ಜ್ಯಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಕೆ ವಿಳಂಬ, 2 ದಿನ ಕಾಲಾವಕಾಶ ಕೇಳಿದ ಕಮಿಷನರ್

Spread the love

ವಾರಣಾಸಿ, ಮೇ 17- ಇಲ್ಲಿನ ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೊಗ್ರಫಿ ಸಮೀಕ್ಷೆಗೆ ನಿಯೋಜಿಸಲಾದ ಆಯೋಗವು ತನ್ನ ವರದಿಯನ್ನು ಸಲ್ಲಿಸಲು ಸ್ಥಳೀಯ ನ್ಯಾಯಾಲಯದಿಂದ ಮಂಗಳವಾರ ಹೆಚ್ಚುವರಿ ಸಮಯವನ್ನು ಕೋರಲಿದೆ ಎಂದು ಕೋರ್ಟ್ ಕಮಿಷನರ್ ಅಜಯ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ಈ ಹಿಂದೆ ಮಂಗಳವಾರದೊಳಗೆ ವರದಿ ಸಲ್ಲಿಸುವಂತೆ ಆಯೋಗಕ್ಕೆ ನ್ಯಾಯಾಲಯ ಸೂಚಿಸಿತ್ತು. ಸಹಾಯಕ ವಕೀಲ ಅಜಯ್ ಪ್ರತಾಪ್ ಸಿಂಗ್, ನ್ಯಾಯಾಲಯದ ಆದೇಶದಂತೆ ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೋಗ್ರಾಫಿ ಸಮೀಕ್ಷೆಯನ್ನು ಮೇ 14 ರಿಂದ ಮೇ 16 ರ ವರೆಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ನಡೆಸಿದ್ದಾರೆ.

ಇಂದು ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ವರದಿ ಸಿದ್ಧವಾಗದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸುತ್ತಿಲ್ಲ. ನ್ಯಾಯಾಲಯದಿಂದ ಹೆಚ್ಚುವರಿ ಸಮಯವನ್ನು ಕೇಳುತ್ತಿದ್ದೇವೆ. ನ್ಯಾಯಾಲಯ ಎಷ್ಟು ಸಮಯ ನೀಡಿದರೂ ಆ ಅವಧಿಯಲ್ಲೇ ವರದಿ ಸಲ್ಲಿಸುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.

ಮಸೀದಿಯು ಐಕಾನಿಕ್ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿದೆ ಮತ್ತು ಸ್ಥಳೀಯ ನ್ಯಾಯಾಲಯವು ಅದರ ಹೊರಗಿನ ಗೋಡೆಗಳ ಮೇಲೆ ಪ್ರತಿನಿತ್ಯ ಪ್ರಾರ್ಥನೆ-ಪೂಜೆ ಸಲ್ಲಿಸಲು ದೆಹಲಿ ಮೂಲದ ಐವರು ಮಹಿಳೆಯರು ಅನುಮತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದರು.
ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರು ಸಮೀಕ್ಷೆಯ ಸಮಯದಲ್ಲಿ ಶಿವಲಿಂಗವು ಕಂಡುಬಂದಿದೆ ಎಂದು ಹೇಳಿದ್ದಾರೆ. ನಂತರ ಸ್ಥಳೀಯ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಬಾವಿಯನ್ನು ಜಪ್ತಿ ಮಾಡಿ, ಮುಚ್ಚಲು ಸೋಮವಾರ ಆದೇಶಿಸಿತ್ತು.

ಮಸೀದಿ ನಿರ್ವಹಣಾ ಸಮಿತಿಯ ಸದಸ್ಯರೊಬ್ಬರು ಇದನ್ನು ವಿರೋಸಿದ್ದಾರೆ. ಮಸೀದಿಯಲ್ಲಿ ಜನರು ನಮಾಜ್ ಮಾಡುವ ಮೊದಲು ವಝೂಖಾನಾ ಜಲಾಶಯದ ನೀರನ್ನು ಸ್ನಾನಕ್ಕೆ ಬಳಕೆ ಮಾಡುತ್ತಾರೆ. ಸಿವಿಲ್ ನ್ಯಾಯಾೀಧಿಶರಾದ ರವಿಕುಮಾರ್ ದಿವಾಕರ್ ಜಪ್ತಿ ಆದೇಶ ಹೊರಡಿಸುವ ಮೊದಲು ಮಸೀದಿ ಆಡಳಿತವನ್ನು ಕೇಳಲಿಲ್ಲ ಎಂದು ಅಂಜುಮನ್ ಇಂತಜಾಮಿಯಾ ಮಸೀದಿ ಸಮಿತಿಯ ಜಂಟಿ ಕಾರ್ಯದರ್ಶಿ ಸೈಯದ್ ಮೊಹಮ್ಮದ್ ಯಾಸಿನ್ ಹೇಳಿದ್ದಾರೆ.

Facebook Comments