ಬುಡಮೇಲಾದ ಉನ್ನತ ಶಿಕ್ಷಣ ವ್ಯವಸ್ಥೆ : ವಿಶ್ವನಾಥ್ ಆರೋಪದ ತನಿಖೆ ಯಾವಾಗ..?

Social Share

ಬೆಂಗಳೂರು, ನ.27- ಬಿಜೆಪಿ ಆಡಳಿತದಲ್ಲಿ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣಗಳ ವ್ಯವಸ್ಥೆ ಬುಡಮೇಲಾಗಿದೆ ಎಂದು ಅವರದ್ದೇ ಪಕ್ಷದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ. ಪ್ರತಿ ಉಪಕುಲಪತಿ ನೇಮಕಕ್ಕೆ ಐದರಿಂದ ಆರು ಕೋಟಿ ವಸೂಲಿ ಮಾಡುತ್ತಿರುವುದಾಗಿ ಹೇಳಲಾಗಿದೆ. ಇದರ ವಿರುದ್ಧ ತನಿಖೆ ಯಾವಾಗ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಎಚ್.ವಿಶ್ವನಾಥ್ ಪತ್ರಿಕಾಗೋಷ್ಠಿಯ ಹೇಳಿಕೆ ವಿಡಿಯೋವನ್ನು ಲಗತ್ತಿಸಲಾಗಿದೆ. ವಿಡಿಯೋದಲ್ಲಿ ಎಚ್. ವಿಶ್ವನಾಥ್, ರಾಜ್ಯದಲ್ಲಿ ಶಾಲಾ ಶಿಕ್ಷಣ ಹಾಳಾಗುತ್ತಿದೆ, ಶೌಚಾಲಾಯ, ಕಾಂಪೊಂಡ್ ನಿರ್ಮಾಣ ಮಾಡಿ, ಶಿಕ್ಷಕರ ನೇಮಕ ಮಾಡಿ ಎಂದರೆ ಬಣ್ಣ ಬಳಿಯುತ್ತೇವೆ ಎನ್ನುತ್ತಾರೆ, ಇದು ಸರಿಯಲ್ಲ. ಒಂದು ಪಕ್ಷದ ಸಿದ್ಧಾಂತವನ್ನು ಮಕ್ಕಳ ಮೂಲಕ ಹೇರುವುದು ಅಪವಿತ್ರ, ಆತುರದಲ್ಲಿ ಇದನ್ನು ಮಾಡಬಾರದು, ಕೂಡಲೇ ಕೈ ಬೇಡಬೇಕು ಎಂದಿದ್ದಾರೆ.

ನಾನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿದ್ದೇನೆ. ಅಲ್ಲಿ ಹೊರ ಬರುತ್ತಿರುವ ಕರ್ಮಕಾಂಡಗಳು ಹೇಳಲು ಅಸಾಧ್ಯ. ಒಂದು ಕಾಲದಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಮಾದರಿಯಾಗಿತ್ತು. ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದು ಶಿಕ್ಷಣ ಪಡೆಯುತ್ತಿದ್ದರು.

ಇಂಧೋರ್ ತಲುಪಿದ ಕಾಂಗ್ರೆಸ್ ‘ಐಕ್ಯತಾ ಯಾತ್ರೆ’

ಈಗ ಕಾಲೇಜು ಶಿಕ್ಷಣವೂ ಹಾಳಾಗಿದೆ. ಡಾಕ್ಟರೇಟ್ ತಿರಸ್ಕಾರಗೊಂಡ ವ್ಯಕ್ತಿಯನ್ನು ಉಪಕುಲಪತಿ ಮಾಡಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ವರದಿ ಇದೆ. ಕ್ರಮಕ್ಕೆ ಬದಲಾಗಿ ಉನ್ನತ ಹುದ್ದೆ ನೀಡಲಾಗಿದೆ.

