ಹಾಸನದಿಂದ ಟಿಕೆಟ್ ಕೊಟ್ಟರೆ ನಾನೇ ಕಣಕ್ಕಿಳಿಯುತ್ತೇನೆ : ರೇವಣ್ಣ

Social Share

ಹಾಸನ,ಫೆ.10- ಕ್ಷೇತ್ರಕ್ಕೆ ಈಗಾಗಲೇ ನನ್ನನ್ನು ಪಂಥಹ್ವಾನ ಮಾಡಿದ್ದು, ಐವತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ಬಗ್ಗೆ ಸವಾಲು ಹಾಕಿದ್ದಾರೆ. ಪಕ್ಷದ ತೀರ್ಮಾನದಂತೆ ಎಲ್ಲಿ ನಿಲ್ಲಿಸಿದರು ನಿಲ್ಲಲು ರೆಡಿಯಾಗಿದ್ದೇನೆ. ಟಿಕೆಟ್ ಕೊಟ್ಟರೆ ನಿಲ್ಲುವೆ ಇಲ್ಲ ಸಾಮಾನ್ಯ ಕಾರ್ಯಕರ್ತನಾಗಿ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ಕೆಲಸ ಮಾಡುವೆ. ಜಿಲ್ಲೆಯಲ್ಲಿ ಏಳಕ್ಕೆ 7 ಕ್ಷೇತ್ರ ಗೆಲ್ಲುವುದೇ ನಮ್ಮ ಗುರಿ ನಮ್ಮ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಕಲಗೂಡು, ಹಾಸನ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಮಾಜಿ ಸಚಿವ ಎ.ಮಂಜು ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಲ್ಲ. ಬದಲಿಗೆ ಪಕ್ಷಕ್ಕೆ ಸೇರಲಿದ್ದಾರೆ ಎಂದು ಅಷ್ಟೇ ಹೇಳಿದ್ದಾರೆ. ಈಗಾಗಲೇ ಅರಕಲಗೂಡು ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಆಯ್ಕೆ ಸಂಬಂಧ 15 ಜನರ ಕಮಿಟಿಯನ್ನು ರಚಿಸಿದ್ದು, ಕ್ಷೇತ್ರದ ಮುಖಂಡರು ಹಾಗೂ ರಾಜ್ಯ ನಾಯಕರು ಕೋತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

BIG NEWS : ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆ

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಕೆಲ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‍ನ ಮುಖಂಡರೊಬ್ಬರು ಎರಡು ವರ್ಷದಿಂದ ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ.

ಜೆಡಿಎಸ್ ಪಕ್ಷ ತೊರೆದು ಹೋಗಿರುವವರಿಗೆ ಭಗವಂತ ಒಳ್ಳೆಯದು ಮಾಡಲಿ 60 ವರ್ಷದ ಹಳೆಯ(ಕಾಂಗ್ರೆಸ್) ಬಸ್ಸನ್ನು ರಿಪೇರಿ ಮಾಡಿಕೊಂಡು ಬಂದಿದ್ದಾರೆ. ಆ ಬಸ್ಸನ್ನು ಹತ್ತುವ ಜನರನ್ನು ಹುಡುಕುತ್ತಿದ್ದು ವಲಸೆ ಹೋದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥನೆ ಮಾಡುವುದಾಗಿ ಮಾರ್ಮಿಕವಾಗಿ ನುಡಿದರು.

ಜೆಡಿಎಸ್ ವರಿಷ್ಠ ಕುಮಾರಣ್ಣ ಅವರೇ ನಮ್ಮ ನಾಯಕ ಎಂದು ಹೇಳಿದ ಅವರು, ಕುಮಾರಸ್ವಾಮಿ ಹಾಗೂ ನಾನು ಹೊಡೆದಾಡುತ್ತೇವೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಅಂದುಕೊಂಡಿದ್ದರೆ ಅವರಿಗೆ ಭ್ರಮನಿರಸನವಾಗಲಿದೆ.

ಕುಮಾರಸ್ವಾಮಿ ಅವರು ಆರೋಗ್ಯವನ್ನು ಲೆಕ್ಕಿಸದೆ 68 ದಿನದಿಂದ ಪಂಚರತ್ನ ಯಾತ್ರೆಯಲ್ಲಿ ಓಡಾಡುತ್ತಿದ್ದು, 68 ತಾಲೂಕುಗಳಿಗೆ ಸಂಚಾರ ಮಾಡಿ ಪಕ್ಷ ಸಂಘಟಿಸಿದ್ದಾರೆ. ಕೊಟ್ಟ ಮಾತಿನಂತೆ ನಡೆದ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದು ಸಮರ್ಥಿಸಿಕೊಂಡರು.

ಎಲ್ಲಾ ಸಮಾಜಕ್ಕೂ ಅಕಾರ ನೀಡಿದಂತಹ ಪಕ್ಷ ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡರು ಎಲ್ಲ ಸಮಾಜದವರಿಗೂ ಅಕಾರ ನೀಡಿದ್ದು ಜಿಲ್ಲೆಯಲ್ಲಿ ಉದಾಹರಣೆಗಳು ಇವೆ ಎಂದರು.

