ಬೆಂಗಳೂರು, ಜು.25- ಸ್ವಾತಂತ್ರ್ಯ ಅಮೃತ ಮಹೋತ್ಸ ವದ ಅಂಗವಾಗಿ ಆಗಸ್ಟ್ 11 ರಿಂದ 17ರವರೆಗೆ ದೇಶದ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಿ ಹರ್ ಘರ್ ತಿರಂಗ ಎಂಬ ಘೋಷವಾಕ್ಯದಡಿ ದೇಶಭಕ್ತಿ ಬಿಂಬಿಸಲು ನಡೆಯುವ ಅಭಿಯಾನದಲ್ಲಿ ಬೆಂಗಳೂರಿನಲ್ಲಿ ಧ್ವಜಗಳನ್ನು ಹಾರಿಸಲು ವಲಯವಾರು ಹಂಚಿಕೆ ಮಾಡಲಾಗಿದೆ.
ಈ ಸಂಬಂಧ ಕನ್ನಡ ಮತ್ತು ಸಂಸ್ಖತಿ ಇಲಾಖೆಯ ನಿರ್ದೇಶಕರು ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಉನ್ನತ ಮಟ್ಟದ ಸಮಿತಿ ಎರಡು ಲಕ್ಷ ಧ್ವಜಗಳನ್ನು ಬೆಂಗಳೂರು ಮಹಾ ನಗರ ಪಾಲಿಕೆಗೆ ವಿತರಿಸಿದ್ದು, ಅವುಗಳನ್ನು ವಲಯವಾರು ಹಂಚಿಕೆ ಮಾಡಲಾಗಿದೆ.
ಪೂರ್ವ ವಲಯ-42,000, ಪಶ್ಚಿಮ ವಲಯ- 36,000, ದಕ್ಷಿಣ ವಲಯ-40000, ಮಹದೇವಪುರ – 20000, ಬೊಮ್ಮನಹಳ್ಳಿ – 22000, ಯಲಹಂಕ ವಲಯ-14000, ರಾಜರಾಜೇಶ್ವರಿ ನಗರ- 16,000, ದಾಸರ ಹಳ್ಳಿ-10,000 ಒಟ್ಟು 2ಲಕ್ಷ ಧ್ವಜಗಳನ್ನು ಆಯಾ ವಲಯವಾರು ಕಾರ್ಯಪಾಲಕ ಅಭಿಯಂತರರು ಧ್ವಜ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದು ಮತ್ತು ಈ ಕಾರ್ಯಕ್ರಮದ ಸಂಪೂರ್ಣ ಮೇಲುಸ್ತುವಾರಿ ಕಾರ್ಯ ನಿರ್ವಹಿಸಲು ಸಾರ್ವಜನಿಕ ಸಂಪರ್ಕಾಕಾರಿಗೆ ವಹಿಸಲಾಗಿದೆ ಎಂಧು ಬೆಂಗಳೂರು ಮಹಾ ನಗರ ಪಾಲಿಕೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.