ಹಾಸನ,ಫೆ.8- ಜೆಡಿಎಸ್ ಟಿಕೆಟ್ ಗೊಂದಲದ ನಡುವೆ ಹಾಸನ ವಿಧಾನಸಭಾ ಕ್ಷೇತ್ರದಾದ್ಯಂತ ಎಚ್.ಪಿ.ಸ್ವರೂಪ ಪ್ರಕಾಶ್ ಬಿರುಸಿನ ಸಂಚಾರ ನಡೆಸುತ್ತಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಪ್ರಮುಖ ಆಕಾಂಕ್ಷಿಯಾಗಿರುವ ಸ್ವರೂಪ ಅವರು ನಗರ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ.
ಹಾಸನ ನಗರ ವ್ಯಾಪ್ತಿಯ ಗುಂಡೇಗೌಡನ ಕೊಪ್ಪಲು, ಭಟ್ಲರ್ ಕೊಪ್ಪಲಿನಲ್ಲಿ ಮತದಾರರ ಬೇಟೆಗೆ ಮುಂದಾಗಿರುವ ಸ್ವರೂಪ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.
ಸ್ವರೂಪ್ ಪ್ರಕಾಶ್ ಅವರು ಹಾಸನ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ನಡೆಯುವ ಪ್ರತಿಯೊಂದು ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದು ಕಳೆದ ನಾಲ್ಕೈದು ತಿಂಗಳಿಂದ ಇದೆ ಅವರ ದಿನಚರಿಯಾಗಿದೆ ಓದಲ್ಲೆಲ್ಲ ಜೆಡಿಎಸ್ ಪರ ಮತಯಾಚನೆ ಮಾಡುತ್ತಿರುವ ಅವರು ವೈಯಕ್ತಿಕವಾಗಿ ಮತಯಾಚನೆ ಮಾಡುತ್ತಿಲ್ಲ ಹಾಗೂ ಟಿಕೆಟ್ ಘೋಷಣೆಯಾದ ನಂತರ ವೈಯಕ್ತಿಕ ಮತಯಾಚನೆಗೆ ಮುಂದಾಗಲಿದ್ದಾರೆ ಎನ್ನಲಾಗಿದೆ.
ರಾಹುಲ್‍ಗಾಂಧಿ ವಿರುದ್ಧ ಕ್ರಮಕ್ಕೆ ಬಿಜೆಪಿ ಸಂಸದ ಆಗ್ರಹ
ಮತ್ತೊಂದೆಡೆ ಸೈಲೆಂಟ್ ಆಗಿರುವ ಭವಾನಿ ರೇವಣ್ಣ ಹಾಸನ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು ಕೆಲ ದಿನದಿಂದ ಕ್ಷೇತ್ರದಲ್ಲಿ ಕಾಣಿಸುತ್ತಿಲ್ಲ. ಹಾಸನ ವಿಧಾನಸಭಾ ಕ್ಷೇತ್ರಗಳ ಪ್ರಮುಖ ಗ್ರಾಮಗಳಿಗೆ ತೆರಳಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ಭವಾನಿ ರೇವಣ್ಣ ಅವರಿಗೆ ಮಕ್ಕಳಾದ ಸೂರಜ್ ಹಾಗೂ ಪ್ರಜ್ವಲ್ ಸಾಥ್ ನೀಡುತ್ತಿದ್ದರು.
ನಂತರ ನಡೆದ ವಿದ್ಯಮಾನಗಳ ಹಿನ್ನೆಲೆಯಲ್ಲಿ ರೇವಣ್ಣ ಕುಟುಂಬ ಮËನವಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಸಂಸದ ಪ್ರಜ್ವಲ್ ರೇವಣ್ಣ ಅವರ ನಿವಾಸದ ಎದುರು ಮಹಿಳಾ ಕಾರ್ಯಕರ್ತರು ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಪ್ರತಿಭಟನೆ ನಡೆಸಿದ ನಂತರ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರು ಭಾವುಕರಾಗಿ ಮಾತನಾಡಿದ ಬಳಿತ ಭವಾನಿ ರೇವಣ್ಣ ಅವರು ಹಾಗೂ ಶಾಸಕ ರೇವಣ್ಣ ಮಾಧ್ಯಮಗಳಿಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮಾತನಾಡದಿರುವುದು ಆಚ್ಚರಿ ಮೂಡಿಸಿದೆ.
ಕೆಸಿಆರ್ ಪುತ್ರಿ ಕವಿತಾ ಪರಿಚಯಸ್ಥನ ಬಂಧನ
ಜನವರಿ29ರಂದು ಪತ್ರಿಕಾಗೋಷ್ಠಿ ನಡೆಸಿ ಟಿಕೆಟ್ ಫೈಟ್‍ಗೆ ತಾತ್ಕಾಲಿಕ ವಿರಾಮ ಘೋಷಿಸಿದ್ದ ಮಾಜಿ ಸಚಿವ ರೇವಣ್ಣ ಸಹ ಅಂದಿನಿಂದಲೂ ಮೌನಕ್ಕಿ ಶರಣಾಗಿದ್ದಾರೆ ಮತ್ತು ಅಂದಿನಿಂದಲೂ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಭವಾನಿ ರೇವಣ್ಣ ಬಾರದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
Hassan, assembly constituency, JDS, Bhavani Revanna, Swaroop,