ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ(LiVE)

Social Share

ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ
# ಒಟ್ಟು ಸ್ಥಾನಗಳು :
182 (ಸರಳ ಬಹುತಮತ-92)
➤ ಬಿಜೆಪಿ : 157
➤ ಕಾಂಗ್ರೆಸ್ : 16
➤ ಎಎಪಿ : 05
➤ ಇತರೆ : 04


ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ

# ಒಟ್ಟು ಸ್ಥಾನಗಳು : 68 (ಸರಳ ಬಹುತಮತ-35)
➤ ಬಿಜೆಪಿ : 26
➤ ಕಾಂಗ್ರೆಸ್ : 39
➤ ಎಎಪಿ : 00
➤ಇತರೆ : 03


ಅಹಮದಾಬಾದ್,ಡಿ.8– ಗುಜರಾತ್‍ನ ಇತಿಹಾಸದಲ್ಲೇ ಶೇ.50ಕ್ಕಿಂತಲೂ ಹೆಚ್ಚಿನ ಮತ ಪಡೆದ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಭೂತಪೂರ್ವ ಬಹುಮತದೊಂದಿಗೆ ಸತತ 7ನೇ ಬಾರಿ ತನ್ನ ಅಕಾರ ಧ್ವಜವನ್ನು ಪ್ರತಿಷ್ಠಾಪಿಸಿದೆ. ಅತ್ತ ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಮೂಲಕ ಕೊನೆಯ ಕ್ಷಣದವರೆಗೂ ಕುತೂಹಲ ಕೆರಳಿಸಿದೆ.

ಗುಜರಾತ್‍ನಲ್ಲಿ 182 ಸ್ಥಾನಗಳಿಗೆ ಡಿ.1 ಮತ್ತು 5ರಂದು ಚುನಾವಣೆ ನಡೆದಿದ್ದು, ಅಕಾರದ ಗದ್ದುಗೆ ಹಿಡಿಯಲು ಮ್ಯಾಜಿಕ್ ನಂಬರ್ 92 ಸ್ಥಾನಗಳನ್ನು ಪಡೆಯಬೇಕಿತ್ತು. ಆದರೆ ಬಿಜೆಪಿ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಐತಿಹಾಸಿಕ ಗೆಲವನ್ನು ದಾಖಲಿಸಿದೆ
ನಿರೀಕ್ಷೆಗಳನ್ನು ಗರಿಗೆದರಿಸಿದ ಅಮ್ ಆದ್ಮಿ ಮೂರನೇ ಸ್ಥಾನದಲ್ಲಿದ್ದು, ಎಂದಿನಂತೆ ಕಾಂಗ್ರೆಸ್ ಸೊರಗಿ ಹೋಗಿದ್ದು, 2ನೇ ಸ್ಥಾನದಲ್ಲಿದೆ.

ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ತವರು ಭೂಮಿ ಗುಜರಾತ್‍ನಲ್ಲಿ ಮರಳಿ ಅಧಿಕಾರ ಹಿಡಿಯುವುದು ಬಿಜೆಪಿ ಪಾಲಿನ ಪ್ರತಿಷ್ಠೆಯಾಗಿತ್ತು. 24 ವರ್ಷಗಳ ಬಳಿಕ ಗಾಂಯೇತರ ಕುಟುಂಬದಿಂದ ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮಲ್ಲಿಕಾರ್ಜುನ ಖಗೆ ಅವರ ನಾಯಕತ್ವಕ್ಕೆ ಅಗ್ನಿಪರೀಕ್ಷೆಯಾಗಿತ್ತು.

ಅತ್ತ ದೆಹಲಿ, ಪಂಜಾಬ್‍ನಲ್ಲಿ ಅಧಿಕಾರ ಹಿಡಿದ ಹುಮ್ಮಸ್ಸಿನಲ್ಲೇ ಗಾಂಧಿ ನಾಡಿನತ್ತ ಧಾಂಗುಡಿ ಇಟ್ಟಿದ್ದ ಅಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಮುಗ್ಗರಿಸಿದ್ದಾರೆ. ಆರಂಭಿಕ ಹಂತದಿಂದಲೂ ಬಿಜೆಪಿ ಮುಂಚೂಣಿ ಸ್ಥಾನವನ್ನು ಕಾಯ್ದುಕೊಂಡು ಮತದಾರ ಏಕಪಕ್ಷೀಯ ಒಲವನ್ನು ಅಭಿವ್ಯಕ್ತಿಸಿತ್ತು.

ಘಟಾನುಘಟಿ ಬಿಜೆಪಿ ನಾಯಕರು ಪುನಾರಾಯ್ಕೆಯಾಗಿದ್ದು, ಫಲಿತಾಂಶದಲ್ಲಿ ಬಿಜೆಪಿ ಶೇ.52.8ರಷ್ಟು ಮತ ಗಳಿಕೆ ಮಾಡಿದರೆ, ಕಾಂಗ್ರೆಸ್ 26.8ರಷ್ಟು, ಅಮ್ ಆದ್ಮಿ ಪಕ್ಷ ಶೇ.14ರಷ್ಟು ಮತ ಗಳಿಕೆ ಮಾಡಿದೆ.
ಬಿಜೆಪಿ 155 ಸ್ಥಾನಗಳಲ್ಲಿ ಕಾಂಗ್ರೆಸ್ 18, ಅಮ್ ಆದ್ಮಿ 6 ಕ್ಷೇತ್ರಗಳಲ್ಲಿ ಮುನ್ನಡೆಯಲಿತ್ತು. ಪಕ್ಷೇತರರು ಮೂರು ಕ್ಷೇತ್ರಗಳಲ್ಲಿ ಗೆಲುವಿನ ಸೂಚನೆ ನೀಡಿದರು.

