ಕಾಂಗ್ರೆಸ್‍ಗೆ ಕಂಟಕವಾದ AAP ಮತ್ತು AIMIM

Social Share

ಭೂಪಾಲ್,ಡಿ.11- ಗುಜರಾತ್ ಬಳಿಕ ಮುಂದಿನ ವರ್ಷ ಡಿಸೆಂಬರ್ ನಲ್ಲಿ ನಡೆಯುವ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯತ್ತ ಅಮ್‍ಆದ್ಮಿ ಮತ್ತು ಎಐಎಂಐಎಂ ಪಕ್ಷಗಳು ಮುಖ ಮಾಡಿದ್ದು, ಕಾಂಗ್ರೆಸ್‍ಗೆ ಒಳಗೊಳಗೆ ಆತಂಕ ಶುರುವಾಗಿದೆ.

ಇತ್ತೀಚೆಗೆ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅಮ್‍ಆದ್ಮಿ ಪಕ್ಷ ರಾಜ್ಯಾದ್ಯಂತ ಶೇ.13ರಷ್ಟು ಮತ ಪಡೆದಿದ್ದು, ಐದು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಕಾಂಗ್ರೆಸ್ ಪಕ್ಷವನ್ನು ಬದಿಗೆ ಸರಿಸಿ ಅಧಿಕೃತ ವಿರೋಧ ಪಕ್ಷವಾಗುವ ಕನಸಿನಲ್ಲಿದ್ದ ಆಪ್ ನಿರೀಕ್ಷಿತ ಸಾಧನೆ ಮಾಡದೇ ಇದ್ದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 45 ಕ್ಷೇತ್ರಗಳಲ್ಲಿ ಸೋಲಿಗೆ ಆಪ್ ನೇರ ಕಾರಣವಾಗಿದೆ,

11 ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗಿಂತ ಹೆಚ್ಚಿನ ಮತ ಪಡೆದು 130 ವರ್ಷಗಳ ಹಳೆಯದಾದ ಕೈ ಪಕ್ಷವನ್ನು ಮಕಾಡೆ ಮಲಗಿಸಿದೆ. ಹೈದರಾಬಾದ್ ಮೂಲದ ಅಸಾದುದ್ದಿನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಗೆ ನೆರವಾಗಿದೆ. ಆಪ್ ಮತ್ತು ಎಐಎಂಐಎಂ ಪಕ್ಷಗಳು ಕಾಂಗ್ರೆಸ್ ಮತ ಗಳಿಸಿದ್ದರಿಂದ ಬಿಜೆಪಿ 157 ಕ್ಷೇತ್ರಗಳಲ್ಲಿ ಪ್ರಚಂಡ ಜಯ ಸಾಧಿಸಿದೆ.

ಈ ರಾಜಕೀಯ ಸಂಘರ್ಷ ಮುಂದಿನ ದಿನಗಳಲ್ಲಿ ಎಲ್ಲೆಡೆ ಕಾಂಗ್ರೆಸ್ ಸವಾಲಾಗಲಿದೆ. ಆಪ್ ಮತ್ತು ಎಐಎಂಐಎಂ ಪಕ್ಷಗಳು ಮಧ್ಯ ಪ್ರದೇಶ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಲಿವೆ ಎಂಬ ಅಂದಾಜುಗಳು ಶುರುವಾಗಿವೆ.

ಇದಕ್ಕೆ ಪೂರಕವಾಗಿ ಎರಡು ಪಕ್ಷಗಳು ಈಗಾಗಲೇ ಸಂಘಟನಾತ್ಮಕ ಚಟುವಟಿಕೆಗಳನ್ನು ತೀವ್ರಗೊಳಿಸಿವೆ. ಆಪ್ ರಾಜ್ಯಾದ್ಯಂತ ಪಾಲಿಕೆ ಚುನಾವಣೆಗಳಲ್ಲಿ 1500 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದರಲ್ಲಿ 40 ಮಂದಿ ಗೆಲುವು ಕಂಡಿದ್ದಾರೆ.

