ರಾಂಚಿ ಹೊರವಲಯದಲ್ಲಿ ಭದ್ರತಾ ಪಡೆ-ನಕ್ಸಲರ ನಡುವೆ ಗುಂಡಿನ ಚಕಮಕಿ

Social Share

ರಾಂಚಿ, ಜ .13-ರಾಂಚಿ ನಗರದ ಹೊರವಲಯದಲ್ಲಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ನಿಷೇಧಿತ ಟಿಎಸ್‍ಪಿಸಿ ಸಂಘಟನೆಯ ಐವರು ಸದಸ್ಯರು ಬುದ್ಮು ಪ್ರದೇಶದ ಅರಣ್ಯದಲ್ಲಿ ಅಡಗಿರುವ ಬಗ್ಗೆ ಸುಳಿವಿನ ಮೇರೆಗೆ ಶೋಧ ಕಾರ್ಯಾಚರಣೆ ನಡೆಸುವಾಗ ಕಳೆದ ರಾತ್ರಿ ಈ ಘಟನೆ ನಡೆದಿದೆ.

ಕೊನೆಗೆ ದಟ್ಟ ಅರಣ್ಯದಲ್ಲಿ ಉಗ್ರರು ಪರಾರಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೌಶಾದ್ ಆಲಂ ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಮೋದಿ ಅಬ್ಬರ

ಗುಂಡಿನ ಚಕಮಕಿಯಲ್ಲಿ ಕೆಲವು ಉಗ್ರರು ಗಾಯಗೊಂಡಿದ್ದಾರೆ ಎಂಬ ಮಾಹಿತಿ,ಇದೇ ವೇಳೆ ಇದೇ ಪ್ರದೇಶದಲ್ಲಿ ನಕ್ಸಲರ ರೈಫಲ್ ಮತ್ತು ಕೆಲವುಗುಂಡಿನ ಕಾಟ್ರಿಡ್ಜ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

Gunfight, security forces, Naxals, Ranchi,

Articles You Might Like

Share This Article