2017ರ ಚುನಾವಣಾ ಫಲಿತಾಂಶಕ್ಕಿಂತಲೂ ಈ ಬಾರಿ ಬಿಜೆಪಿ 56 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳುವ ನಿರೀಕ್ಷೆ ಹುಟ್ಟಿಸಿದ್ದರೆ, ಕಾಂಗ್ರೆಸ್ 60ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳುವ ಆತಂಕದಲ್ಲಿತ್ತು. ಅಮ್ ಆದ್ಮಿ ಪಕ್ಷ ಶೂನ್ಯದಿಂದ ಹೊಸ ಶೆಖೆ ಆರಂಭಿಸಿದೆ.

ಹಿಮಾಚಲಪ್ರದೇಶ:

68 ಕ್ಷೇತ್ರಗಳ ಹಿಮಾಚಲಪ್ರದೇಶದಲ್ಲಿ ಈ ಹಿಂದೆ ಬಿಜೆಪಿಯ ಜಯರಾಮ್ ಠಾಕೂರ್ ಮುಖ್ಯಮಂತ್ರಿಯಾಗಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ನತ್ತ ಒಲವು ತೋರಿದ್ದಾರೆ. ಬಿಜೆಪಿ 29 ಸ್ಥಾನಗಳಲ್ಲಿ , ಕಾಂಗ್ರೆಸ್ 35 ಸ್ಥಾನಗಳಲ್ಲಿ ಮುನ್ನಡೆ ಸಾಸಿ, ಪಕ್ಷೇತರರು 4 ಕ್ಷೇತ್ರಗಳಲ್ಲಿ ಗೆಲ್ಲುವ ಸೂಚನೆ ನೀಡಿದರು.

ಅಮ್ ಆದ್ಮಿ ಹಾಗೂ ಇತರೆ ಪಕ್ಷಗಳು ಖಾತೆ ತೆರೆಯಲು ವಿಫಲವಾಗಿದ್ದವು. ಗಿರಿಶಿಖರಗಳ ನಾಡು ಹಿಮಾಚಲಪ್ರದೇಶದಲ್ಲಿ ಕೊನೆಯ ಕ್ಷಣದವರೆಗೂ ಕುತೂಹಲದ ಪೈಪೋಟಿ ನಡೆದಿದೆ.ಎರಡು ಪ್ರಮುಖ ರಾಜ್ಯಗಳು ಹಾಗೂ ಒಂದು ಲೋಕಸಭೆ, ಆರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಅಮ್ ಆದ್ಮಿ ಪಕ್ಷಗಳು ಜಿದ್ದಿಗೆ ಬಿದ್ದಂತೆ ಪ್ರಚಾರ ನಡೆಸಿದ್ದವು.

ಗುಜರಾತ್‍ನತ್ತ ಹೆಚ್ಚು ಗಮನ ಕೇಂದ್ರೀಕರಿಸಿದ್ದ ಪ್ರಧಾನಿ ಮೋದಿ, ಸರಣಿ ರೋಡ್ ಶೋ, ಬಹಿರಂಗ ಪ್ರಚಾರಗಳಲ್ಲಿ ಭಾಗವಹಿಸಿದ್ದರು. ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ಮನ್ಸುಖ್ ಮಾಂಡವಿಯ, ಗಜೇಂದ್ರ ಶೇಖಾವತ್ ಸೇರಿದಂತೆ ಹಲವಾರು ಮಂದಿ ಠಿಕಾಣಿ ಹೂಡಿ ಚುನಾವಣಾ ರಣತಂತ್ರಗಳನ್ನು ಹೂಡಿದ್ದರು.

ಕಾಂಗ್ರೆಸ್ ಪರವಾಗಿ ಮಲ್ಲಿಕಾರ್ಜುನ ಖರ್ಗೆ, ಎರಡು ದಿನ ಪ್ರಚಾರ ನಡೆಸಿದ್ದರು. ಅಮ್ ಆದ್ಮಿ ಪಕ್ಷದಿಂದ ಅರವಿಂದ್ ಕೇಜ್ರಿವಾಲ್ 6ಕ್ಕೂ ಹೆಚ್ಚು ದಿನ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್‍ನ ಮುಂಚೂಣಿ ನಾಯಕ ರಾಹುಲ್ ಗಾಂಧಿ ಚುನಾವಣಾಯತ್ತ ತಲೆ ಹಾಕದೆ ತಮ್ಮ ಪಾಡಿಗೆ ತಾವು ಭಾರತ್ ಜೋಡೊ ಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದು ಗಮನಾರ್ಹ.


#Gujarat, #HimachalPradesh, #ElectionResults, #LiveUpdates, #GujaratAssemblyElection, #GujaratElectionResults, #HimachalPradeshElectionResults, #ಗುಜರಾತ್, #ಹಿಮಾಚಲಪ್ರದೇಶ, #ವಿಧಾನಸಭೆಚುನಾವಣೆಫಲಿತಾಂಶ, #ಚುನಾವಣೆಫಲಿತಾಂಶ, #ElectionResultsLiveUpdates

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(08-12-2022)

Articles You Might Like

Share This Article