ಬಿಜೆಪಿಗೆ ಸೇರ್ಪಡೆಯಾದ ಆರೇ ಗಂಟೆಯಲ್ಲಿ ದೆಹಲಿಯ ಮಾಜಿ ಸಚಿವ ಸಂದೀಪ್‌ ಕುಮಾರ್‌ ಕಿಕ್‌ಔಟ್‌

ನವದೆಹಲಿ,ಆ.12- ಪಕ್ಷಕ್ಕೆ ಸೇರ್ಪಡೆಯಾದ ಕೇವಲ ಆರು ಗಂಟೆಗಳಲ್ಲಿ ದೆಹಲಿಯ ಮಾಜಿ ಸಚಿವ ಸಂದೀಪ್‌ ಕುಮಾರ್‌ನನ್ನು ಹರಿಯಾಣದ ಬಿಜೆಪಿ ಘಟಕದಿಂದ ಉಚ್ಛಾಟನೆ ಮಾಡಲಾಗಿದೆ. ಎಎಪಿ ನಾಯಕ ಮತ್ತು ಸಚಿವರಾಗಿದ್ದ ಸಂದೀಪ್‌ ಕುಮಾರ್‌ ತಮ್ಮ ವಿರುದ್ಧ ಇರುವ ಹಗರಣದ ಆರೋಪವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ. ಅದು ಈಗ ಬಯಲಾಗಿದೆ. ಹೀಗಾಗಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಎಂದು ಹರಿಯಾಣ ಬಿಜೆಪಿ ಉಸ್ತುವಾರಿ ಸುರೇಂದ್ರ ಪುನಿಯಾ ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ. ಹಲವಾರು ವಿವಾದಗಳಿಗೆ ಸಿಲುಕಿದ್ದ ಕುಮಾರ್‌ಅವರನ್ನು ಆಗಸ್ಟ್‌ 31, 2016 ರಂದು ದೆಹಲಿ ಸಚಿವ ಸಂಪುಟದಿಂದ ತೆಗೆದುಹಾಕಲಾಯಿತು. ಅಮಲು ಪದಾರ್ಥ ನೀಡಿ ತಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಅದನ್ನು ಚಿತ್ರೀಕರಿಸಿದ್ದಾರೆ ಎಂದು ಮಹಿಳೆಯೊಬ್ಬರು ಕುಮಾರ್‌ ವಿರುದ್ಧ ಆರೋಪ ಮಾಡಿದ್ದರು. ಇದಾದ ಬಳಿಕ ಆತ ಮಹಿಳೆಯ ಜೊತೆ ಕೇಸ್‌‍ ವಾಪಾಸ್‌‍ ಪಡೆಯುವಂತೆ ಸಂಧಾನ ಮಾಡುತ್ತಿರುವ ಕುಮಾರ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದಾದ ಬಳಿಕ 2016 ರ ಸೆಪ್ಟೆಂಬರ್‌ 3 ರಂದು ದೆಹಲಿ ಪೊಲೀಸರು … Continue reading ಬಿಜೆಪಿಗೆ ಸೇರ್ಪಡೆಯಾದ ಆರೇ ಗಂಟೆಯಲ್ಲಿ ದೆಹಲಿಯ ಮಾಜಿ ಸಚಿವ ಸಂದೀಪ್‌ ಕುಮಾರ್‌ ಕಿಕ್‌ಔಟ್‌