ಬೊಟಾಡ್, ಜು.26 – ಗುಜರಾತ್‍ನ ಬೊಟಾಡ್ ಜಿಲ್ಲಾಯಲ್ಲಿ ನಕಲಿ ಮದ್ಯ ಸೇವನೆಯಿಂದ 21 ಜನರು ಸಾವನ್ನಪ್ಪಿದ್ದಾರೆ.
ಭಾವನಗರ, ಬೋಟಾಡ, ಬರ್ವಾಲಾ ಮತ್ತು ಧಂಧೂಕಾ ಸೇರಿದಂತೆ ಹಲವೆಡೆ ಕಳೆದ 3ದಿನದಲ್ಲಿ ನಕಲಿ ಮದ್ಯಕ್ಕೆ 21ಜನ ಸಾವನ್ನಪ್ಪಿ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 30 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೊಟಾಡ್ ಜಿಲ್ಲಾಯೊಂದರಲ್ಲೇ 16 ಮಂದಿ ಸಾವನ್ನಪ್ಪಿದ್ದಾರೆ ದೃಢಪಡಿಸಿದೆ. ಅಹಮದಾಬಾದ್ ಜಿಲ್ಲಾಯ ಧಂಧೂಕಾ ತಾಲೂಕಿನ ಐವರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ದೇಶ ನಿರ್ಮಿತ ನಕಲಿ ಮದ್ಯವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆಶಿಶ್ ಭಾಟಿಯಾ ಅವರು ಹೇಳಿದ್ದಾರೆ.
ನಿನ್ನೆ ಮುಂಜಾನೆ ಬರ್ವಾಲಾ ತಾಲೂಕಿನ ರೋಜಿದ್ ಗ್ರಾಮ ಮತ್ತು ಇತರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುತ್ತಿದ್ದ ಕೆಲವರ ಸ್ಥಿತಿ ಹದಗೆಟ್ಟ ನಂತರ ಬರ್ವಾಲಾ ಮತ್ತು ಬೊಟಾಡ್ ಪಟ್ಟಣಗಳ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತುನಮತರ ಈ ವಿಷಯ ಬೆಳಕಿಗೆ ಬಂದಿದೆ.
ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು ಎಂದು ಪೊಲೀಸ್ ಮಹಾನಿರೀಕ್ಷಕ ಅಶೋಕ್ ಕುಮಾರ್ ಯಾದವ್ ಹೇಳಿದ್ದಾರೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಅಹಮದಾಬಾದ್ ಕ್ರೈಂ ಬ್ರಾಂಚ್ ಕೂಡ ತನಿಖೆಗೆ ನಡೆಸುತ್ತಿದೆ.