ಗುಜರಾತ್-ಹಿಮಾಚಲ ಫಲಿತಾಂಶ ಕಾಂಗ್ರೆಸ್‍ಗೆ ಸಿಹಿ-ಕಹಿ

Social Share

ಬೆಂಗಳೂರು,ಡಿ.8- ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್‍ಗೆ ಸಿಹಿ-ಕಹಿ ಅನುಭವ ನೀಡಿದ್ದು, ಅದರಲ್ಲೂ ಗುಜರಾತ್‍ನ ಹಿನ್ನಡೆ ರಾಜಕೀಯ ಅತಂತ್ರ ಪರಿಸ್ಥಿತಿಯನ್ನು ಸೃಷ್ಟಿಸಿದೆ.

135 ವರ್ಷಗಳ ಇತಿಹಾಸ ಹೊಂದಿರುವ ರಾಷ್ಟ್ರೀಯ ಕಾಂಗ್ರೆಸ್ ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಸೋತು ಕನಿಷ್ಠ ಪ್ರತಿಪಕ್ಷದ ಅಧಿಕೃತ ಸ್ಥಾನ ಗಿಟ್ಟಿಸಲು ಸಾಧ್ಯವಾಗದಷ್ಟು ವೈಫಲ್ಯ ಅನುಭವಿಸಿದೆ. ಈಗ ಗುಜರಾತ್‍ನಲ್ಲೂ ಅದೇ ಪರಿಸ್ಥಿತಿಯನ್ನು ಅನುಸರಿಸಿದೆ. ಈ ಮೊದಲು ಗುಜರಾತ್‍ನಲ್ಲಿ ಕಾಂಗ್ರೆಸ್ 77 ಕ್ಷೇತ್ರಗಳಲ್ಲಿ ಗೆದ್ದಿತ್ತು.

ವಿರೋಧ ಪಕ್ಷದ ಅಕೃತ ಸ್ಥಾನಮಾನ ಪಡೆಯಲು ಕನಿಷ್ಟ ಒಟ್ಟಾರೆ ಕ್ಷೇತ್ರಗಳ ಶೇ.10ರಷ್ಟಾದರೂ ಗೆಲ್ಲಬೇಕಿದೆ. ಹಾಗೆ ನೋಡಿದರೆ 18 ಕ್ಷೇತ್ರಕ್ಕಿಂತ ಕಡಿಮೆ ಸ್ಥಾನಗಳಿಸಿದ್ದರೆ ಕಾಂಗ್ರೆಸ್‍ಗೆ ವಿಪಕ್ಷ ಸ್ಥಾನವು ಕೈತಪ್ಪಿ ಹೋಗಲಿದೆ.
ಆರು ಅವಧಿಗಳಿಂದ ಗುಜರಾತ್‍ನಲ್ಲಿ ಪ್ರಬಲ ಹಿಡಿತ ಹೊಂದಿರುವ ಬಿಜೆಪಿ ಕಾಂಗ್ರೆಸ್‍ನ ತಳಪಾಯದ ಕಲ್ಲುಗಳನ್ನು ಕಿತ್ತು ಬಿಸಾಡಿದೆ.

ಉಪಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳ ಮೇಲುಗೈ

ರಾಷ್ಟ್ರೀಯ ಮಟ್ಟದಲ್ಲಿ ದಿಟ್ಟ ನಾಯಕತ್ವದ ವೈಫಲ್ಯ, ಸ್ಥಳೀಯ ನಾಯಕತ್ವದ ಕೊರತೆ, ಗುಜರಾತ್‍ನ ಕಾಂಗ್ರೆಸ್‍ಗೆ ಮುಳುವಾಗಿದೆ. ಗಟ್ಟಿ ಸಿದ್ದಾಂತದ ಬೆನ್ನೆಲುಬಿಲ್ಲದೆ ಅಧಿಕಾರ ಗಳಿಕೆಯ ರಾಜಕಾರಣಕ್ಕಷ್ಟೇ ಸೀಮಿತವಾಗಿರುವ ಕಾಂಗ್ರೆಸ್‍ಗೆ ಹಂತ ಹಂತವಾಗಿ ನೆಲವಿಲ್ಲವಾಗುತ್ತಿದೆ.