140ಕ್ಕೂ ಹೆಚ್ಚು ಮಂದಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಒಟ್ಟು ಶೇ.6.3ರಷ್ಟು ಮತಗಳನ್ನು ಹಂಚಿಕೊಂಡಿದೆ. 14 ಮೆಯರ್ ಅಭ್ಯರ್ಥಿಗಳ ಪೈಕಿ ಸಿಂಗರೌಲಿಯಲ್ಲಿ ಒಬ್ಬರು ಗೆಲುವು ಸಾಧಿಸಿದ್ದರೆ, ರೆವಾ ಮತ್ತು ಗ್ವಾಲಿಯರ್‍ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಗ್ವಾಲಿಯರ್‍ನಲ್ಲಿ 46 ಸಾವಿರ ಮತಗಳನ್ನು ಆಪ್ ಪಡೆದಿದೆ. ಇನ್ನೂ ಗ್ರಾಮೀಣ ಭಾಗದಲ್ಲಿ 10 ಜಿಲ್ಲಾ ಪಂಚಾಯತ್‍ಗಳಲ್ಲಿ ಆಪ್ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. 23 ಜನಪದ್ ಸದಸ್ಯರು, 103 ಸರಪಂಚ್‍ಗಳು, 250 ಪಂಚೆಸ್‍ಗಳು ಆಯ್ಕೆಯಾಗಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ AAP 29 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿ ಶೇ.2ರಷ್ಟು ಮತ ಗಳಿಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಶೇ.1ರಷ್ಟು ಮತ ಗಳಿಸಿತ್ತು. 2022ರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಮತ ಗಳಿಕೆಯ ಪ್ರಮಾಣ ಶೇ.6.3ರಷ್ಟಾಗಿದೆ.

ಶರ್ಮಿಳಾ ಅನಿರ್ದಿಷ್ಟಾವಧಿ ಉಪವಾಸಕ್ಕೆ ಬ್ರೇಕ್ : ಆಸ್ಪತ್ರೆಗೆ ಸ್ಥಳಾಂತರಿಸಿದ ಪೊಲೀಸರು

ಇನ್ನೂ ಎಐಎಂಐಎಂ ಖಂಡ್ವಾ ಮತ್ತು ಬುರಹಾನ್ ಪುರ್ ಪಾಲಿಕೆಗಳಲ್ಲಿ ಮೇಯರ್ ಅಭ್ಯರ್ಥಿಗಳು ಸೇರಿದಂತೆ 51 ಮಂದಿಯನ್ನು ನಗರ ಸ್ಥಳೀಯ ಸಂಸ್ಥೆಗಳ ಅಭ್ಯರ್ಥಿಗಳನ್ನಾಗಿ ಮಾಡಿತ್ತು. ಏಳು ನಗರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಅಸ್ತಿತ್ವ ಸಾಬೀತು ಪಡಿಸಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಕಮಲ್‍ನಾಥ್ ಮುಖ್ಯಮಂತ್ರಿಯಾಗಿದ್ದರು, ಆದರೆ 2020ರ ಮಾರ್ಚ್‍ನಲ್ಲಿ ಆಪರೇಷನ್ ಕಮಲ ನಡೆಸಿದ ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಿ ತನ್ನ ಅಪತ್ಯ ಸಾಧಿಸಿತ್ತು. ಪ್ರಸ್ತುತ 230 ಕ್ಷೇತ್ರಗಳ ಪೈಕಿ ಬಿಜೆಪಿ 127 ಮತ್ತು 96 ಶಾಸಕರನ್ನು ಹೊಂದಿದೆ. ಕಾಂಗ್ರೆಸ್‍ನಿಂದ ಹೊರ ಹೋಗಿದ್ದರು ಉಪಚುನಾವಣೆಗಳಲ್ಲಿಗೆ ಗೆಲುವು ಸಾಧಿಸಿದ್ದಾರೆ.

