ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾಡೆಲ್ : 25 ಬಿಜೆಪಿಶಾಸಕರಿಗೆ ಕೊಕ್..!

Social Share

ಬೆಂಗಳೂರು,ನ.12- ಕೇಂದ್ರ ಬಿಜೆಪಿ ವರಿಷ್ಠರು ಒಂದು ವೇಳೆ ಗುಜರಾತ್ ಮಾದರಿಯನ್ನೇ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸಿದರೆ ಹಾಲಿ ಎರಡು ಡಜನ್ ಸಚಿವರು ಮತ್ತು ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.

ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಮಾಡಿರುವ ಟ್ವೀಟ್ ಆಡಳಿತರೂಢ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಗುಜರಾತ್ ಮಾದರಿಯೇ ಅಂತಿಮ ಎಂದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಘಟಾನುಘಟಿ ಸಚಿವರು ಮತ್ತು ಶಾಸಕರಿಗೆ ಗೇಟ್ ಪಾಸ್ ಖಚಿತ ಎಂಬ ಮಾತು ಕೇಸರಿ ಪಾಳಯದಲ್ಲಿ ಕೇಳಿ ಬರುತ್ತಿವೆ.

ಸಾಮಾನ್ಯವಾಗಿ ಲೇಹರ್ ಸಿಂಗ್ ಸುಖಾಸುಮ್ಮನೆ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವವರಲ್ಲ. ಏನೇ ಮಾತನಾಡಿದರೂ ಅದರ ಹಿಂದೆ ಕಾಣದ ಪ್ರಬಲ ಶಕ್ತಿ ಇದ್ದೇ ಇರುತ್ತದೆ. ಕೇಂದ್ರ ವರಿಷ್ಠರಿಗೆ ಆಪ್ತರಾಗಿರುವ ಲೇಹರ್‍ಸಿಂಗ್ ಸರಿಯಾದ ಮಾಹಿತಿ ಇದ್ದಿದ್ದರಿಂದಲೇ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

224 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ 117 ಬಿಜೆಪಿ ಶಾಸಕರಿದ್ದಾರೆ ( ಇತ್ತೀಚಿಗೆ ಮೃತಪಟ್ಟ ಮಾಜಿ ಶಾಸಕ ಉಮೇಶ್ ಕತ್ತಿ ಮತ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೊರತುಪಡಿಸಿ) ಸ್ವತಂತ್ರ ಅಭ್ಯರ್ಥಿ ಎನ್.ಮಹೇಶ್ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ.

ಬಿಜೆಪಿ ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಅಕಾರದಲ್ಲಿದ್ದರೂ ಅನೇಕ ಹಿರಿಯ ಮುಖಂಡರಿಗೆ ಸಚಿವ ಸ್ಥಾನ ನಿರಾಕರಿಸಲಾಗಿದೆ. ಮೂರ್ನಾಲ್ಕು ಬಾರಿ ಗೆದ್ದಿರುವ ಅನೇಕ ಶಾಸಕರನ್ನು ಸಚಿವರನ್ನಾಗಿ ಮಾಡಿಲ್ಲ. ಒಂದು ವೇಳೆ ಅಂಥವರಿಗೆ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿದ್ದರೆ ಅದು ನ್ಯಾಯಯುತವಾಗಿರುವುದಿಲ್ಲ ಎಂಬ ಅಭಿಪ್ರಾಯವು ವ್ಯಕ್ತವಾಗುತ್ತಿದೆ.

ವಿಜೇತ ಅಭ್ಯರ್ಥಿಗಳನ್ನು ಹುಡುಕಲು ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗುತ್ತಿದೆ. ಗುಜರಾತ್‍ನಂತೆ ಹಳಬರನ್ನು ಕೈ ಬಿಡುವುದಿಲ್ಲ. ಕರ್ನಾಟಕ ವಿಭಿನ್ನವಾಗಿದ್ದು ಗೆಲ್ಲಲು ಹಿರಿಯರ ಅಗತ್ಯವಿದೆ. ಈ ಮುಖಂಡರು ಪ್ರಮುಖ ಸಮುದಾಯದವರಾಗಿದ್ದು, ಅವರನ್ನು ಕೈ ಬಿಟ್ಟರೆ ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಮಧ್ಯೆ ಕರ್ನಾಟಕ ಬಿಜೆಪಿಯೂ ಗುಜರಾತ್ ಮಾದರಿ ಅನುಸರಿಸುತ್ತದೆ ಮತ್ತು ಹೊಸ ಮುಖಗಳಿಗೆ ಅವಕಾಶ ನೀಡುತ್ತದೆ ಎಂದು ಕೆಲವು ನಾಯಕರು ಮತ್ತು ಪಕ್ಷದ ತಳಮಟ್ಟದಲ್ಲಿ ಆಶಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಯುವಕರು ಸ್ರ್ಪಸಲು ಹಿರಿಯ ನಾಯಕರು ದಾರಿ ಮಾಡಿಕೊಡಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಲೆಹರ್‍ಸಿಂಗ್ ಸಿರೋಯಾ ಇತ್ತೀಚೆಗೆ ಹೇಳಿದ್ದರು.

ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ, ಜಿ.ಎಚ್ ತಿಪ್ಪಾರೆಡ್ಡಿ, ಗೋವಿಂದ ಕಾರಜೋಳ, ವಿ.ಸೋಮಣ್ಣ ಸೇರಿದಂತೆ ಹಿರಿಯ ನಾಯಕರು ಇದ್ದಾರೆ. ಆದರೆ ಇವರು ಲೆಹರ್ ಸಿಂಗ್ ಅಭಿಪ್ರಾಯವನ್ನು ಯಾವ ರೀತಿಯಲ್ಲಿ ಪರಿಗಣಿಸುತ್ತಾರೆ ಎಂಬುವುದು ಸದ್ಯಕ್ಕೆ ಕೆರಳಿರುವ ಕುತೂಹಲ.

ಯುವ ಜನಾಂಗಕ್ಕೆ ಮಾರಕವಾಗಲು ಹೃದಯಘಾತ ಇಲ್ಲಿದೆ ಹಲವು ಕಾರಣ

ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಪಕ್ಷದೊಳಗೆ ಯಾವುದೇ ರೀತಿಯ ಸ್ಥಾನಮಾನ ನೀಡುವುದಿಲ್ಲ ಎಂಬ ಅಲಿಖಿತ ನಿಯಮವನ್ನು ಮಾಡಲಾಗಿದೆ. ಬಿಜೆಪಿ ಸಂಸ್ಥಾಪಕರಾಗಿದ್ದ ಲಾಲ್‍ಕೃಷ್ಣ ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಉಮಾ ಭಾರತಿ, ಸುಷ್ಮಾ ಸ್ವರಾಜ್ ಸೇರಿದಂತೆ 75 ವರ್ಷ ದಾಟಿದ ಘಟಾನುಘಟಿಗಳಿಗೆ ಟಿಕೆಟ್ ನಿರಾಕರಿಸಲಾಗಿತ್ತು.

ವಿಶೇಷವೆಂದರೆ 75 ವರ್ಷ ದಾಟಿದ ನಂತರವೂ ಬಿಜೆಪಿಯೊಳಗೆ ಅಕಾರ ಅನುಭವಿಸಿದ್ದು, ಬಿ.ಎಸ್.ಯಡಿಯೂರಪ್ಪ ಮಾತ್ರ. ಸದ್ಯಕ್ಕೆ ಅವರನ್ನು ಕೇಂದ್ರ ಚುನಾವಣಾ ಸಮಿತಿ ಹಾಗೂ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

ಈಗಿನ ಸ್ಥಿತಿಗತಿಯಲ್ಲಿ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದು ಬಹುತೇಕ ಅನುಮಾನ. ಈಗಾಗಲೇ ಅವರು ತಮ್ಮ ಕ್ಷೇತ್ರಕ್ಕೆ ಪುತ್ರ ವಿಜಯೇಂದ್ರ ಅವರನ್ನು ವಾರಸುದಾರರನ್ನಾಗಿ ಮಾಡಿದ್ದಾರೆ.
ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಗುಜರಾತ್ ಮಾದರಿ ಎಂದು ಹೇಳುವ ಬಿಜೆಪಿಗೆ ಟಿಕೆಟ್ ಹಂಚಿಕೆ ವಿಷಯದಲ್ಲಿ ಅದೇ ರಾಜ್ಯದ ಮಾದರಿ ಎಂದರೆ ಬಹುತೇಕರು ಇರಿಸುಮುರಿಸಿಗೆ ಒಳಗಾಗುತ್ತಾರೆ.

ಯಾರ್ಯಾರಿಗೆ ಕೋಕ್:
ಬಿ.ಎಸ್.ಯಡಿಯೂರಪ್ಪ(ಶಿಕಾರಿಪುರ)
ಕೆ.ಎಸ್.ಈಶ್ವರಪ್ಪ ( ಶಿವಮೊಗ್ಗ ನಗರ)
ಗೋವಿಂದ ಕಾರಜೋಳ (ಮುದೋಳ)
ವಿಶ್ವೇಶ್ವರ ಹೆಗಡೆ ಕಾಗೇರಿ (ಶಿರಸಿ)
ಎಸ್.ಅಂಗಾರ (ಸುಳ್ಯ)
ಆರ್.ಅಶೋಕ್(ಪದ್ಮನಾಭನಗರ)
ವಿ.ಸೋಮಣ್ಣ (ಗೋವಿಂದರಾಜನಗರ)
ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ )
ಎಸ್.ಎ.ರವೀಂದ್ರನಾಥ್( ದಾವಣಗೆರೆ ಉತ್ತರ)
ಆರಗ ಜ್ಞಾನೇಂದ್ರ (ತೀರ್ಥಹಳ್ಳಿ )
ಎಸ್.ಸುರೇಶ್‍ಕುಮಾರ್ ( ರಾಜಾಜಿನಗರ)
ಎಸ್.ಎ.ರಾಮದಾಸ್( ಕೃಷ್ಣರಾಜ)
ಬಸನಗೌಡ ಪಾಟೀಲ್ ಯತ್ನಾಳ್( ಬಿಜಾಪುರ)
ತಿಪ್ಪಾರೆಡ್ಡಿ (ಚಿತ್ರದುರ್ಗ)

Articles You Might Like

Share This Article