52 ಲಕ್ಷ ರೂ. ಮೌಲ್ಯದ ಗುಟ್ಕಾ ವಶ, ಮೂವರ ಬಂಧನ

ಪಾಲ್‍ಘರ್, ಮಾ.31- ಮಹಾರಾಷ್ಟ್ರದ ಪಾಲ್‍ಘರ್ ಜಿಲ್ಲೆಯ ಎರಡು ಪ್ರದೇಶಗಳಲ್ಲಿ 52 ಲಕ್ಷ ರೂ. ಮೌಲ್ಯದ ಗುಟ್ಕಾ ವಶಪಡಿಸಿಕೊಂಡು ಇದಕ್ಕೆ ಸಂಬಂಧಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮುಂಬೈ-ಅಹಮದಾಬಾದ್ ಹೆದ್ದಾರಿಯ ಅಚ್ಚಾಡ್ ಚೆಕ್‍ಪೊೀಸ್ಟ್ ಬಳಿ ಪೊಲೀಸರು ತಪಾಸಣೆ ಮಾಡಿದಾಗ ವಾಹನವೊಂದರಲ್ಲಿ 42ಲಕ್ಷ ರೂ. ಮೌಲ್ಯದ ಗುಟ್ಕಾ ಸಿಕ್ಕಿದ್ದು, ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಇದೇ ವೇಳೆ ವಾಸೈ ನಗರದ ಗೋಡೌನ್‍ವೊಂದರಲ್ಲಿ 10 ಲಕ್ಷ ರೂ. ಮೌಲ್ಯದ ಗುಟ್ಕಾ ಸಿಕ್ಕಿದ್ದು, ಗೋಡೌನ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಗುಟ್ಕಾ ಸೇವನೆ ಹಾಗೂ ಮಾರಾಟವನ್ನು ಮಹಾರಾಷ್ಟ್ರ ಸರ್ಕಾರ 2012ರಲ್ಲಿ ನಿಷೇಧ ಮಾಡಿತ್ತು. ಆದರೂ ಅಕ್ರಮವಾಗಿ ಗುಟ್ಕಾ ಮಾರಾಟದಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.