ಹಾಸನಾಂಬೆಯ ಆಭರಣ ಖಜಾನೆಯಿಂದ ದೇಗುಲಕ್ಕೆ ಹಸ್ತಾಂತರ

Social Share

ಹಾಸನ,ಅ.11- ಜಿಲ್ಲೆಯ ಅಧಿ ದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೇವಿಯ ಆಭರಣಗಳನ್ನು ಸಾಲಗಾಮೆ ರಸ್ತೆಯ ಜಿಲ್ಲಾ ಖಜಾನೆಯಿಂದ ಪಲ್ಲಕ್ಕಿಯಲ್ಲಿ ಇರಿಸಿ ಬೆಳ್ಳಿ ರಥದಲ್ಲಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು.

ತಹಶೀಲ್ದಾರ್ ನಟೇಶ್ ಸಮ್ಮುಖದಲ್ಲಿ ಖಜಾನೆಯಿಂದ ಒಡವೆ ಪೆಟ್ಟಿಗೆಗಳನ್ನು ಹೊರ ತಂದು ಪುಷ್ಪಾಲಂಕೃತ ಅಡ್ಡ ಪಲ್ಲಕ್ಕಿ ಮೇಲೆ ಇಟ್ಟು ಪೂಜೆ ಸಲ್ಲಿಸಲಾಯಿತು. ಸಂಪ್ರದಾಯಂತೆ ಮಡಿವಾಳರು ಪಂಜು ಮತ್ತು ಮಹಿಳೆಯರು ಆರತಿ ಬೆಳಗಿದರು. ಭಕ್ತರು ಹಾಸನಾಂಬೆಗೆ ಜೈಕಾರ ಹಾಕಿದರು.

ಬಿಗಿ ಪೊಲೀಸ್ ಬಂದೋ ಬಸ್‍ನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳ ವಾದ್ಯಗಳ ಸಮೇತ ಮೆರವಣಿಗೆ ಮಾಡುವ ಮೂಲಕ ರಥದಲ್ಲಿ ಆಭರಣವನ್ನು ಹಾಸನಾಂಬೆ ದೇಗುಲಕ್ಕೆ ತರಲಾಯಿತು. ಸಂಪ್ರದಾಯದಂತೆ ಅಶ್ವಯುಜ ಮಾಸದ ಮೊದಲ ಗುರುವಾರವಾದ ಅ.13 ರಂದು ಮಧ್ಯಾಹ್ನ 12.30ಕ್ಕೆ ಬಾಗಿಲು ತೆರೆಯಲಾಗುತ್ತದೆ. ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಅದೇವತೆ ಜಾತ್ರಾ ಮಹೋತ್ಸವ ಈ ಬಾರಿ ಅ.13 ರಿಂದ 27ರವರೆಗೆ ನಡೆಯುತ್ತಿದೆ.

Articles You Might Like

Share This Article