ಗಾಂನಗರ,ಜ..24- ಮುಂದಿನ 10-12 ವರ್ಷಗಳಲ್ಲಿ ಗುಜರಾತ್ ಅಂದಾಜು 8 ಎಂಟಿಪಿಎ ಹೈಡ್ರೋಜನ್ ಉತ್ಪಾದನಾ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ವಿಶ್ವದ ಕೇಂದ್ರ ಬಿಂಧುವಾಗಲಿದೆ ಎಂದು ಕೈಗಾರಿಕಾ ಸಚಿವ ಬಲ್ವಂತಸಿಂಗ್ ರಜಪೂತ್ ಹೇಳಿದ್ದಾರೆ.
ಜಿ-20 ಶೃಂಗ ರಾಷ್ಟ್ರಗಳೊಂದಿಗೆ ಗುಜರಾತ್ ಅನ್ನು ಸಂಪರ್ಕಿಸುವ ಬ್ಯುಸಿನೆಸ್ 20 ಇಂಡಿಯಾ ಸಮಾವೇಶದಲ್ಲಿ ಮಾತನಾಡಿದ ಅವರು, ತನ್ನ ಚಾಲನಾ ಶಕ್ತಿಯಿಂದ ಗುಜರಾತ್ ಭಾರತದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ ಎಂದಿದ್ದಾರೆ.
2026-27ರ ವೇಳೆಗೆ ಗುಜರಾತ್ 500 ಶತಕೋಟಿ ಡಾಲರ್ ಆರ್ಥಿಕತೆ, 2030-32ರ ವೇಳೆಗೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಗುರಿ ಹೊಂದಿದೆ ಎಂದು ಅವರು ಹೇಳಿದರು.
ಪಿಎಸ್ಐ ಪರೀಕ್ಷಾ ಅಕ್ರಮ ಆರೋಪಿಯಿಂದ ವಿಡಿಯೋ ಬಾಂಬ್..!
ಹೊಸ ಪೀಳಿಗೆಗೆ ದೂರದೃಷ್ಟಿಯ ನೀತಿಗಳು ಮತ್ತು ಹಸಿರು ಇಂಧನ ಉತ್ಪಾದನಾ ಪ್ರಕ್ರಿಯೆಗಳ ಮೇಲೆ ಗಮನಹರಿಸಲಾಗುತ್ತಿದ್ದು, ಜಾಗತಿಕ ಮಾರ್ಗಸೂಚಿಯೊಂದಿಗೆ ಕೆಲಸ ಮಾಡುತ್ತಿದೆ. ಮುಂದಿನ 10-12 ವರ್ಷಗಳಲ್ಲಿ, ವರ್ಷಕ್ಕೆ ಮಿಲಿಯನ್ ಟನ್ನಂತೆ 8 ಎಂಟಿಪಿಎ ಸಾಮಥ್ರ್ಯದ ಹೈಡ್ರೋಜನ್ ಶಕ್ತಿ ಉತ್ಪಾದ£ ಗುರಿ ಸಾಧಿಸಲಿದೆ.
ಇದು ರಸಗೊಬ್ಬರ, ಉಕ್ಕು ಮತ್ತು ಹಸಿರು ಇಂಧನ ಆಧಾರಿತ ಕೈಗಾರಿಕೆಗಳಿಗೆ ನೆರವಾಗಲಿದೆ. ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿಗಳು, ಹಸಿರು ಹೈಡ್ರೋಜನ್ ಮತ್ತು ಹಸಿರು ಉತ್ಪಾದನಾ ಪ್ರಕ್ರಿಯೆಗಳಿಗೆ ಗುಜರಾತ್ ಒತ್ತು ನೀಡುತ್ತಿದೆ ಎಂದು ಅವರು ಹೇಳಿದರು.
Gujarat, world, centre, green hydrogen, production,