ಲೈಂಗಿಕ ಕಿರುಕುಳ: ಹರ್ಯಾಣದ ಸಚಿವ ಸಂದೀಪ್ ಸಿಂಗ್ ವಿರುದ್ಧ ಕ್ರಿಮಿನಲ್ ಕೇಸ್

Social Share

ಚಂಡಿಘಡ್, ಜ.1- ಮಹಿಳಾ ತರಬೇತುದಾರರ ಜೊತೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ಹರ್ಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

36 ವರ್ಷದ ಸಂದೀಪ್ ಸಿಂಗ್ ಭಾರತೀಯ ಹಾಕಿ ತಂಡದ ಮಾಜಿ ನಾಯಕರಾಗಿದ್ದು, ಕುರುಕ್ಷೇತ್ರದ ಪೆಹೋವಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ, ಸಚಿವರಾಗಿದ್ದಾರೆ. ಅವರ ವಿರುದ್ಧ ಈಗ ಚಂಡಿಘಡದ ಸೆಕ್ಟರ್ 26ರ ಪೆÇಲೀಸ್ ಠಾಣೆಯಲ್ಲಿ ಸಚಿವರ ವಿರುದ್ಧ ಸೆಕ್ಷನ್ 354 (ಕ್ರಿಮಿನಲ್ ಉದ್ದೇಶದಿಂದ ಬಲವಂತವಾಗಿ ಮಹಿಳೆಯ ಗೌರವಕ್ಕೆ ಧಕ್ಕೆ ತರುವುದು, 354ಎ (ಲೈಂಗಿಕ ಕಿರುಕೂಳ), 354ಬಿ (ಮಹಿಳೆಯನ್ನು ಬೆತ್ತಲಾಗುವಂತೆ ಒತ್ತಾಯಿಸುವುದು), 342 (ತಪ್ಪು ಉದ್ದೇಶದಿಂದ ನಿರ್ಬಂಸುವುದು), 506 (ಕ್ರಿಮಿನಲ್ ಉದ್ದೇಶ) ಅಡಿ ಪ್ರಕರಣ ದಾಖಲಾಗಿದೆ.

ಜೂನಿಯರ್ ಅಥ್ಲೇಟಿಕ್ ತಂಡದ ಕೋಚ್ ಆಗಿರುವ ಮಹಿಳೆ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಾಗಿದೆ. ವಿಚಾರಣೆಯನ್ನೂ ಆರಂಭಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಮಹಿಳೆ, ಹಿರಿಯ ಪೊಲೀಸ್ ಮುಖ್ಯಾಧಿಕಾರಿಗೆ ನಾನು ದೂರು ನೀಡಿದ್ದೇನೆ. ಚಂಡಿಘಡ ಪೊಲೀಸರು ತನಿಖೆ ನಡೆಸಿದ ನನಗೆ ನ್ಯಾಯ ಕೊಡಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ನಿತೀಶ್ ಕುಮಾರ್ ಬಳಿ ಕೇವಲ 75.53 ಲಕ್ಷ ಮೌಲ್ಯದ ಆಸ್ತಿ

ಸಂದೀಪ್ ತಮ್ಮನ್ನು ಮೊದಲ ಬಾರಿ ಜಿಮ್‍ನಲ್ಲಿ ನೋಡಿದರು, ನಂತರ ಇನ್ಸ್‍ಟಾಗ್ರಾಮ್‍ನಲ್ಲಿ ಸಂಪರ್ಕಿಸಿ, ಮೆಸೇಜ್ ಮಾಡಿದರು. ಭೇಟಿಯಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರು. ದುರಾದೃಷ್ಟವಶಾತ್ ನನ್ನ ಪ್ರಮಾಣ ಪತ್ರಗಳು ಕಳೆದು ಹೋಗಿದ್ದವು. ಅವುಗಳನ್ನು ಸಂಬಂಧಿಸಿದ ಪ್ರಾಧಿಕಾರದಿಂದ ನಾನು ಪಡೆದುಕೊಳ್ಳಬೇಕಿತ್ತು. ಹೀಗಾಗಿ ಸಂದೀಪ್ ರನ್ನು ಭೇಟಿಯಾಗಲು ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

