ನವದೆಹಲಿ,ಡಿ.9- ದೇಶದ ಗಮನಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅಮ್ ಆದ್ಮಿ ಪಕ್ಷ 35 ಕ್ಷೇತ್ರಗಳಲ್ಲಿ ಅಂತರದ ಮತಗಳನ್ನು ಕಸಿದುಕೊಳ್ಳುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ನೇರ ಕಾರಣವಾಗಿದ್ದು, 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗಿಂತಲೂ ಹೆಚ್ಚು ಮತ ಗಳಿಸಿದೆ. 5 ಕ್ಷೇತ್ರಗಳಲ್ಲಿ ಪಕ್ಷೇತರರು ಕೈ ಪಡೆಗೆ ಮುಳುವಾಗಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಶೇ.50ರ ಒಳಗಿನ ಮತ ಪಡೆದು ಗೆಲುವು ಸಾಸುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಗೆ ಅಮ್ ಆದ್ಮಿಯ ಕೊಡುಗೆ ಮಹತ್ವದ್ದಾಗಿದೆ. ಜೊತೆಗೆ ಸಮಾಜವಾದಿ ಪಕ್ಷ, ಎಐಎಂಐಎಂ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಕಾಂಗ್ರೆಸ್ನ ಮತಗಳನ್ನು ಕಸಿದುಕೊಂಡು ವಿರೋಧ ಪಕ್ಷದ ನಾಯಕ ಸ್ಥಾನಕ್ಕೂ ಅರ್ಹತೆ ಇಲ್ಲದಂತೆ ಮಾಡಿವೆ.
ಅಂತಿಮ ಫಲಿತಾಂಶದ ವಿಶ್ಲೇಷಣೆ ನಡೆಸಿದಾಗ ಅಮ್ ಆದ್ಮಿ ಪಕ್ಷ ಸುಮಾರು 75ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ನ ಮತ ಬ್ಯಾಂಕ್ನ್ನು ಕಸಿದುಕೊಂಡಿದೆ. ಅಮ್ ಆದ್ಮಿ ಪಕ್ಷ ನಗರ ಕೇಂದ್ರಿಕೃತವಾಗಿದ್ದು ಬಿಜೆಪಿಯ ಮತ ಬ್ಯಾಂಕ್ಗೆ ಬೆದರಿಕೆಯಾಗಲಿದೆ ಎಂಬ ವಿಶ್ಲೇಷಣೆಗಳಿದ್ದವು. ಆದರೆ ಗುಜರಾತ್ನಲ್ಲಿ ಅದು ತಿರುಗುಮುರುಗಾಗಿದೆ.
ಹೊಸಕೋಟೆ ಕಾಂಗ್ರೆಸ್‍ನಲ್ಲಿ ಶಾಸಕರ ವಿರುದ್ಧ ಅಸಮಾಧಾನ ಸ್ಪೋಟ
ಗ್ರಾಮೀಣ ಭಾಗದಲ್ಲಿ ಆದಿವಾಸಿ ಜನ ವಾಸಿಸುವ ಪ್ರದೇಶಗಳಲ್ಲಿ ಮತ್ತು ಕರಾವಳಿ ಭಾಗಗಳಲ್ಲಿ ಕಾಂಗ್ರೆಸ್ಗೆ ಸಮಾನ ಮನಸ್ಕ ಪಕ್ಷಗಳು ಅದರಲ್ಲೂ ಅಮ್ ಆದ್ಮಿ ಭಾರೀ ಪೆಟ್ಟು ನೀಡಿದೆ. ಬಲಸಿನೊರ್, ಬಾಪುನಗರ್, ಬಹಿಲೊಡ, ಚೋಟ ಉದಯಪುರ್, ಚೋಟಿಲಾ, ದೆಹಗಂ, ದಾನೋಡ್, ದಂಗ್ಸ್ , ದನಿಲಿಂಡ, ದರಿಯಾಪುರ್, ದಾಸಾಳ, ದೊರೊಜಿ, ದ್ವಾರಕ, ಗರ್ಬಾದಾ, ಹಿಮ್ಮತ್ನಗರ್, ಕಪ್ರಾದ್, ಕುತಿಯಾನ, ಮಾಂಡೋವಿ, ಮಂಗ್ರೋನ್, ನಾಂದೋಡ್, ಪೆÇೀರಬಂದರ್, ರಾಜ್ಕೋಟ್ ಪೂರ್ವ, ಸೋಮ್ನಾ, ವಾಂಕೇನರ್ ಸೇರಿದಂತೆ 45 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವಿಗೆ ಅಮ್ ಆದ್ಮಿ ಸ್ಪರ್ಧೆ ಸಹಾಯವಾಗಿದೆ.
