ನವದೆಹಲಿ,ಮಾ.1-ಭಾರತ್ ಜೋಡೋ ಯಾತ್ರೆ ಆರಂಭವಾದಗಿನಿಂದ ತಮ್ಮ ಗಡ್ಡ ತೆಗೆಯದ ರಾಹುಲ್‍ಗಾಂಧಿ ಅವರು ಇದೀಗ ಗಡ್ಡ ಬೋಳಿಸಿ ಟ್ರಮ್ ಆಗಿದ್ದಾರೆ.ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡುವ ಉದ್ದೇಶದಿಂದ ಲಂಡನ್‍ಗೆ ಬಂದಿಳಿದಿರುವ ರಾಹುಲ್ ಗಾಂಧಿ ಅವರು ಗಡ್ಡ ಬೋಳಿಸಿ ಟ್ರಿಮ್ ಆಗಿರುವುದು ಕಂಡು ಬಂದಿದೆ.
ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್‍ನ ವಿಸಿಟಿಂಗ್ ಫೆಲೋ ಆಗಿರುವ ರಾಹುಲ್ ಗಾಂಧಿ ಅವರು 21ನೇ ಶತಮಾನದಲ್ಲಿ ಕೇಳಲು ಕಲಿಯುವುದು ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ನಾಳೆ 3 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ, ಬಿಗಿ ಬಂದೋಬಸ್ತ್
ಕತ್ತರಿಸಿದ ಕೂದಲು ಮತ್ತು ಗಡ್ಡವನ್ನು ಹೊಂದಿರುವ ಕಾಂಗ್ರೆಸ್ ಸಂಸದರ ಚಿತ್ರಗಳನ್ನು ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ,ಕೇಂಬ್ರಿಡ್ಜ್‍ನಲ್ಲಿ, ರಾಹುಲ್ ಗಾಂಧಿ ಅವರು ವಿಶ್ವವಿದ್ಯಾನಿಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜ್ ಮತ್ತು ಕಂಪನಿಯಲ್ಲಿ ಭಾರತೀಯ ಮೂಲದ ಫೆಲೋ, ಟ್ಯೂಟರ್ ಮತ್ತು ಅಧ್ಯಯನದ ನಿರ್ದೇಶಕರಾದ ಪ್ರೋಫೆಸರ್ ಶ್ರುತಿ ಕಪಿಲಾ ಅವರೊಂದಿಗೆ ಬಿಗ್ ಡೇಟಾ ಮತ್ತು ಡೆಮಾಕ್ರಸಿ ಮತ್ತು ಭಾರತ-ಚೀನಾ ಸಂಬಂಧಗಳು ಕುರಿತು ಮುಚ್ಚಿದ ಬಾಗಿಲಿನ ಅವೇಶನಗಳನ್ನು ನಡೆಸಲು ಯೋಜಿಸಿದ್ದಾರೆ.
ನಮ್ಮ ಈ ಕಾರ್ಯಕ್ರಮಕ್ಕೆ ಭಾರತದ ಪ್ರಮುಖ ವಿರೋಧ ಪಕ್ಷದ ನಾಯಕ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಸಂಸದ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಸಂತೋಷವಾಗಿದೆ ಎಂದು ಕೇಂಬ್ರಿಡ್ಜ್ ವಿವಿ ಟ್ವಿಟ್ ಮಾಡಿದೆ.
ಭೌಗೋಳಿಕ ರಾಜಕೀಯ, ಅಂತರರಾಷ್ಟ್ರೀಯ ಸಂಬಂಧಗಳು, ದೊಡ್ಡ ಡೇಟಾ ಮತ್ತು ಪ್ರಜಾಪ್ರಭುತ್ವ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲವು ಪ್ರಕಾಶಮಾನವಾದ ಮನಸ್ಸುಗಳೊಂದಿಗೆ ತೊಡಗಿಸಿಕೊಳ್ಳಲು ಹಾಗೂ ಕೇಂಬ್ರಿಡ್ಜ್ ವಿವಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಉತ್ಸುಕನಾಗಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.
#Haircut, #TrimmedBeard, #RahulGandhi, #NewLook, #CambridgeLecture,