H3N2 ವೈರಸ್ ಬಗ್ಗೆ ಅನಗತ್ಯ ವದಂತಿ ಹಬ್ಬಿಸಬೇಡಿ : ಸಚಿವ ಸುಧಾಕರ್

Social Share

ಬೆಂಗಳೂರು,ಮಾ.6- ರಾಜ್ಯಾದ್ಯಂತ ಆತಂಕ ಸೃಷ್ಟಿಸಿರುವ ಹೆಚ್3ಎನ್2 ಸೋಂಕು ಸದ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಿಲ್ಲ. ಆದರೂ ನಾವು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಸಾರ್ವಜನಿಕರು ಕೂಡ ಮೈಮರೆಯದೆ ಎಚ್ಚರಿಕೆಯಿಂದ ಇರಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಹೆಚ್3ಎನ್2 ಸೋಂಕು ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರ ಜೊತೆಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸೋಂಕಿನ ಬಗ್ಗೆ ಕೆಲವರು ಅನಗತ್ಯ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ರಾಜ್ಯದಲ್ಲಿ ಇದು ಕೈ ಮೀರು ವಂಥ ಹಂತಕ್ಕೆ ತಲುಪಿಲ್ಲ. ಆರೋಗ್ಯ ಇಲಾಖೆ ಸಂಪೂರ್ಣ ವಾಗಿ ನಿಗಾ ಇಟ್ಟಿದೆ ಎಂದು ತಿಳಿಸಿದರು.

ದೇಶದಲ್ಲಿ ಹೆಚ್3ಎನ್2 ಸೋಂಕು ಹೆಚ್ಚು ವರದಿಯಾಗುತ್ತಿರುವ ಸುದ್ದಿ ಕಾರಣ ಗಾಬರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಆದರೆ ಗಾಬರಿ ಪಡುವ ಯಾವುದೇ ಸ್ಥಿತಿ ಇಲ್ಲ. ಆದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ಉಮೇಶ್ ಪಾಲ್ ಹತ್ಯೆಗೈದ ಮತ್ತೊಬ್ಬ ಆರೋಪಿಯ ಎನ್‍ಕೌಂಟರ್

ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಆದರೆ ಇವಾಗ ಆಸ್ಪತ್ರೆಯಲ್ಲಿ ಮಾಸ್ಕ್ ಧರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಆರೋಗ್ಯ ಸಿಬ್ಬಂದಿ ಮಾಸ್ಕ್ ಗಳನ್ನು ಧರಿಸಬೇಕು. ಈ ಬಗ್ಗೆ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

ಇನ್‍ಫ್ಲುಯೆಂಜಾ ಲಸಿಕೆಯನ್ನು ಆರೋಗ್ಯ ಸಿಬ್ಬಂದಿ ಪಡೆದುಕೊಳ್ಳಬೇಕು. ವರ್ಷಕ್ಕೆ ಒಂದು ಬಾರಿ ತೆಗೆದುಕೊಳ್ಳುವ ಲಸಿಕೆ ಪಡೆಯಲು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸೂಚನೆ ನೀಡಲಾಗುವುದು. ಐಸಿಯು ನಲ್ಲಿ ಕೆಲಸ ಮಾಡುವವರು ಹಾಗೂ ಸಿಬ್ಬಂದಿಗೆ ಸರ್ಕಾರದಿಂದ ಲಸಿಕೆ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.

ಈ ಬಗ್ಗೆ ಆತಂಕ ಇರುವುದರಿಂದ ಸಭೆ ನಡೆಸಿದ್ದೇವೆ. ಗಾಬರಿ ಪಡುವ ಯಾವುದೇ ಸ್ಥಿತಿ ನಿರ್ಮಾಣವಾಗಿಲ್ಲ, ಆದ್ರೆ ಮುಂಜಾಗ್ರತಾ ಕ್ರಮವಹಿಸಬೇಕು. ನಮ್ಮ ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್ ಎಲ್ಲರೂ ಮಾಸ್ಕ್ ಧರಿಸುತ್ತಿದ್ದರು. ಈಗ ಮಾಸ್ಕ್ ಧರಿಸುತ್ತಿಲ್ಲ. ಎಲ್ಲಾ ಹೆಲ್ತ್ ಕೇರ್ ಸಿಬ್ಬಂದಿ ಸ್ಟಾಪ್ ಕಡ್ಡಾಯವಾಗಿ ಇನ್ನು ಮುಂದೆ ಮಾಸ್ಕ್ ಧರಿಸಬೇಕು. ಶುಚಿತ್ವಕ್ಕೆ ಹೆಚ್ಚು ಮಹತ್ವ ಕೊಡಬೇಕು, ಸೀನುವಾಗ ಕೆಮ್ಮುವಾಗ ಮಾಸ್ಕ್ ಹಾಕಬೇಕು, ಸಾರ್ವಜನಿಕ ಅಂತರ ಕಾಪಾಡಬೇಕು ಎಂದು ಸಲಹೆ ಮಾಡಿದರು.

