Wednesday, May 31, 2023
Homeಇದೀಗ ಬಂದ ಸುದ್ದಿಕುಖ್ಯಾತ ಗ್ಯಾಂಗ್‍ಸ್ಟರ್ ಬಿಷ್ಣೋಯ್ ದೆಹಲಿಗೆ ಸ್ಥಳಾಂತರ

ಕುಖ್ಯಾತ ಗ್ಯಾಂಗ್‍ಸ್ಟರ್ ಬಿಷ್ಣೋಯ್ ದೆಹಲಿಗೆ ಸ್ಥಳಾಂತರ

- Advertisement -


ನವದೆಹಲಿ,ಮೇ.25-ನಟ ಸಲ್ಮಾನ್ ಖಾನ್ ಸೇರಿದಂತೆ ಹಲವಾರು ಪ್ರಮುಖರಿಗೆ ಜೀವ ಬೆದರಿಕೆ ಹಾಕಿರುವ ಕುಖ್ಯಾತ ಗ್ಯಾಂಗ್‍ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು ಗುಜರಾತ್ ಪೊಲೀಸರು ದೆಹಲಿಗೆ ಕರೆ ತಂದಿದ್ದಾರೆ.ಅಹಮದಾಬಾದ್‍ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿದ್ದ ಬಿಷ್ಣೋಯ್ ಅವರನ್ನು ಇಂದು ಮುಂಜಾನೆ ದೆಹಲಿಗೆ ಕರೆ ತಂದಿರುವುದಾಗಿ ಗುಜರಾತ್ ಪೊಲೀಸರು ತಿಳಿಸಿದ್ದಾರೆ.

ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಸಿದಂತೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸï) ಪೊಲೀಸರು ಬಿಷ್ಣೋಯ್‍ನನ್ನು ಗುಜರಾತ್‍ಗೆ ಕರೆದೊಯ್ದಿತ್ತು.ಏಪ್ರಿಲ್‍ನಲ್ಲಿ, ಕಚ್‍ನ ನಲಿಯಾದಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗುಜರಾತ್ ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ದರೋಡೆಕೋರ ಲಾರೆನ್ಸ್ ಬಿಷ್ಣೋಯ್‍ನನ್ನು 14 ದಿನಗಳ ಬಂಧನಕ್ಕೆ ನೀಡಿತು.ಈ ಹಿಂದೆ ಬಿಷ್ಣೋಯ್ ಎನ್‍ಐಎ ಮತ್ತು ಪಂಜಾಬ್ ಪೊಲೀಸರ ವಶದಲ್ಲಿದ್ದರು.

ಬಸ್‍ಗಳಲ್ಲಿ ಟಿಕೆಟ್ ತೆಗದುಕೊಳ್ಳದ ಮಹಿಳೆಯರು, ಸಾರಿಗೆ ನಿಗಮಕ್ಕೆ ತಲೆನೋವು

ದಿಲ್ಲಿ ಪೊಲೀಸ್ ವಿಶೇಷ ದಳವು ಬಿಷ್ಣೋಯï-ಜಿತೇಂದ್ರ ಗೋಗಿ ಸಿಂಡಿಕೇಟ್‍ನ ಸೇರಿದ ದರೋಡೆಕೋರನೊಬ್ಬನನ್ನು ಗುಂಡಿನ ಚಕಮಕಿಯ ನಂತರ ಬಂಸಿತ್ತು.ಆರೋಪಿಯನ್ನು ಯೋಗೇಶ್ ಅಲಿಯಾಸ್ ಹಿಮಾಂಶು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ನರೇಲಾ ಪೊಲೀಸ್ ಠಾಣೆಗೆ ಸಂಬಂಸಿದ ಕೊಲೆ ಯತ್ನ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಮೂರು ವರ್ಷಗಳಿಂದ ಆರೋಪಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ದೆಹಲಿ/ಎನ್‍ಸಿಆರ್‍ನಲ್ಲಿ ಕೊಲೆ ಯತ್ನ, ದರೋಡೆ, ಡಕಾಯಿತಿ, ಗಾಯ, ಕ್ರಿಮಿನಲ್ ಬೆದರಿಕೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಇತ್ಯಾದಿ 16 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಮತ್ತು ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ ಅರೆ-ಸ್ವಯಂಚಾಲಿತ ಪಿಸ್ತೂಲ್ ಮತ್ತು ಎರಡು ಜೀವಂತ ಕಾಟ್ರಿಡ್ಜ್‍ಗಳು ಸೇರಿದಂತೆ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಪಿಎಸ್ ವಿಶೇಷ ಕೋಶದಲ್ಲಿ ಕಾನೂನಿನ ಸಂಬಂತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Gujarat Police Brings Gangster Lawrence Bishnoi To Delhi

- Advertisement -
RELATED ARTICLES
- Advertisment -

Most Popular