ಗುಂಡಿಟ್ಟು ವ್ಯಕ್ತಿ ಹತ್ಯೆ, ಗ್ಯಾಂಗ್‍ವಾರ್ ಸಾಧ್ಯತೆ

ನವದೆಹಲಿ,ಮಾ.10- ಈಶಾನ್ಯ ದಿಲ್ಲಿಯ ಸೀಲಂಪುರ ಪ್ರದೇಶದಲ್ಲಿ ತಡರಾತ್ರಿ ಓರ್ವ ವ್ಯಕ್ತಿಯನ್ನು ಗುಂಡಿಟ್ಟು ಕೊಂದು ಹಾಕಲಾಗಿದೆ. ಈ ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ 8.45ಕ್ಕೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಅರ್ಬಾಜ್ ಮತ್ತು ಅಬಿದ್‍ಗೆ ಹಲವು ಸುತ್ತು ಗುಂಡು ಹಾರಿಸಲಾಗಿದೆ. 25 ರಿಂದ 30 ವರ್ಷ ವಯಸ್ಸಿನ ಸಂತ್ರಸ್ತರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅರ್ಬಾಜ್ ಸತ್ತಿದ್ದಾರೆ ಎಂದು ಘೋಷಿಸಿದರು ಎಂದು ಅಧಿಕಾರಿ ಹೇಳಿದರು. ಅಬಿದ್ ಅವರನ್ನು ಜಿಟಿಬಿ ಆಸ್ಪತ್ರೆಗೆ … Continue reading ಗುಂಡಿಟ್ಟು ವ್ಯಕ್ತಿ ಹತ್ಯೆ, ಗ್ಯಾಂಗ್‍ವಾರ್ ಸಾಧ್ಯತೆ