ಚಿಕ್ಕಮಗಳೂರು, ಜು.20- ರೌಡಿ ಹಂದಿ ಅಣ್ಣಿ ಹತ್ಯೆ ಪ್ರಕರಣದ 8 ಮಂದಿ ಶಂಕಿತ ಆರೋಪಿಗಳು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಕಚೇರಿಗೆ ಬಂದು ಶರಣಾಗಿದ್ದಾರೆ.
ಶಿವಮೊಗ್ಗದ ವಿನೋಬಾ ನಗರದ ಕಾರ್ತಿಕ್ ಆಲಿಯಾಸ್ ಕಡಾ ಕಾರ್ತಿಕ್ (33), ಫಾರೂಕ್ (40), ಹರಿಹರ ತಾಲೂಕು ಮಲೆಬೆನ್ನೂರಿನ ಆಂಜನೇಯ ಅಲಿಯಾಸ್ ಅಂಜನಿ (26), ಮಧು (27), ಮಧುಸೂದನ್ ಅಲಿಯಾಸ್ ಕರಿಯ (32), ಚೌಡೇಶ್ವರಿ ಕಾಲೋನಿಯ ಮದನ್ (25), ಕಡೂರಿನ ನಿತಿನ್ ಅಲಿಯಾಸ್ ಭಜರಂಗಿ ಭಾಯಿ (29), ಹುಳ ಗಟ್ಟಿಯ ಚಂದನ್ (22) ಶರಣದವರು.
ಘಟನೆ ವಿವರ: ಜುಲೈ 14ರಂದು ಶಿವಮೊಗ್ಗದಲ್ಲಿ ರೌಡಿ ಹಂದಿ ಹಣ್ಣಿ ಹತ್ಯೆಯಾಗಿತ್ತು. ಈ ಸಂಬಂಧ ವಿನೋಬಾ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಶಿವಮೊಗ್ಗ ಪೋಲಿಸರು ಬಲೆ ಬೀಸಿದ್ದರು.
ರಾಜ್ಯದ ಹಲವಡೆ ತಿರುಗಿ ಚಿಕ್ಕಮಗಳೂರಿಗೆ ಬಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸುವೆ. ಎಂಟು ಆರೋಪಿಗಳನ್ನು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿ ನಂತರ ಶಿವಮೊಗ್ಗದ ವಿನೋಬಾ ನಗರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.