ಅಪಾರ್ಟ್‍ಮೆಂಟ್ ಛಾವಣಿ ಕುಸಿದು ಇಬ್ಬರು ಸಾವು, 6 ಮಂದಿ ಗಾಯ

Social Share

ಹರಿಯಾಣ, ಫೆ.11- ಅಪಾರ್ಟ್‍ಮೆಂಟ್ ಛಾವಣಿ ಕುಸಿದು ಇಬ್ಬರು ಸಾವನ್ನಪ್ಪಿ ಆರು ಮಂದಿ ತೀವ್ರವಾಗಿ ಗಾಯಗೊಂಡಿರುವುದಲ್ಲದೆ ಹಲವರು ಅವಶೇಷಗಳಡಿ ಸಿಲುಕಿರುವ ಘಟನೆ ಗುರುಗ್ರಾಮದ ಚಿಂಟೆಲ್ಸಾ ಪ್ಯಾರಾಡಿಸೊ ಹೌಸಿಂಗ್ ಕಾಂಪ್ಲೆಕ್ಸ್‍ನಲ್ಲಿ ತಡರಾತ್ರಿ ನಡೆದಿದೆ.
ಕಟ್ಟಡ ದುರಸ್ತಿ ವೇಳೆ ಆರನೆ ಮಹಡಿಯ ಛಾವಣಿ ಕುಸಿದು ಈ ದುರ್ಘಟನೆ ಸಂಭವಿಸಿದ್ದು, ಅವಶೇಷಗಳಡಿ ಹಲವರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಗುರುಗ್ರಾಮ ಪೊಲೀಸ್ ಆಯುಕ್ತರು ಅಗ್ನಿಶಾಮಕ ದಳದ ಸಿಬ್ಬಂದಿ, ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ತಂಡಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚಿ ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ ಎಂದು ಅಗ್ನಿಶಾಮಕ ದಳದ ಉಪನಿರ್ದೇಶಕ ಗುಲ್ಷನ್ ತಿಳಿಸಿದ್ದಾರೆ. ಈ ಅಪಾರ್ಟ್‍ಮೆಂಟ್‍ನಲ್ಲಿ 530 ಫ್ಲಾಟ್‍ಗಳಿದ್ದು, ಸುಮಾರು 400 ಕುಟುಂಬಗಳು ವಾಸಿಸುತ್ತಿದ್ದವು. ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.

Articles You Might Like

Share This Article