆ ಆರಂಭವಾಗಿರುವುದರಿಂದ ಮತ್ತೆ ಇವರು ಎಲ್ಲರಿಗೂ ನೆನಪಾಗುತ್ತಿದ್ದಾರೆ.

Articles You Might Like

Share This Article