ಹಾಸನ, ಜ.3-ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಕುವೆಂಪು ನಗರದ ಕೋರಿಯರ್ ಕಚೇರಿಯಲ್ಲಿ ಸಂಭವಿಸಿದ ಮಿಕ್ಸ್ ಸ್ಫೋಟ ಪ್ರಕರಣ ಸಂಬಂಧ ಆರೋಪಿ ಅನೂಪ್ ಕುಮಾರ್(42)ನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಆರೋಪಿ ಅನೂಪ್ಕುಮಾರ್ ಬಗ್ಗೆ ವಸಂತಾ ಅವರು ನೀಡಿದ ಹೇಳಿಕೆ ಮೇರೆಗೆ ತನಿಖೆ ಕೈಗೊಂಡು ಇದೀಗ ಅನೂಪ್ ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜನವರಿ 7ರವರೆಗೆ ಪ್ರಕರಣ ಕುರಿತು ತನಿಖೆಗಾಗಿ ಪೊಲೀಸ್ರ ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.
ಇಂದಿನಿಂದ ಮತ್ತೆ ಆರಂಭವಾದ ಭಾರತ್ ಜೋಡೋ ಯಾತ್ರೆ
ಬೆಂಗಳೂರಿನಲ್ಲಿ ಅನೂಪ್ ಕುಮಾರ್ ನನ್ನು ಬಂಧಿಸಲಾಗಿದ್ದು ಮಿಕ್ಸಿ ಯಲ್ಲಿ ಡೆಟೋನೇಟರ್ ಅಳವಡಿಸಲು ಸಹಕರಿಸಿದವರು ಯಾರು, ಡೆಟೋನೇಟರ್ ಸರಬರಾಜು ಮಾಡಿದವರು ಯಾರು, ಕೇಂದ್ರ ಕೊರಿಯರ್ ನಲ್ಲಿ ಸ್ಕ್ಯಾನ್ ಮಾಡದೆ ಮಿಕ್ಸಿ ಹಾಸನಕ್ಕೆ ತಲುಪಿದ್ದು ಹೇಗೆ ಹಾಗೂ ಇದಕ್ಕೆ ಸಹಕಾರ ನೀಡಿದ ಸ್ನೇಹಿತರನ್ನು ಪತ್ತೆಹಚ್ಚಿ ಸೆರೆಹಿಡಿಯಲು ಮಾಹಿತಿಯನ್ನು ಅನೂಪ್ ಬಂಧನ ಅವಧಿಯಲ್ಲಿ ಹೇಳಿಕೆ ಪಡೆದು ಎಲ್ಲಾ ಆಯಾಮದಿಂದ ತನಿಖೆ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ಮೆಟ್ರೋಮನಿ ಖಾತೆ ತೆರೆದು ಇನ್ನು ಎಷ್ಟು ಮಹಿಳೆಯರಿಗೆ ಇದೇ ರೀತಿ ಕಿರುಕುಳ ನೀಡಿರಬಹುದು ಮತ್ತು ಅಷ್ಟೊಂದು ಹಣ ಮತ್ತು ನಕಲಿ ಚಿನ್ನದ ಗಟ್ಟಿ ಸಂಗ್ರಹದ ಹಿಂದಿನ ಅಸಲಿ ಮಾಹಿತಿ ಅನೂಪ್ ವಿಚಾರಣೆಯಿಂದ ಲಭ್ಯವಾಗಲಿದೆ.
ಮಹಿಳೆಯರಿಗೆ ದೆಹಲಿ ಸುರಕ್ಷಿತವಲ್ಲ ಎಂಬ ಮತ್ತೊಮ್ಮೆ ಸಾಬೀತು
ಈ ಪ್ರಕರಣದಲ್ಲಿ ಅನೂಪ್ ವಿಚ್ಛೇದಿತ ಮಹಿಳೆ ವಸಂತಾ ಅವರಿಗೆ ಕಿರುಕುಳ ನೀಡಲು ನಿಜವಾದ ಕಾರಣ ಮತ್ತು ಅನೂಪ್ ಮೇಲಿನ ಈಕೆಯ ಆರೋಪ ಸತ್ಯಾಸತ್ಯತೆಯ ಬಗೆಗಿನ ಗೊಂದಲಕ್ಕೆ ಅನೂಪ್ನ ಹೇಳಿಕೆಯಿಂದ ತೆರೆಬೀಳಲಿದೆ.
Hassan, Mixer grinder, explodes, accused arrested,