ಬೆಂಗಳೂರು,ಮಾ.10- ಬೇಸಿಗೆ ಕಾಲದಲ್ಲಿ ಜಾಗತಿಕ ಆತಂಕ ಸೃಷ್ಟಿಸಿರುವ ಹೆಚ್1ಎನ್1 ಮತ್ತು ಹೆಚ್3ಎನ್2 ಸೋಂಕುಗಳಿಗೆ ಸಂಬಂಧ ಪಟ್ಟ 26 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.
ಹಂದಿಜ್ವರ ಎಂದು ಹೇಳಲಾಗುವ ಹೆಚ್1ಎನ್1 ಸೋಂಕಿನ 10 ಪ್ರಕರಣಗಳು, ಹಾಂಗ್‍ಕಾಂಗ್ ಸೋಂಕು ಎಂದು ಗುರುತಿಸುತ್ತಿರುವ ಹೆಚ್3ಎನ್2 ಸೋಂಕಿನ 16 ಪ್ರಕರಣಗಳು ಕಳೆದ ಜನವರಿಯಿಂದ ಮಾರ್ಚ್‍ವರೆಗೂ ರಾಜ್ಯದಲ್ಲಿ ವರದಿಯಾಗಿವೆ.
ಹಾಂಗ್‍ಕಾಂಗ್ ಸೋಂಕಿಗೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ 87 ವರ್ಷದ ವ್ಯಕ್ತಿ ಕಳೆದ 10 ದಿನಗಳ ಹಿಂದೆಯೇ ಮೃತಪಟ್ಟಿದ್ದು, ತಡವಾಗಿ ಪತ್ತೆಯಾಗಿದೆ. ಈ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡಾಗಲೂ ರಾಷ್ಟ್ರದಲ್ಲೇ ಮೊದಲ ಬಾರಿಗೆ ಕಲಬುರಿಗಿಯ ವ್ಯಕ್ತಿ ಮೃತಪಟ್ಟಿದ್ದರು. ಈಗ ಹಾಂಗ್‍ಕಾಂಗ್ ಸೋಂಕಿಗೆ ರಾಜ್ಯದಲ್ಲೇ ಮೊದಲ ಸಾವು ಸಂಭವಿಸಿದೆ.
BIG NEWS : ಕರ್ನಾಟಕ, ಹರಿಯಾಣದಲ್ಲಿ H3N2ಗೆ ಇಬ್ಬರು ಬಲಿ
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಆಯುಕ್ತ ಡಿ.ರಂದೀಪ್, ಹಾಸನದ ಹಿರಿಯ ವ್ಯಕ್ತಿಗೆ ಜ್ವರ, ಕೆಮ್ಮು ಹಾಗೂ ಇತರ ರೋಗ ಲಕ್ಷಣಗಳಿಂದ ಫೆಬ್ರವರಿ 24ರಂದು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.
ದಾಖಲಾಗುವ ಮುನ್ನ 5 ದಿನಗಳಿಂದ ಅವರನ್ನು ಕೆಮ್ಮು ಹಾಗು ಇತರೆ ಸಮಸ್ಯೆಗಳು ಬಾಸುತ್ತಿದ್ದವು. ವಯೋಸಹಜವಾದ ಹೈಪರ್ ಟೆನ್‍ಶಷನ್, ಮೂತ್ರಪಿಂಡ ಸಮಸ್ಯೆ ಹಾಗೂ ಮೊದಲಿನಿಂದಲೂ ಇದ್ದ ಅಸ್ತಮಾ ಕೂಡ ಕಾಡುತ್ತಿತ್ತು.
ತಳಮಟ್ಟದಲ್ಲಿ ಪಕ್ಷ ಪ್ರಬಲವಾಗಿದೆ, ಮತ್ತೆ ಅಧಿಕಾರಕ್ಕೇರುತ್ತೇವೆ : ಬೊಮ್ಮಾಯಿ
ಅನೇಕ ಕೋ ಮಾರ್ಬಿಡ್ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿ ಮಾರ್ಚ್ 1ರಂದು ಮೃತಪಟ್ಟಿದ್ದರು. ಹೆಚ್3ಎನ್2 ಸೋಂಕಿನ ಲಕ್ಷಣಗಳಿದ್ದ ಕಾರಣಕ್ಕೆ ಮಾರ್ಚ್ 3ರಂದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮಾರನೆಯ ದಿನ ಲಭ್ಯವಾದ ಪರೀಕ್ಷಾ ಫಲಿತಾಂಶದಲ್ಲಿ ಹೆಚ್3ಎನ್2 ಸೋಂಕು ಖಚಿತವಾಗಿದೆ ಎಂದು ತಿಳಿಸಿದ್ದಾರೆ.
H3N2, Influenza, Death, India, Haryana, Karnataka, 2 Deaths, Due,