ಹುಬ್ಬಳ್ಳಿ ಗಲಭೆ : ಆರೋಪಿಗಳು ರಾತ್ರೋರಾತ್ರಿ ಹುಬ್ಬಳ್ಳಿಯಿಂದ ಕಲಬುರಗಿ ಜೈಲಿಗೆ ಶಿಫ್ಟ್

ಹುಬ್ಬಳ್ಳಿ, ಏ.19- ಹಳೆ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರನ್ನು ರಾತ್ರೋರಾತ್ರಿ ಹುಬ್ಬಳ್ಳಿಯಿಂದ ಗುಲ್ಬರ್ಗಾ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಗುಪ್ತಚರ ಮಾಹಿತಿಯಿಂದ ಅಲರ್ಟ್ ಆದ ಪೊಲೀಸರು ಹುಬ್ಬಳ್ಳಿ ಜೈಲಿನಿಂದ ಬಂಧಿತ 103 ಆರೋಪಿಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ನವಲಗುಂದ ಮಾರ್ಗವಾಗಿ ಕಲಬುರಗಿ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ.

ಬಂಧಿತರ ಬಿಡುಗಡೆಗೆ ಆಗ್ರಹಿಸಿ ಮತ್ತೊಂದು ಬಾರಿ ಹೋರಾಟ ಮಾಡಲು ತಯಾರಿ ಮಾಡಲಾಗಿತ್ತು. ಕೆಲವು ಸಂಘಟನೆಗಳು ಹೋರಾಟ ನಡೆಸಲು ರೂಪುರೇಷೆ ಸಿದ್ಧಪಡಿಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಏಕಾಏಕಿ ಆರೋಪಿಗಳನ್ನು ಕಲಬುರಗಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ಮತ್ತೊಂದು ಗಲಭೆ ಕುರಿತು ಸಂಚು ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.