ದೇಶದ 20 ಕೋಟಿಗೂ ಅಧಿಕ ಮನೆಗಳ ಮೇಲೆ ಹಾರಾಡಲಿವೆ ತ್ರಿವರ್ಣ ಧ್ವಜಗಳು

Social Share

ನವದೆಹಲಿ,ಆ.13- ಆಜಾದಿ ಕ ಅಮೃತ ಮಹೋತ್ಸವದ ಅಂಗವಾಗಿ ಇಂದಿನಿಂದ ದೇಶದ 20 ಕೋಟಿಗೂ ಅಧಿಕ ಮನೆಗಳ ಮೇಲೆ ತ್ರಿವರ್ಣ ಧ್ವಜಗಳು ರಾರಾಜಿಸಿವೆ.ಕಳೆದ ತಿಂಗಳು ಮನ್-ಕಿ-ಬಾತ್ ಜನಪ್ರಿಯ ರೇಡಿಯೋ ಸರಣಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನೇಂದ್ರ ಮೋದಿ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿತು.

ಅದರಲ್ಲಿ ಆ.2ರಿಂದ 15ರವರೆಗೆ ಸಾಮಾಜಿಕ ಮಾಧ್ಯಮಗಳ ಪ್ರೋಫೈಲ್ ಪಿಚ್ಚರ್‍ನಲ್ಲಿ ತ್ರಿವರ್ಣ ಧ್ವಜ ಅಳವಡಿಸಿಕೊಳ್ಳುವುದು, ಆ.13ರಿಂದ 15ವರೆಗೆ ಹರ್ ಘರ್ ತಿರಂಗಾ ಅಭಿಯಾನವನ್ನು ಆಚರಿಸಲು ಕರೆ ನೀಡಿದ್ದರು.ಇದರ ಪ್ರಯುಕ್ತ ಈಗಾಗಲೇ ಕೇಂದ್ರ ಸರ್ಕಾರವೇ ಲಭ್ಯ ಇರುವ ಕಡೆಗಳಲ್ಲಿ ರಾಷ್ಟ್ರ ಧ್ವಜಗಳನ್ನು ಕ್ರೂಢೀಕರಿಸಿ ಪೋಸ್ಟ್ ಆಫೀಸ್, ಮಾಲ್‍ಗಳು ಹಾಗೂ ಇತರೆ ಕಡೆಗಳಲ್ಲಿ ಸಾರ್ವಜನಿಕರಿಗೆ ರಿಯಾಯ್ತಿ ದರದಲ್ಲಿ ಧ್ವಜ ಹಂಚಿಕೆ ಮಾಡುತ್ತಿದೆ.

ಪ್ರತಿ ರಾಜ್ಯ ಸರ್ಕಾರಗಳು ಹರ್ ಘರ್ ತಿರಂಗಾ ಅಭಿಯಾನಕ್ಕಾಗಿ ವಿಶೇಷ ತಯಾರಿಗಳನ್ನು ನಡೆಸಿವೆ. ಸರ್ಕಾರ, ಖಾಸಗಿ, ಕಾಪೆರ್Çರೇಟ್ ಕಚೇರಿಗಳು, ಬಸ್ , ರೈಲ್ವೆ ಹಾಗೂ ವಿಮಾನ ನಿಲ್ದಾಣ, ನಿಗಮ ಮಂಡಳಿ ಕಚೇರಿಗಳು, ಸಂಘ-ಸಂಸ್ಥೆಗಳ ಕಚೇರಿಗಳ ಮೇಲೆ ಇಂದಿನಿಂದ ತಿರಂಗ ಹಾರಾಡಿದೆ.ಕೇಂದ್ರ,ರಾಜ್ಯ ಹಾಗೂ ಅರೆ ಸರ್ಕಾರಿ ನೌಕರರು, ಜನಪ್ರತಿನಿಗಳು ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜಾರೋಹಣ ನೆರವೇರಿಸುವಂತೆಯೂ ಕರೆ ನೀಡಲಾಗಿದೆ.

