ವಾಷಿಂಗ್ಟನ್‍ನ ಫಿನ್ಲಿಯಲ್ಲಿ ಗುಂಡಿನ ದಾಳಿ: ಮೂವರು ಸಾವು

ಎಸೆವಿಕ್ (ಅಮೆರಿಕ), ಆ.26- ಪೂರ್ವ ವಾಷಿಂಗ್ಟನ್‍ನ ಫಿನ್ಲಿಯಲ್ಲಿ ಬೆಳಗಿನ ಜಾವ 4 ಗಂಟೆಯಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಪೊಲೀಸರ ಕಾರ್ಯಾಚರಣೆಯಲ್ಲಿ ದಾಳಿಕೋರನನ್ನು ಗುಂಡಿಟ್ಟು ಕೊಲ್ಲಲಾಗಿದೆ.

ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಬಂದೂಕಿನಿಂದ ಏಕಾಏಕಿ ಗುಂಡು ಹಾರಿಸಿದ್ದು, ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದ ಮೂವರಿಗೆ ಗುಂಡು ತಾಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಕೆಲ ನಿಮಿಷದಲ್ಲೇ ಪೊಲೀಸರು ಸ್ಥಳಕ್ಕೆ ದಾವಿಸಿ ದಾಳಿಕೋರನ ಬಗ್ಗೆ ಮಾಹಿತಿ ಪಡೆದು ಟ್ರಕ್‍ನಲ್ಲಿ ಆರೋಪಿ ಪರಾರಿಯಾಗುತ್ತಿದ್ದಾಗ ತಡೆದು ಬಂಧಿಸಲು ಹೋದಾಗ ಆತ ಗುಂಡು ಹಾರಿಸಿದ್ದಾನೆ.

ನಂತರ ಪೊಲೀಸರು ಕೂಡ ಗುಂಡಿನ ದಾಳಿ ನಡೆಸಿ ಆತನನ್ನು ಕೊಂದಿದ್ದಾರೆ. ಬೆನ್‍ಟೋನ್ ಕೌಂಟ್ರಿಬಳಿ ದಾಳಿಕೋರ ಕೆಲ ಮನೆಗಳಿಗೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.