ಕಸ್ತೂರಿರಂಗನ್ ವರದಿ ವಿರೋಧಿಸಿ ಹಾಸನ-ಕೊಡಗು-ಚಿಕ್ಕಮಗಳೂರು ಬಂದ್

Social Share

ಚಿಕ್ಕಮಗಳೂರು,ಜು.19- ಕಸ್ತೂರಿರಂಗನ್ ವರದಿ ವಿರೋಧಿಸಿ ಇದೇ 27 ರಂದು ಹಾಸನ, 28 ರಂದು ಕೊಡಗು, 29 ರಂದು ಚಿಕ್ಕಮಗಳೂರು ಬಂದ್‌ ಮಾಡಿ ಸರ್ಕಾರದ ಗಮನ ಸೆಳೆಯಲು ವಿವಿಧ ಸಂಘಟನೆಗಳು ತೀರ್ಮಾನಿಸಿವೆ.

ನಗರದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಪ್ರತಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಕೇಂದ್ರ ಪರಿಸರ ಇಲಾಖೆಗೆ ಮನವಿ ಸಲ್ಲಿಸಬೇಕು. ಮೂರು ಜಿಲ್ಲಾಗಳ ಎಲ್ಲಾ ಶಾಸಕರು, ಸಂಸದರನ್ನು ಭೇಟಿಯಾಗಿ ಸಮಸ್ಯೆ ವಿವರಿಸಿ ಬೆಂಗಳೂರಿನಲ್ಲಿ ಸಭೆ ಆಯೋಜಿಸಬೇಕು.

ಮುಖ್ಯಮಂತ್ರಿ, ಕೇಂದ್ರ ಪರಿಸರ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ವರದಿಯ ಸಾಧಕ ಬಾದಕಗಳನ್ನು ಮನವರಿಕೆ ಮಾಡಿಕೊಡಲು ತೀರ್ಮಾನಿಸಲಾಯಿತು ಎಂದು ಮುಖಂಡ ಎಸ್. ವಿಜಯ್ ಕುಮಾರ್ ಪತ್ರಿಕೆಗೆ ತಿಳಿಸಿದರು.

ಮುಖಂಡರು ಮಾತನಾಡಿ ಈಗಾಗಲೇ ಜಿಲ್ಲಾಯಲ್ಲಿ ಡೀಮ್ಡ ಅರಣ್ಯಕ್ಕೆ ಸಂಬಂಧಿಸಿದಂತೆ ನಡೆದಿರುವ ಹೋರಾಟವನ್ನು ವಿವರಿಸಿ ಕಸ್ತೂರಿರಂಗನ್ ವರದಿ ಬೇಡ ಎನ್ನುವುದಕ್ಕಿಂತ ಏಕೆ ವಿರೋಧಿಸ ಲಾಗುತ್ತಿದೆ ಎಂಬುದರ ವಾಸ್ತವಿಕಾಂಶವನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದರು.

ಸಭೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ವಿವಿಧ ಸಂಘಟನೆಗಳು, ಬಾಳೂರು ಹೋಬಳಿ ಕಾಫಿ ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ, ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್. ಡಿ. ಮೋಹನ್ ಕುಮಾರ್, ಮುಳ್ಳಯ್ಯನಗಿರಿ ಸಂರಕ್ಷಣಾ ಹೋರಾಟ ಸಮಿತಿ ಮುಖಂಡ ರಘು, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ಯತೀಶ್, ತೇಗುರ್ ಜಗದೀಶ್, ಎಚ್.ರೇಣುಕಾ ರಾಧ್ಯ, ರಸುಲ್ ಖಾನ್ ಸೇರಿದಂತೆ 40ಕ್ಕೂ ಹೆಚ್ಚು ವಿವಿಧ ಸಂಘಟನೆ ಮುಖಂಡರು ಪಾಲ್ಗೊಂಡಿದ್ದರು.

Articles You Might Like

Share This Article