ಗುಜರಾತ್ ಮಾದರಿ ಟಿಕೆಟ್ ಹಂಚಿಕೆ, 20 ಶಾಸಕರಿಗೆ ಕೋಕ್

Social Share

ಬೆಂಗಳೂರು,ಡಿ.9- ಪ್ರಧಾನಿ ನರೇಂದ್ರಮೋದಿಯವರ ತವರು ರಾಜ್ಯ ಗುಜರಾತ್‍ನಲ್ಲಿ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಬಿಜೆಪಿ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಹಿರಿಯ ತಲೆಗಳು ಹಾಗೂ ವಿರೋಧಿ ಅಲೆ ಎದುರಿಸುತ್ತಿರುವರಿಗೆ ಕೋಕ್ ನೀಡುವುದು ಬಹುತೇಕ ಖಚಿತವಾಗಿದೆ.

ರಾಜ್ಯದಲ್ಲೂ ಗುಜರಾತ್ ಮಾದರಿಯಂತೆಯೇ ಚುನಾವಣೆ ನಡೆಸಬೇಕೆಂಬ ಕೂಗು ಎದ್ದಿದ್ದು, ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದೆ. ಸಚಿವ ಸ್ಥಾನಕ್ಕಾಗಿ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡದೆ, ಪಕ್ಷದ ಬಾವುಟ ಕಟ್ಟುವವರಿಗೆ ಚುನಾವಣೆ ಯಲ್ಲಿ ಸ್ರ್ಪಧಿಸಲು ಅವಕಾಶ ಕೊಡಬೇಕೆಂಬ ಬೇಡಿಕೆ ಕೇಳಿಬರುತ್ತಿರುವುದರಿಂದ ಎರಡು ಡಜನ್‍ಗೂ ಅಧಿಕ ಶಾಸಕರು ಮತ್ತು ಸಚಿವರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟದಲ್ಲಿ ಸಚಿವರು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲು ದೆಹಲಿ ಬಿಜೆಪಿ ವರಿಷ್ಠರು ಯೋಚಿಸಿದ್ದಾರೆ ಎಂದು ಹೇಳಲಾಗಿದೆ.

ನಟ ಅನಿರುದ್ಧ್ ನಿರ್ಬಂಧ ತೆರವಿಗೆ ಎಸ್.ನಾರಾಯಣ್ ಸಂಧಾನ

ಮೋದಿ-ಅಮಿತ್ ಶಾ ಅವರ ಸೂಚನೆಯಂತೆ ಕರ್ನಾಟಕದಲ್ಲಿ ಆರು ನೂರಕ್ಕೂ ಹೆಚ್ಚು ಮಂದಿ ಪ್ರತ್ಯೇಕ ಸರ್ವೇ ಕಾರ್ಯದಲ್ಲಿ ತೊಡಗಿದ್ದಾರೆ. ಈ ತಂಡ ನೀಡಿರುವ ವರದಿ ಪ್ರಕಾರ, ಬಿಜೆಪಿಯ ಹಾಲಿ ಶಾಸಕರ ಪೈಕಿ 20ಕ್ಕೂ ಹೆಚ್ಚು ಮಂದಿಗೆ ಮತ್ತೆ ಗೆಲ್ಲುವ ಶಕ್ತಿ ಇಲ್ಲ. ಅವರು ಎದುರಾಳಿಗಳನ್ನು ಗೆಲ್ಲುವುದು ಅಸಾಧ್ಯವಾಗಿದೆ. ಹೀಗಾಗಿ ಅಂಥ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸುವುದು ಉತ್ತಮ ಎಂದು ಹೇಳಿದೆ.

ಮುಂದಿನ ಚುನಾವಣೆಯಲ್ಲಿ ಗೆಲ್ಲುವವರು ಯಾರು? ಸ್ವಲ್ಪ ಪುಷ್ಟಿ ನೀಡಿದರೂ ಗೆಲ್ಲುವವರು ಮತ್ತು ಯಾವ ಕಾರಣಕ್ಕೂ ಗೆಲ್ಲದೇ ಇರುವವರು ಯಾರು ಎಂಬ ಮೂರು ವಿಭಾಗಗಳನ್ನು ಈ ಸರ್ವೇ ತಂಡಗಳು ಗುರುತಿಸಿವೆ. ಸೋಲು ಅನುಭವಿಸುವವರು ಯಾರು? ಎಂಬ ವಿವರವನ್ನು ವರಿಷ್ಠರಿಗೆ ಸಮೀಕ್ಷಾ ತಂಡಗಳು ನೀಡಿವೆ.