65 ಕಾನೂನುಗಳನ್ನು ರದ್ದುಗೊಳಿಸಲು ಸಂಸತ್‍ನಲ್ಲಿ ಮಸೂದೆ ಮಂಡನೆ

ಆರೋಗ್ಯ ಸಿಬ್ಬಂದಿಗಳು ಕಡ್ಡಾಯವಾಗಿ ವ್ಯಾಕ್ಸೀನ್ ತೆಗೆದುಕೊಳ್ಳಬೇಕು, ವರ್ಷದಲ್ಲಿ ಒಂದು ಭಾರಿ ಕಡ್ಡಾಯ. ಸರ್ಕಾರದಿಂದಲೇ ವ್ಯಾಕ್ಸಿನೇಷನ್ ಕೊಡುತ್ತಿದ್ದೇವೆ ಕೇಂದ್ರ ಸರ್ಕಾರ ಪ್ರತಿವಾರ 25 ಟೆಸ್ಟ್ ಮಾಡಲು ಸೂಚಿಸಿದೆ. 15 ವರ್ಷದ ಕೆಳಗಿನ ಮಕ್ಕಳಿಗೆ ಅಪಾಯ ಇದೆ, ಮಕ್ಕಳು ಶಾಲೆಗಳಲ್ಲಿ ಒಟ್ಟಿಗೆ ಕೂರುವುದರಿಂದ ಅಪಾಯ ಹೆಚ್ಚು. 65 ವರ್ಷ ಮೇಲ್ಪಟ್ಟ ವಯೋವೃದ್ದರು, ಗರ್ಭಿಣಿಯರಿಗೂ ಇದರ ಅಪಾಯವಿದೆ ಎಂದರು.

ಕೇಂದ್ರ ಸರ್ಕಾರದ ಸೂಚನೆಯಂತೆ ವಾಣಿವಿಲಾಸ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾರಿ ಹಾಗೂ ಐಎಲ್‍ಐ ಪ್ರಕರಣಗಳಲ್ಲಿ 25 ಟೆಸ್ಟ್ ಪ್ರತಿ ವಾರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಂಕಿ – ಅಂಶಗಳು ನೋಡಿದಾಗ ಆತಂಕ ಪಡುವ ಅಗತ್ಯ ಇಲ್ಲ. ಜನವರಿ, ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ ಕೇಸ್ ಎಚ್ 1 ಎನ್ 1 ಕರ್ನಾಟಕ 20, ಎಚ್3ಎನ್2 – 26, ಇನ್ ಫ್ಲುಯೆಂಜಾ ಬಿ 10 ಹಾಗೂ ಅಡೆನೋ ವೈರಸ್ 60 ಪ್ರಕರಣಗಳು ಇವೆ ಎಂದು ವಿವರಿಸಿದರು.

ಯಾರೂ ವೈಯಕ್ತಿಕ ಚಿಕಿತ್ಸೆ ಪಡೆದುಕೊಳ್ಳಬಾರದು. ಅನಗತ್ಯ ಆ್ಯಂಟಿಬಯೋಟೆಕ್ ಪಡೆದುಕೊಳ್ಳುವುದು ಸರಿಯಲ್ಲ. ರೋಗದ ಲಕ್ಷಣಕ್ಕೆ ಸಂಬಂಸಿದ ಔಷದ ಕೊಡಲಾಗುತ್ತಿದೆ. ಔಷೀಯ ಕೊರತೆ ಇಲ್ಲ ಎಂದರು.
ಬೇಸಿಗೆ ಪ್ರವೇಶದಿಂದ ತಾಪಮಾನ ಏರಿಕೆ ಆಗಿದೆ. ಬದಲಾದ ಪರಿಸರ ವಾತಾವರಣದಿಂದ ತಾಪಮಾನ ಹೆಚ್ಚಾಗುತ್ತಿದೆ.

