ನವದೆಹಲಿ, ಡಿ.11- ಊಟದಲ್ಲಿ ಕೂದಲು ಪತ್ತೆಯಾಗಿದ್ದಕ್ಕೆ ಪತ್ನಿಯನ್ನು ಮನಬಂದಂತೆ ತಳಿಸಿ ತಲೆಬೋಳಿಸಿ ಸೈಕೋ ಪತಿಯೊಬ್ಬ ಮೃಗೀಯವಾಗಿ ವರ್ತಿಸಿದ ಘಟನೆ ಉತ್ತರ ಪ್ರದೇಶದ ಪಿಲಿಬಿತ್‍ನಲ್ಲಿ ನಡೆದಿದೆ.
ಸಣ್ಣ- ಸಣ್ಣ ವಿಷಯಕ್ಕೂ ಕೋಪಗೊಳ್ಳುತ್ತಿದ್ದ ಈತ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ. ಊಟ ಮಾಡುತ್ತಿದ್ದ ವೇಳೆ ಆಹಾರದಲ್ಲಿ ಕೂದಲು ಕಂಡು ಬಂದಿದೆ. ಇದರಿಂದ ಕೋಪಗೊಂಡ ಆತ ಪತ್ನಿಗೆ ತೀವ್ರ ಹಲ್ಲೆ ನಡೆಸಿದ್ದಾನೆ.
ಸುಗಮ ಸಂಚಾರ ಜಾರಿ- ಅಪಘಾತ ತಡೆ ಸಭೆಯಲ್ಲಿ ಸಾರ್ವಜನಿಕರ ಸಲಹೆ ಆಲಿಕೆ
ಈ ಸಂಬಂಧ ಮಹಿಳೆ ಪಿಲಿಬಿತ್‍ನ ಗರ್ಜೋಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನನ್ನ ಪತಿ ನನಗೆ ನಿರಂತರ ಹಿಂಸೆ ಮಾಡುತ್ತಾನೆ. ಕೈಕಾಲು ಕಟ್ಟಿ ಹಾಕಿ ತಲೆ ಬೋಳಿಸಿ ಚಿತ್ರಹಿಂಸೆ ನೀಡಿದ್ದಾನೆ. ಮನಬಂದಂತೆ ಹಲ್ಲೆ ನಡೆಸಿದರೂ ಅತ್ತೆ-ಮಾವ ನನ್ನ ಸಹಾಯಕ್ಕೆ ಬರದೇ ಆತನಿಗೆ ಬೆಂಬಲಿಸಿದರು ಎಂದು ಮಹಿಳೆ ಆರೋಪಿಸಿದ್ದಾಳೆ.
ಟೀ ಅಂಗಡಿಗೆ ನುಗ್ಗಿ ಹಲ್ಲೆ ಮಾಡಿದ್ದ ನಾಲ್ವರು ಪುಂಡರು ಅಂದರ್
ಘಟನೆ ಸಂಬಂಧ ತನ್ನ ಪೊಷಕರಿಗೆ ದೂರವಾಣಿ ಮಾಡಿ ತಿಳಿಸಿದ್ದಾಳೆ. ಆಕೆಯ ಪೊಲೀಸರು ಮನೆಗೆ ಬಂದ ಅವರ ಮೇಲೂ ಕೂಡ ಹಲ್ಲೆ ಯತ್ನ ನಡೆದಿದೆ. ಮಹಿಳೆಯ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣ ನಡೆಸಿದ್ದಾಳೆ.
hairinfood, husband, made, wife, bald, pilibhit,