ಒಬ್ಬೊಬ್ಬ ಕುಲಪತಿ ನೇಮಕಕ್ಕೆ ಐದು ಕೋಟಿ ಸಂಗ್ರಹಿಸಲಾಗುತ್ತಿದೆ. ಬಂದರು ನೇಮಕಾತಿ ದುಡ್ಡು ಮಾಡಿಕೊಂಡು ಹೋಗುತ್ತಾರೆ. ಸುಖಾಸುಮ್ಮನೇ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡು ಕಮಿಷನ್ ಪಡೆಯುತ್ತಾರೆ. ನೇಮಕಾತಿ ಹಾಗೂ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಅಧಿಕಾರವನ್ನು ಉಪಕುಲಪತಿ ಅವರಿಂದ ಹಿಂಪಡೆಯಬೇಕು. ರಾಜ್ಯದಲ್ಲಿ ಹೊಸದಾಗಿ ಒಂಭತ್ತು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಇವು ಯಾಕೆ ಬೇಕು, ರಾಜ್ಯದಲ್ಲಿ ಕಾಲೇಜು ಮತ್ತು ಶಾಲಾ ಶಿಕ್ಷಣ ಹಾಳಾಗುತ್ತಿರುವುದನ್ನು ನೋಡುತ್ತಿದ್ದರೆ ವೇದನೆಯಾಗುತ್ತಿದೆ ಎಂದಿದ್ದಾರೆ.

ಈ ವಿಡಿಯೋವನ್ನು ಲಗತ್ತಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಉಪಕುಲಪತಿ ಹುದ್ದೆಗೆ 5 ರಿಂದ 6 ಕೋಟಿ ಕೊಟ್ಟು ಬಂದಿದ್ದಾರೆ ಎನ್ನುವ ಮೂಲಕ ಉನ್ನತ ಶಿಕ್ಷಣ ಇಲಾಖೆಯ ಭ್ರಷ್ಟಾಚಾರವನ್ನು ಬಯಲಿಗಿಟ್ಟಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ನಿಮ್ಮವರದ್ದೇ ಈ ಆರೋಪದ ಬಗ್ಗೆ ತನಿಖೆ ಯಾವಾಗ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಲಾಕ್‍ಡೌನ್ ಖಂಡಿಸಿ ಪಂಜು ಹಿಡಿದು ಬೀದಿಗಿಳಿದ ಚೀನಾ ಜನ

ಶೇ.40 ಪರ್ಸೆಂಟ್ ಆಡಳಿತದಲ್ಲಿ ಸರ್ಕಾರಿ ಆಸ್ಪತ್ರೆಗಳು ಭ್ರಷ್ಟಾಚಾರದಿಂದ ಮೃತ್ಯುಕೂಪಗಳಾಗಿ ಬದಲಾಗಿವೆ. ಹಣವಿಲ್ಲದಿದ್ದರೆ ಜೀವವೇ ಇಲ್ಲ ಎಂಬಂತಹ ಪರಿಸ್ಥಿತಿ ಸರ್ಕಾರಿ ಅಸ್ಪತ್ರೆಗಳಲ್ಲಿದೆ. ತಮ್ಮ ಇಲಾಖೆಯನ್ನು ಗಮನಿಸದ ಆರೋಗ್ಯ ಸಚಿವ ಡಾ.ಸುಧಾಕರ್ ಕಾಲ ಕಾಲಕ್ಕೆ ಕಮಿಷನ್ ತಲುಪಿದರೆ ಸಾಕು ಎಂದು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಬಿಡದಿ ಆಸ್ಪತ್ರೆಯ ವಿಡಿಯೋವನ್ನು ಲಗತ್ತಿಸಿ ಕಾಂಗ್ರೆಸ್ ಟೀಕಿಸಿದೆ.

ಪ್ಲಾಸ್ಟಿಕ್ ಮುಕ್ತವಾಗಿರಲಿದೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಮುಂದುವರೆದ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸದ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದೆ. 3000 ಕೋಟಿಯ ಕಾಮದೇನು ನಿ ಸ್ಥಾಪಿಸುತ್ತೇವೆ ಎಂದಿದ್ದ ಬಿಜೆಪಿ ಈಗ ಹೈನೋದ್ಯಮಿಗಳನ್ನು ಅನಾಥರನ್ನಾಗಿಸಿದೆ. ಹೊಸ ಗೋ ಶಾಲೆಗಳು ಸ್ಥಾಪನೆಯಾಗಿಲ್ಲ, ಮೇವು ಪೂರೈಕೆದಾರರಲ್ಲೂ ಕಮಿಷನ್ ಲೂಟಿ, ಚರ್ಮಗಂಟು ರೋಗದ ನಿಯಂತ್ರಣಕ್ಕೆ ಕ್ರಮವಿಲ್ಲ, ಎಲ್ಲಿ ಹೋಯ್ತು ನಿಮ್ಮ ಕಾಮದೇನು ನಿ ಎಂದು ಪ್ರಶ್ನಿಸಿದೆ.

H Vishwanath, higher, education, system, Congress,

Articles You Might Like

Share This Article