ನಾನು ನನ್ನ ಇತರ ಕೆಲ ದಾಖಲೆಗಳೊಂದಿಗೆ ಅವರ ಮನೆಯೊಂದಿಗಿರುವ ಕಚೇರಿಗೆ ಹೋಗಿದ್ದೆ. ಅಂದು ಸಚಿವರು ನನ್ನನ್ನು ಮನೆಯ ಪಕ್ಕದ ಕ್ಯಾಬಿನ್‍ಗೆ ಕರೆದುಕೊಂಡು ಹೋದರು. ನನ್ನ ದಾಖಲೆಗಳನ್ನು ತೆಗೆದು ಬದಿಗಿರಿಸಿದರು.

ಅವರ ಕೈನಿಂದ ನನ್ನ ಪಾದವನ್ನು ಹಿಡಿದುಕೊಂಡು, ನನ್ನನ್ನು ನೋಡಿದ ಮೊದಲ ಬಾರಿಯೇ ಇಷ್ಟ ಪಟ್ಟಿದ್ದಾಗಿ ತಿಳಿಸಿದರು. ನೀನು ನನ್ನನ್ನು ಸಂತೋಷ ಪಡಿಸು, ನಾನು ನಿನ್ನ ಸಂತೋಷ ಪಡಿಸುತ್ತೇನೆ ಎಂದು ಹೇಳಿದರು.

ನಾನು ಅವರ ಕೈ ಅನ್ನು ತೆಗೆದು ಹಾಕಿದೆ. ಅವರು ನನ್ನ ಟಿ-ಶರ್ಟ್ ಅನ್ನು ಹರಿದು ಹಾಕಿದರು. ನಾನು ಅಳುತ್ತಾ, ಸಹಾಯಕ್ಕಾಗಿ ಕೂಗಿಕೊಂಡೆ. ಆದರೆ ಅವರ ಸಿಬ್ಬಂದಿಗಳ ಪೈಕಿ ಯಾರು ನನ್ನ ನೆರವಿಗೆ ಬರಲಿಲ್ಲ ಎಂದು ಮಹಿಳಾ ಕೋಚ್ ಆರೋಪಿಸಿದ್ದಾರೆ.

ಈ ಆರೋಪಗಳನ್ನು ಸಚಿವ ಸಂದೀಪ್ ತಳ್ಳಿ ಹಾಕಿದ್ದಾರೆ. ಇದು ಆಧಾರ ರಹಿತ ದೂರಾಗಿದೆ. ಸ್ವತಂತ್ರವಾದ ತನಿಖೆ ನಡೆಯಬೇಕು. ನನ್ನ ವರ್ಚಸ್ಸನ್ನು ನಾಶ ಮಾಡಲು ಯತ್ನಿಸಲಾಗುತ್ತಿದೆ. ಮಹಿಳೆಯ ಜೀವನ ಹಿನ್ನೆಲೆ ಸೇರಿದಂತೆ ವಿಸ್ತೃತವಾದ ತನಿಖೆ ನಡೆಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

ಮುಕ್ತಿ ಪಡೆಯುವುದೇ ಮಾನವ ಜೀವನದ ಉದ್ದೇಶ : ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಘಟನೆ ರಾಜಕೀಯ ಕೆಸರೆಚಾಟಕ್ಕೂ ಕಾರಣವಾಗಿದೆ. ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ. ರಾಷ್ಟ್ರೀಯ ಲೋಕದಳದ ನಾಯಕ ಮನೋಹರ್ ಲಾಲ್ ಕಟ್ಟರ್ ಮಾತನಾಡಿ, ಸಚಿವ ಸಂದೀಪ್‍ಸಿಂಗ್‍ರನ್ನು ಕೂಡಲೇ ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿದ್ದಾರೆ.

Haryana, Sports, Minister, faces, rape, attempt, Sandeep Singh

Articles You Might Like

Share This Article