ಎರಡು ಪಕ್ಷಗಳು ಕಾಂಗ್ರೆಸ್‍ಗೆ ಮಾತ್ರ ಪೆಟ್ಟು ನೀಡುತ್ತಿಲ್ಲ, ರಾಷ್ಟ್ರೀಯ ಪಕ್ಷವಾಗಿರುವ ಬಿಎಸ್ಪಿ ಮತ್ತು ಸಮಾಜವಾದಿ ಪಕ್ಷಗಳನ್ನು ಹಿಂದಿಕ್ಕುತ್ತಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳಿಕ ರಾಜ್ಯದಲ್ಲಿ ಮೂರನೇ ರಾಜಕೀಯ ಶಕ್ತಿಯಾಗಿ ಬಿಂಬಿತವಾಗಿವೆ. ಬಿಜೆಪಿ ಮಧ್ಯ ಪ್ರದೇಶದಲ್ಲಿ ಮರಳಿ ಅಧಿಕಾರ ಹಿಡಿಯುವ ಸನ್ನಾಹದಲ್ಲಿದೆ. ಅದಕ್ಕೆ ಆಪ್ ಮತ್ತು ಎಐಎಂಐಎಂ ಪಕ್ಷಗಳು ಬೆಂಬಲವಾಗಲಿವೆ ಎಂದು ವಿರೋಧಿಗಳು ಕುಹಕವಾಡುತ್ತಿವೆ.

ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಪತ್ನಿಗೆ ತಳಿಸಿ ತಲೆಬೋಳಿಸಿದ ಸೈಕೋ ಪತಿ

ಕಾಂಗ್ರೆಸ್ ನಾಯಕ ಕಮಲ್‍ನಾಥ್ ಪ್ರತಿಕ್ರಿಯೆ ನೀಡಿದ್ದು, ಎರಡು ಪಕ್ಷಗಳು ನಮಗೆ ಸವಾಲಲ್ಲ. ತಮ್ಮನ್ನು ತಾವು ಪ್ರಬಲ ರಾಜಕೀಯ ಶಕ್ತಿಗಳು ಎಂದು ಹೇಳಿಕೊಳ್ಳುತ್ತಿವೆ. ಆದರೆ ಸ್ಥಳೀಯವಾಗಿ ಅವುಗಳಿಗೆ ನೆಲೆಯೇ ಇಲ್ಲ. ಬಿಜೆಪಿಯ ಬಿ – ಟಿಮ್‍ಗಳಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಆಪ್‍ನ ಮಧ್ಯ ಪ್ರದೇಶದ ಮುಖಂಡ ಪಂಕಜ್‍ಸಿಂಗ್, ಜನ ಕಾಂಗ್ರೆಸ್-ಬಿಜೆಪಿಯಿಂದ ಜನ ಬೇಸತ್ತಿದ್ದಾರೆ. ಈಗಾಗಲೇ ನಮ್ಮ ಪಕ್ಷಕ್ಕೆ ಮೂರನೇ ರಾಜಕೀಯ ಶಕ್ತಿಯಾಗಿ ಅವಕಾಶ ನೀಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆಪ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದಿದ್ದಾರೆ.

ಟೀ ಅಂಗಡಿಗೆ ನುಗ್ಗಿ ಹಲ್ಲೆ ಮಾಡಿದ್ದ ನಾಲ್ವರು ಪುಂಡರು ಅಂದರ್

ಎಐಎಂಐಎಂನ ಸೈಯದ್ ಮಿಂಹಜುದ್ದಿನ್, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಪ್ರದರ್ಶನ ನಮಗೆ ವಿಶ್ವಾಸ ಹೆಚ್ಚಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ, ಆದರೆ ಎಷ್ಟು ಕ್ಷೇತ್ರಗಳಲ್ಲಿ ಎಂಬ ಬಗ್ಗೆ ಪಕ್ಷದ ಉನ್ನತ ನಾಯಕರು ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ.

Gujarat, elections, Congress, AAP, AIMIM,

Articles You Might Like

Share This Article