ಹಳೆ ಪಿಂಚಣಿ ವ್ಯವಸ್ಥೆಯಿಂದ ಮುಂದಿನ ಪೀಳಿಗೆಯ ಭವಿಷ್ಯ ನಾಶ : ಮೋದಿ

ಮಾರ್ಚ್‍ನಲ್ಲಿ ಪಂಚರತ್ನ: ಮುಂದಿನ ಮಾರ್ಚ್ ಮೊದಲ ವಾರದಲ್ಲಿ ಹಾಸನದಲ್ಲಿ ಪಂಚ ರತ್ನ ಯಾತ್ರೆ ಬರಲಿದ್ದು, ನಾನು ಸೇರಿದಂತೆ ಪಕ್ಷದ ಜಿಲ್ಲೆಯ ಮುಖಂಡರು ಈ ಸಂಬಂಧ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.

50 ಕೋಟಿ ಶೀಘ್ರ ಬಿಡುಗಡೆ ಒತ್ತಾಯ: ಕಳೆದ ಕೆಲ ತಿಂಗಳ ಹಿಂದೆ ಜಿಲ್ಲೆಯಲ್ಲಿ ಆದಂತಹ ಅತಿವೃಷ್ಟಿಗೆ 130 ಕೋಟಿ ಎಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಜಿಲ್ಲಾಡಳಿತದಿಂದ ವರದಿ ನೀಡಲಾಗಿದೆ. ಆದರೆ ಇದುವರೆಗೂ ಸಮರ್ಪಕವಾಗಿ ಹಣ ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಸರ್ಕಾರವನ್ನು ರೇವಣ್ಣ ದೂರಿದರು.

ಸರ್ಕಾರ ಹಾಸನ ಜಿಲ್ಲಾಯನ್ನು ಜೆಡಿಎಸ್ ಭದ್ರಕೋಟೆ ಎಂಬ ಭಾವನೆಯಿಂದ ಉದಾಸಿನ ಧೋರಣೆ ಅನುಸರಿಸಿದೆ. ಕನಿಷ್ಠ 50 ಕೋಟಿ ಹಣ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು . ಜಿಲ್ಲೆಯಲ್ಲಿ ಶಾಲೆ, ಅಂಗನವಾಡಿ, ರಸ್ತೆ , ಕೆರೆಕಟ್ಟೆ, ಹಾನಿ ಸಂಬಂಧ 130 ಕೋಟಿ ನಷ್ಟದ ವರದಿಯನ್ನು ಎನ್‍ಡಿಆರ್‍ಎಫ್, ಸಿಆರ್‍ಎಫ್ ನಿಯಮದಂತೆ ಸಲ್ಲಿಸಲಾಗಿದ್ದು ಈವರೆಗೂ ಸರ್ಕಾರ ಕೇವಲ ಮನೆ ಹಾನಿಗೆ 21 ಕೋಟಿ ರೂ ಹಣ ಬಿಡುಗಡೆ ಮಾಡಿದೆ ಎಂದು ದೂರಿದರು.

ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೂ ಪತ್ರ ಮುಖೇನ ತಿಳಿಸಲಾಗಿದ್ದು ಜಿಲ್ಲೆ ಪಂಚಾಯತಿಯಲ್ಲಿ 4. 70 ಕೋಟಿ ತಾಲೂಕು ಪಂಚಾಯಿತಿಯಲ್ಲಿ 9.50 ಕೋಟಿ ಹಣ ಬಿಡುಗಡೆ ಮಾಡಬೇಕಿದೆ ಎಂದರು.

ಕೊಬ್ಬರಿಗೆ 15 ಸಾವಿರ ಬೆಂಬಲಬೆಲೆ ನೀಡಲಿ…!: ಕೊಬ್ಬರಿ , ಭತ್ತ ಖರೀದಿ ಕೇಂದ್ರವನ್ನು ಕೂಡಲೇ ಆರಂಭಿಸಬೇಕು ಕೊಬ್ಬರಿಗೆ ಕನಿಷ್ಠ 15000 ಬೆಲೆ ನಿಗದಿ ಮಾಡಿ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್‍ ಕುರ್ಚಿಗಳು ಖಾಲಿ ಖಾಲಿ

ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಜಿಲ್ಲೆಯ ಕೆಲ ತಾಲೂಕಿನ ಸರ್ಕಾರಿ ಶಾಲೆಗಳ ಕಾಂಪೌಂಡಿಗೆ ಕೇಸರಿ ಬಣ್ಣ ಹಾಗೂ ಕಮಲದ ಗುರುತನ್ನು ಹಾಕುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದೆ.

ಈ ಸಂಬಂಧ ಚುನಾವಣಾ ಆಯುಕ್ತರಿಗೂ ರ್ದೂ ನೀಡಲಾಗುವುದು ಶಾಲೆ ಶಿಕ್ಷಕರು ಸಹ ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವ ಬಗ್ಗೆಯೂ ದೂರುಗಳು ಹರಿದಾಡುತ್ತೆ ಎಂದರು.

Hassan, constituency, JDS, HD Revanna,

Articles You Might Like

Share This Article