ಬಸವರಾಜ ಬೊಮ್ಮಾಯಿ ಸಂಪುಟದ ಒಬ್ಬ ಸಚಿವರಂತೂ ತಮ್ಮ ಕ್ಷೇತ್ರದಲ್ಲಿ ಪಂಚಾಯಿತಿಗೊಬ್ಬರಂತೆ ಆಪ್ತ ಸಹಾಯಕರನ್ನಿಟ್ಟುಕೊಂಡಿದ್ದರೂ ಈ ಆಪ್ತ ಸಹಾಯಕರ ನಡವಳಿಕೆ ಈ ಸಚಿವರ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ಜನರಲ್ಲಿ ಅವರ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ.

ಗುಂಡಿನ ದಾಳಿ ನಡೆಸಿ ಪರಾರಿಯಾದ ದುಷ್ಕರ್ಮಿಗಳಿಗಾಗಿ ವ್ಯಾಪಕ ಶೋಧ

ಹೀಗಾಗಿ ಹಾಲಿ ಶಾಸಕರ ಪೈಕಿ ಯಾರ್ಯಾರು ತಮ್ಮ ನೆಲೆ ಕಳೆದುಕೊಂಡಿದ್ದಾರೆ ಎಂಬ ಬಗ್ಗೆ ವಿವರಿಸಿರುವ ಸರ್ವೇ ತಂಡಗಳು, ಇಂಥವರಿಗೆ ಟಿಕೆಟ್ ತಪ್ಪಿಸದಿದ್ದರೆ ಪಕ್ಷ ಗೆಲುವಿನ ಆಸೆ ಬಿಟ್ಟು ಬಿಡಬೇಕೆಂದು ಖಚಿತಪಡಿಸಿವೆ. ಇವರ ಬದಲು ಕ್ಷೇತ್ರದ ಯಾರಿಗೆ ಟಿಕೆಟ್ ಕೊಟ್ಟರೆ ಅನುಕೂಲ ಎಂಬ ಬಗ್ಗೆಯೂ ವರದಿಯಲ್ಲಿ ವಿವರಿಸಲಾಗಿದೆ.

ಗುಜರಾತ್ ವಿಧಾನಸಭಾ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಅದನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ವರಿಷ್ಠರು ರವಾನಿಸಿದ್ದ ಸರ್ವೇ ತಂಡಗಳು, ಹಾಲಿ ಶಾಸಕರ ಪೈಕಿ 40ರಷ್ಟು ಮಂದಿ ಗೆಲ್ಲುವುದಿಲ್ಲ ಎಂದು ವರದಿ ನೀಡಿದ್ದವು.

ಈ ವರದಿ ಆಧಾರದ ಮೇಲೆ 40 ಮಂದಿ ಶಾಸಕರಿಗೆ ಪಕ್ಷ ಟಿಕೆಟ್ ನಿರಾಕರಿಸಿತ್ತು. ಹೀಗೆ ಟಿಕೆಟ್ ಕೈತಪ್ಪಿದವರ ಪೈಕಿ ಏಳು ಮಂದಿ ಸ್ವತಃ ಅಮಿತ್ ಶಾ ಅವರ ಪರಮಾಪ್ತರೇ ಆಗಿದ್ದರು. ಆದರೆ ಗೆಲುವಿನ ಸಾಧ್ಯತೆ ಇಲ್ಲ ಎಂಬ ಮನವರಿಕೆ ಬಳಿಕ ವರಿಷ್ಠರು ಆ ನಲವತ್ತು ಮಂದಿ ಹಾಲಿ ಶಾಸಕರಿಗೆ ಬಿಜೆಪಿ ವರಿಷ್ಠರು ಟಿಕೆಟ್ ನಿರಾಕರಿಸಿದ್ದರು.

ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಬ್ರೇಕ್, ಕಟೀಲ್ ಮುಂದುವರಿಕೆ

ಬಿಜೆಪಿ ವರಿಷ್ಠರು ಕರ್ನಾಟಕದಲ್ಲೂ ಇದೇ ಸೂತ್ರ ಅನುಸರಿಸಲು ಮುಂದಾಗುತ್ತಾರೆ ಎಂಬ ವಿಶ್ಲೇಷಣೆ ಬಿಜೆಪಿ ಪಾಳೆಯದಲ್ಲಿ ಕೇಳಿಬಂದಿದೆ. ಈ ಬೆಳವಣಿಗೆಯೂ ವ್ಯಾಪಕ ಕುತೂಹಲಕ್ಕೂ ಸಹ ಕಾರಣವಾಗಿದೆ.
ದೆಹಲಿ ವರಿಷ್ಠರು ಗುಜರಾತ್ ಮಾದರಿ ಅನುಸರಿಸುತ್ತಾರೋ ಅಥವಾ ಬೇರೆ ತಂತ್ರಗಾರಿಕೆ ಅನುಸರಿಸುತ್ತಾರೋ ಎಂಬುದು ಕಾದು ನೋಡಬೇಕು.

Gujarat model, BJP, ticket, Karnataka elections,

Articles You Might Like

Share This Article