ಧರ್ಮಾಪುರ್, ಧಾರಿ, ಗದಾದ್, ಪತ್ತೇಪುರ, ಜಹೋಲೊಡ್, ಕಲ್ವಾಡ್, ಕಂಬೈಲಾ, ಲಿಂಬಿಡಿ, ಲಿಮ್ಕೇಡಾ, ವೈರಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗಿಂತಲೂ ಆಪ್ ಪಕ್ಷದ ಅಭ್ಯರ್ಥಿಗಳು ಹೆಚ್ಚು ಮತ ಪಡೆದಿದ್ದಾರೆ. ಆದರೆ ಇಲ್ಲಿಯೂ ಬಿಜೆಪಿಯೇ ಗೆಲುವು ಸಾಧಿಸಿದೆ.
ಬೇಚರಾಜಿಕ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೇ.42.96ರಷ್ಟು ಮತ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಶೇ.36ರಷ್ಟು ಮತ ಪಡೆದು 2ನೇ ಸ್ಥಾನದಲ್ಲಿದ್ದಾರೆ. ಇಲ್ಲಿ ಪಕ್ಷೇತರ ಅಭ್ಯರ್ಥಿ ಶೇ.11ರಷ್ಟು, ಅಮ್ ಆದ್ಮಿ ಶೇ.7ರಷ್ಟು ಮತ ಪಡೆದಿರುವುದರಿಂದ ಬಿಜೆಪಿ ಗೆಲುವು ಸುಲಭವಾಗಿದೆ.
ಸಿಎಂ ಬೊಮ್ಮಾಯಿ ಜೊತೆ ಆರ್‌ಎಸ್‌ಎಸ್ ನಾಯಕ ಮುಕುಂದ್ ಗುಪ್ತ ಮಾತುಕತೆ
ಬಿಲೋಡ ಕ್ಷೇತ್ರದಲ್ಲಿ ಕಾಂಗ್ರೆಸ್ ಶೇ.20.67ರಷ್ಟು , ಅಮ್ ಆದ್ಮಿ ಶೇ.30ರಷ್ಟು ಮತ ಪಡೆದಿದೆ. ಈ ಇಬ್ಬರ ಜಗಳದಲ್ಲಿ ಶೇ.43ರಷ್ಟು ಮತ ಪಡೆದ ಬಿಜೆಪಿ ಸುಲಭ ಜಯ ದಾಖಲಿಸಿದೆ.
ಉದಯಪುರ ಕ್ಷೇತ್ರದಲ್ಲಿ ಇದೇ ರೀತಿಯ ಫಲಿತಾಂಶ ಮರುಕಳಿಸಿದು, ಕಾಂಗ್ರೆಸ್ ಶೇ.20ರಷ್ಟು, ಆಪ್ ಪಕ್ಷ ಶೇ.26ರಷ್ಟು ಮತ ಪಡೆದಿವೆ. ಶೇ. 43ರಷ್ಟು ಮತ ಪಡೆದ ಬಿಜೆಪಿ ಜಯಗಳಿಸಿದೆ.
ಜೊತಿಲಾ ಕ್ಷೇತ್ರದಲ್ಲಿ ಶೇ.27, ಕಾಂಗ್ರೆಸ್ ಶೇ.26ರಷ್ಟು ಮತ ಗಳಿಸಿದೆ. ಶೇ.43ರಷ್ಟು ಮತ ಪಡೆದ ಬಿಜೆಪಿ ಗೆಲುವು ಸಾಧಿಸಿದೆ. ಈ ರೀತಿ ಬಹುತೇಕ ಕ್ಷೇತ್ರಗಳಲ್ಲಿ ಮತ ವಿಭಜನೆಯಿಂದ ಕಾಂಗ್ರೆಸ್ಗೆ ಸೋಲಾಗಿದೆ.
Gujarat election, Congress, vote, aap,