ತಿರಂಗಗಳ ಹಂಚಿಕೆಗಾಗಿ ಜಿಲ್ಲಾಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಆಯಾ ದಿನ ಸಂಗ್ರಹವಾದ ಧ್ವಜ ಮಾರಾಟದ ಹಣವನ್ನು ನಿಗದಿತ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆಯೂ ಸೂಚಿಸಲಾಗಿದೆ.ರಾಜಕೀಯ ಪಕ್ಷಗಳ ಕಾರ್ಯಕರ್ತರು ಮನೆ ಮನೆಗೆ ಧ್ವಜ ಹಂಚಿಕೆ ಮಾಡಿದ್ದಾರೆ. ಹರ್ ಘರ್ ತಿರಂಗಾ ಅಭಿಯಾನದ ಮೂಲಕ ರಾಷ್ಟ್ರ ಪ್ರೇಮವನ್ನು ಉದ್ವಿಪ್ನಗೊಳಿಸುವುದು, ತ್ರಿವರ್ಣ ಧ್ವಜದ ಮೇಲಿನ ಗೌರವವನ್ನು ಹೆಚ್ಚಿಸುವುದು ಮೂಲ ಉದ್ದೇಶವಾಗಿದೆ.

ಹೀಗಾಗಿ ಎಲ್ಲೆಡೆ ರಾಷ್ಟ್ರಧ್ವಜಗಳು ಹಾರಾಡುತ್ತಿದ್ದು, ಮೇಲ್ಭಾಗದಿಂದ ನೋಡುಗರಿಗೆ ದೃಶ್ಯ ಮನೋಹರವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನದ ವಿಭಿನ್ನ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಕೆಲವರು ನದಿಯ ನೀರಿನಲ್ಲಿ ಸಾಲುಗಟ್ಟಿ ನಿಂತು ತಿರಂಗವನ್ನು ಹಾರಿಸಿದರೆ, ಇನ್ನು ಕೆಲವರು ಬೃಹತ್ ವಿಸ್ತೀರ್ಣದ ತ್ರಿವರ್ಣ ಧ್ವಜವನ್ನು ನಿರ್ಮಿಸಿ ಪ್ರದರ್ಶಿಸಿದ್ದಾರೆ.ಹಲವಾರು ಕಡೆಗಳಲ್ಲಿ ಬೃಹತ್ ಧ್ವಜ ತಯಾರಿಕೆಯ ದಾಖಲೆಗಳನ್ನು ನಿರ್ಮಿಸುವ ಪ್ರಯತ್ನಗಳು ನಡೆದಿವೆ.

ಕಳೆದ ವಾರದಿಂದಲೂ ನಿರಂತರ ಬೈಕ್ ರ್ಯಾಲಿ, ಕಾಲ್ನಡಿಗೆ ಜಾಥಾ, ಧ್ವಜ ಮೆರವಣಿಗೆಗಳು ನಡೆಯುತ್ತಲೇ ಇವೆ. ಬಿಜೆಪಿ ನಾಯಕರು ಧ್ವಜೋತ್ಸವದ ನೇತೃತ್ವ ವಹಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸಿಗರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ. ಪಾದಯಾತ್ರೆ ನಡೆಸಿದ್ದಾರೆ.

ಆ.15ರಂದು ಎಲ್ಲಾ ರಾಜ್ಯಗಳ ರಾಜಧಾನಿ ಕೇಂದ್ರಗಳಲ್ಲಿ ಲಕ್ಷಾಂತರ ಜನ ಸಮಾವೇಶಗೊಳ್ಳುವ ಸ್ವಾತಂತ್ರ್ಯ ನಡಿಗೆ ಆಯೋಜಿಸಲಾಗಿದೆ. ಪಕ್ಷಾತೀತವಾಗಿ ನಡೆಯುತ್ತಿರುವ ಸ್ವಾತಂತ್ರ್ಯ ಸಂಭ್ರಮ ಇತಿಹಾಸದಲ್ಲೇ ಕಂಡರಿಯದ ದೇಶಭಕ್ತಿಯ ಮೇಳೈಸುವಿಕೆಯನ್ನು ಎತ್ತಿ ಹಿಡಿಯುತ್ತಿದೆ.

Articles You Might Like

Share This Article