ಈ ಮೊದಲು ಉತ್ತರಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಕಾಂಗ್ರೆಸ್ ಗೆಲುವು ಸಾಧಿಸಲಾಗಲಿಲ್ಲ. ಈಗ ಗುಜರಾತ್‍ನಲ್ಲೂ ಅದೇ ಅನುಭವವಾಗಿದೆ. ಹಿಮಾಚಲಪ್ರದೇಶದಲ್ಲಿ ಆಶಾದಾಯಕ ಫಲಿತಾಂಶ ಬಂದಿದೆಯಾದರೂ ಅದನ್ನು ಸಂಭ್ರಮಿಸುವ ಪರಿಸ್ಥಿತಿ ಕಾಂಗ್ರೆಸ್‍ಗೆ ಇಲ್ಲ.

ಗುಜರಾತ್ ಫಲಿತಾಂಶದಿಂದ ಹಿರಿಹಿರಿ ಹಿಗ್ಗಿದ ಸಿಎಂ ಬೊಮ್ಮಾಯಿ

ಗುಜರಾತ್‍ನ ಫಲಿತಾಂಶ ಇತರ ರಾಜ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಘಡ ರಾಜ್ಯಗಳಿಗೆ ವಿಧಾನಸಭೆ ಚುನಾವಣೆಗಳು ನಡೆಯಲಿವೆ.
ಛತ್ತೀಸ್‍ಘಡ, ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಉಳಿದೆರಡು ಕಡೆ ಬಿಜೆಪಿ ಆಡಳಿತದಲ್ಲಿದೆ. ಗುಜರಾತ್‍ನ ದಿಗ್ವಿಜಯ ಅಷ್ಟೂ ರಾಜ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಈಗಾಗಲೇ ರಾಜಸ್ಥಾನದಲ್ಲಿ ಅಶೋಕ್ ಗೆಲ್ಹೋಟ್, ಸಚಿನ್ ಪೈಲೆಟ್ ನಡುವಿನ ಗುಂಪುಗಾರಿಕೆ ನಾಯಕತ್ವದ ಸಂಘರ್ಷಕ್ಕೆ ಕಾರಣವಾಗಿದೆ. ಇನ್ನು ಮಧ್ಯಪ್ರದೇಶ ಮತ್ತು ಕರ್ನಾಟಕ ಚುನಾವಣೆಗಳಲ್ಲಿ ಈ ಹಿಂದೆ ಹೆಚ್ಚು ಸ್ಥಾನ ಗಳಿಸಿದ್ದರೂ, ಆಪರೇಷನ್ ಕಮಲದಿಂದಾಗಿ ಸರ್ಕಾರ ರಚಿಸುವಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಈ ಬಾರಿ ಸ್ಪಷ್ಟ ಬಹುಮತ ಗಳಿಸಲು ಸಾಕಷ್ಟು ತಯಾರಿ ನಡೆಸಿದೆ.

ಪಿಜಿಯಲ್ಲಿದ್ದ ಹುಡುಗಿಯರ ಅರೆನಗ್ನ ವಿಡಿಯೋ ಮಾಡುತ್ತಿದ್ದವನ ಬಂಧನ

ಬಿಜೆಪಿಯ ಹುಮ್ಮಸ್ಸು ಒಂದೆಡೆಯಾದರೆ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಕುಗುತ್ತಿದೆ. ಸ್ಥಳೀಯ ನಾಯಕರು ಪಾಠ ಕಲಿಯದೆ ಪಕ್ಷದ ಅಪತ್ಯಕ್ಕಾಗಿ ಆಂತರಿಕ ಸಂಘರ್ಷ ಮಾಡಿಕೊಳ್ಳುತ್ತಾ ಮತ್ತಷ್ಟು ಹಿನ್ನಡೆಗೆ ಕಾರಣವಾಗಿರುವುದು ವಿಪರ್ಯಾಸ.

Gujarat, Himachal Pradesh, assembly election, results, Congress,

Articles You Might Like

Share This Article