ಬಿಸಿಗಾಳಿಗೆ ಸಾಕಷ್ಟು ಜನರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಸಿಲಿನಲ್ಲಿ ಅನಗತ್ಯ ಓಡಾಟ ಕಡಿಮೆ ಮಾಡಿ. ಬೆಳಗ್ಗೆ 11 ರಿಂದ 3 ಗಂಟೆಯ ವರಗೆ ಬಿಸಿಲಿನ ಓಡಾಟ ಕಡಿಮೆ ಮಾಡಿ. ಹೆಚ್ಚು ನೀರನ್ನು ಪ್ರತಿನಿತ್ಯ ಕುಡಿಯಬೇಕು. ಮಜ್ಜಿಗೆ, ಶರಬತ್ ಹೆಚ್ಚಾಗಿ ಕುಡಿಯಬೇಕು ಎಂದು ಮನವಿ ಮಾಡಿದರು.

ನಾವು ಈಗ ಬೇಸಿಗೆಗೆ ಕಾಲಿಡುತ್ತಿದ್ದೇವೆ. ತಾಪಮಾನ ಫೆಬ್ರವರಿ ಇಂದ ಹೆಚ್ಚಾಗಿದೆ. ಬಿಸಿಲಿನ ತಾಪಮಾನಕ್ಕೆ ಜನ ಬಳಲುತ್ತಿದ್ದಾರೆ, ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ವರೆಗೆ ಬಿಸಿಲಿನಲ್ಲಿ ಹೋಗೋದು ಕಡಿಮೆ ಮಾಡಿ. ಬೇಸಿಗೆಯಲ್ಲಿ ಹೆಚ್ಚು ನೀರನ್ನು ಸೇವಿಸಬೇಕು, ಕನಿಷ್ಠ 2-3 ಲೀಟರ್ ನಿರು ಸೇವಿಸಬೇಕು, ಎಳನೀರು, ಮಜ್ಜಿಗೆ ಸೇವಿಸುವುದು ಉತ್ತಮ
ಎಚ್3ಎನ್2 ಇದು ಅಪಾಯಕಾರಿ ಅಲ್ಲ, ಕೋವಿಡ್ ಬಂದವರಿಗೆ ಸ್ವಲ್ಪ ದೀರ್ಘ ಕಾಲದ ಕೆಮ್ಮು ಇರುತ್ತದೆ.

ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಆದರೆ ಸಾಂಕ್ರಾಮಿಕ ಹರಡುವ ಅಪಾಯ ಇದೆ. ಬೆಂಗಳೂರಿನಲ್ಲಿ ಈ ಸೋಂಕು ಕಡಿಮೆ ಇದೆ. ಬೆಂಗಳೂರಿನಲ್ಲಿ h3ಟಿ2 ಎರಡು ಕೇಸ್ ಇದೆ. ಆದರೂ, ಅಗತ್ಯವಾಗಿ ಗುಂಪು ಸೇರುವುದು ಕಡಿಮೆ ಮಾಡಬೇಕು ಎಂದರು.

ಮನೆ ಬಾಗಿಲಿಗೆ ಚಿಕಿತ್ಸೆ, ಪರೀಕ್ಷಾ ಸೌಲಭ್ಯ ತಲುಪಿಸಲು ಸರ್ಕಾರದ ಪ್ರಯತ್ನ: ಮೋದಿ

ಇವತ್ತು ಎಚ್3ಎನ್2 ಪ್ರತ್ಯೇಕ ಕೋವಿಡ್ ಮಾರ್ಗಸೂಚಿ ಹೊರಡಿಸುತ್ತೇವೆ. ಕೋವಿಡ್ ರೀತಿಯಲ್ಲೆ ಇದರ ರೋಗಲಕ್ಷಣಗಳು ಇರುತ್ತವೆ. ಕೋವಿಡ್‍ಗೆ ಕೊಡುತ್ತಿದ್ದ ಚಿಕಿತ್ಸೆಯನ್ನೇ ಮುಂದುವರೆಸುತ್ತಿದ್ದೇವೆ ಎಂದು ಅವರು ಹೇಳಿದರು.

H3N2, Virus, Precautionary, Measures, Minster, Sudhakar,

Articles You Might Like

Share This Article