ಕಿಂಗ್‍ಸ್ಟನ್,ಜ. 14- ಬಲಿಷ್ಠ ತಂಡಗಳನ್ನು ಸೋಲಿಸುವ ಮೂಲಕ ಅಚ್ಚರಿ ಫಲಿತಾಂಶ ನೀಡುವ ಐರ್ಲೆಂಡ್ ತಂಡವು ಇಂದಿಲ್ಲಿ ನಡೆದ 2ನೆ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್‍ಗಳ ಮೂಲಕ ಸೋಲಿಸುವ ಮೂಲಕ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದ್ದಾರೆ.
3 ಪಂದ್ಯಗಳ ಸರಣಿಯ 2ನೆ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿರಾನ್ ಪೆÇೀಲಾರ್ಡ್ ನಾಯಕತ್ವದ ವೆಸ್ಟ್‍ಇಂಡೀಸ್ ತಂಡವು ಸಮರ್‍ಬ್ರೂಕ್ಸ್‍ರ (43ರನ್, 5 ಬೌಂಡರಿ), ಬಾಲಂಗೋಚಿಗಳಾದ ರೋಮರಿಯೊ ಶೆಪೆರ್ಡ್ (50 ರನ್, 7 ಬೌಂಡರಿ) ಹಾಗೂ ಒಡೆನ್ ಸ್ಮಿತ್(46 ರನ್, 2 ಬೌಂಡರಿ 5 ಸಿಕ್ಸರ್)ಗಳ ನೆರವಿನಿಂದ 229 ರನ್‍ಗಳಿಗೆ ಅಲೌಟ್ ಆಯಿತು.ಐರ್ಲೆಂಡ್ ಪರ ಆ್ಯಂಡಿಮೆಕ್‍ಬ್ರೆನ್ 4, ಕ್ರೆಗ್ ಯಂಗ್ 3, ಜೋಶ್ ಲಿಟ್ಲೆ 2 ವಿಕೆಟ್ ಕಬಳಿಸುವ ಮೂಲಕ ವಿಂಡೀಸ್‍ನ ಬ್ಯಾಟಿಂಗ್ ಬಲ ಕುಗ್ಗಿಸಿದರು.
ನಂತರ ಡಕ್‍ವರ್ತ್ ಲೂಯಿಸ್ ನಿಯಮದಡಿಯಲ್ಲಿ ಗೆಲ್ಲಲು 168 ರನ್‍ಗಳ ಗುರಿ ಪಡೆದ ಐರ್ಲೆಂಡ್ ಹ್ಯಾರಿ ಟೆಕ್ಟರ್(54 ರನ್, 4 ಬೌಂಡರಿ, 1 ಸಿಕ್ಸರ್) ನೆರವಿನಿಂದ 32.3 ಓವರ್‍ಗಳಲ್ಲೇ 5 ವಿಕೆಟ್‍ಗಳನ್ನು ಕಳೆದುಕೊಂಡು 168 ರನ್ ಗಳಿಸಿ ಗೆಲುವಿನ ನಗೆ ಬೀರಿತು.
36 ರನ್ ನೀಡಿ 4 ವಿಕೆಟ್ ಕಬಳಿಸಿದ್ದಲ್ಲದೆ 45 ಎಸೆತಗಳಲ್ಲಿ 35 ರನ್ ಗಳಿಸಿದ ಆ್ಯಂಡಿ ಮೆಕ್‍ಬ್ರೆನ್ ಪಂದ್ಯ ಪುರುಷೋತ್ತಮರಾದರು, ಅಂತಿಮ ಪಂದ್ಯವು ಭಾನುವಾರ ಕಿಂಗ್‍ಸ್ಟನ್‍ನಲ್ಲಿ ನಡೆಯಲಿದೆ.
